ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆಗಳ ಕೊರತೆಗೆ ರಾಜ್ಯಗಳೇ ಹೊಣೆ: ಡಾ. ವಿಕೆ ಪೌಲ್

|
Google Oneindia Kannada News

ನವದೆಹಲಿ, ಮೇ 28:ಕೊರೊನಾ ಲಸಿಕೆಗಳಲ್ಲಿ ಕೊರತೆ ಉಂಟಾದರೆ ರಾಜ್ಯಗಳೇ ಹೊಣೆ ಎಂದು ಭಾರತದ ಕೋವಿಡ್ 19 ಸಲಹೆಗಾರ ಡಾ. ವಿಕೆ ಪೌಲ್ ಹೇಳಿದ್ದಾರೆ.

ಲಸಿಕೆ ಸರಬರಾಜು ಜನವರಿಯಿಂದ ಏಪ್ರಿಲ್‌ವರೆಗೆ ಕೇಂದ್ರ ಸರ್ಕಾರವು ಉತ್ತಮವಾಗಿ ನಿರ್ವಹಿಸಿತ್ತು ಆದರೆ ಮೇ ತಿಂಗಳಲ್ಲಿ ಸರಬರಾಜು ಹೆಚ್ಚಿರಲಿಲ್ಲ ಎಂದರು.

ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್‌ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು? ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್‌ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು?

ದೇಶದಲ್ಲಿ ಲಸಿಕೆ ಉತ್ಪಾದನಾ ಸಾಮರ್ಥ್ಯ ಮತ್ತು ವಿದೇಶದಿಂದ ನೇರವಾಗಿ ಲಸಿಕೆಗಳನ್ನು ಖರೀದಿಸುವಲ್ಲಿನ ತೊಂದರೆಗಳು ಏನೆಂಬುದು ರಾಜ್ಯಗಳಿಗೆ ಚೆನ್ನಾಗಿ ತಿಳಿದಿದೆ ಎಂದರು.

Vaccine Shortfall States Are Directly Responsible, Says Government Adviser V.K. Paul

ಲಸಿಕೆಗಳ ಲಭ್ಯತೆಯನ್ನು ವಿಸ್ತರಿಸಲು ರಾಜ್ಯಗಳು ಕೇಂದ್ರವನ್ನು ಒತ್ತಾಯಿಸಿವೆ ಎಂದು ಭಾರತದ ಕೋವಿಡ್ 19 ಸಲಹೆಗಾರ ಡಾ. ವಿಕೆ ಪೌಲ್ ಹೇಳಿದ್ದಾರೆ. ಲಸಿಕೆ ತಯಾರಕರಿಗೆ ಹಣ ಒದಗಿಸುವುದು, ಅನುಮೋದನೆ ವೇಗಗೊಳಿಸುವುದು, ಉತ್ಪಾದನೆ ವೇಗ ಹೆಚ್ಚಿಸುವುದು ಮತ್ತು ವಿದೇಶಿ ಲಸಿಕೆಗಳನ್ನು ಭಾರತಕ್ಕೆ ತರುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಕೇಂದ್ರ ಸರ್ಕಾರ ಮಾಡಿದೆ.

ಕೇಂದ್ರ ಖರೀದಿಸಿದ ಲಸಿಕೆಗಳನ್ನು ಜನರಿಗೆ ಉಚಿತವಾಗಿ ನೀಡಲು ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ, ಆದರೆ ರಾಜ್ಯಗಳು ತಾವಾಗಿಯೇ ನೇರವಾಗಿ ಲಸಿಕೆಗಳನ್ನು ಖರೀದಿಸಲು ಮುಂದಾಗಿವೆ.

ಮೂರು ತಿಂಗಳಲ್ಲಿ ಮುಂಜೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಹಲವರಿಗೆ ಲಸಿಕೆ ಹಾಕುವಲ್ಲಿ ವಿಫಲವಾಗಿದ್ದರೂ ಕೂಡ ಸಾರ್ವಜನಿಕರಿಗೆ ಲಸಿಕೆ ಹಾಕಲು ಮುಂದಾಗಿದ್ದವು.

ಮೇ ತಿಂಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಯೋಜನೆ ಶುರುವಾಗಿದೆ, ಕೋವಿನ್ ಮಾಹಿತಿ ಪ್ರಕಾರ ಏಪ್ರಿಲ್ ಮೊದಲ ವಾರದಲ್ಲಿ 2.5 ಕೋಟಿ ಕೊರೊನಾ ಲಸಿಕೆ ಒದಗಿಸಲಾಗಿದೆ.

ಮೇ ಮೊದಲ ವಾರದಲ್ಲಿ 1.2 ಕೋಟಿ ಲಸಿಕೆ ನೀಡಲಾಗಿದೆ, ಮೇ 22-28ರ ಅವಧಿಯಲ್ಲಿ 87 ಲಕ್ಷ ಕೊರೊನಾ ಲಸಿಕೆ ಒದಗಿಸಲಾಗಿದೆ. ದೇಶವು ಅಕ್ಟೋಬರ್ ವೇಳೆಗೆ 10 ಕೋಟಿ ಕೋವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಅಕ್ಟೋಬರ್ ವೇಳೆಗೆ ಭಾರತ್ ಬಯೋಟೆಕ್ ಪ್ರತಿ ತಿಂಗಳು 1 ಕೋಟಿ ಲಸಿಕೆಯ ಉತ್ಪಾದನೆ ಗುರಿ ಹೊಂದಿದೆ ಎಂದು ತಿಳಿಸಿದರು.

English summary
The States had coerced the Centre into expanding the availability of vaccines despite being aware of being inadequately prepared Says India’s top COVID-19 adviser Dr. V.K. Paul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X