ಗೋಮಾಂಸ ಸಂಗ್ರಹ: ಇಖ್ಲಾಕ್ ಕುಟುಂಬಕ್ಕೆ 45 ಲಕ್ಷ ಪರಿಹಾರ
ಲಕ್ನೋ, ಅಕ್ಟೋಬರ್,05 : ಗೋಮಾಂಸ ಸಂಗ್ರಹಣೆ ಆರೋಪದ ಮೇಲೆ ಹತ್ಯೆಗೀಡಾದ ಮಹಮ್ಮದ್ ಇಖ್ಲಾಕ್ ಕುಟುಂಬಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ 45 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಉತ್ತರಪ್ರದೇಶದ ದಾದ್ರಿಯ ಬಿಸಾದ ಗ್ರಾಮದಲ್ಲಿದ್ದ ಮಹಮ್ಮದ್ ಇಖ್ಲಾಕ್ ನ ಸಂಬಂಧಿಕರನ್ನು ಭಾನುವಾರ ಭೇಟಿಮಾಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಾಂತ್ವನದ ಮಾತುಗಳಾಡಿ, ಹಲ್ಲೆಗೀಡಾದ ಇಬ್ಬರು ಸಹೋದರರಿಗೂ ತಲಾ 5 ಲಕ್ಷ ವಿತರಿಸಲಾಗುವುದು ಎಂದು ತಿಳಿಸಿದರು.[ಜಮ್ಮು ಮತ್ತು ಕಾಶ್ಮೀರದಲ್ಲಿ ದನದ ಮಾಂಸ ಮಾರಾಟ ಬ್ಯಾನ್!]

ಹಲ್ಲೆ ನಡೆಸಿದವರನ್ನು ಬಂಧಿಸಿ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯ ಪಡಿಸಿದ ಇಖ್ಲಾಕ್ ಕುಟುಂಬಕ್ಕೆ ಸಮಾಧಾನಿಸಿದ ಅಖಿಲೇಶ್, 'ಈ ದುಷ್ಕೃತ್ಯ ಎಸಗಿದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಈಗಾಗಲೇ ಬಂಧಿತರಾದ 8 ಮಂದಿಗೆ ಶಿಕ್ಷೆ ವಿಧಿಸಲಾಗುತ್ತದೆ. ಮಿಕ್ಕ ಅಪರಾಧಿಗಳನ್ನು ಕೂಡಲೇ ಬಂಧಿಸಲಾಗುತ್ತದೆ' ಎಂದರು.
ಈ ಘಟನೆ ಕೋಮುರೂಪ ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 'ದಾದ್ರಿ ಪ್ರಕರಣಕ್ಕೆ ರೂಪ ಕೊಡುವುದು ಬೇಡ. ಎರಡು ಸಮುದಾಯದ ನಡುವೆ ದ್ವೇಷ ಭಾವನೆ ಬೆಳೆಸುವುದು ಸರಿಯಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.[ಮಹಾಭಾರತದಲ್ಲಿ ಗೋಮಾಂಸದ ಬಗ್ಗೆ ಎಲ್ಲಿ ಹೇಳಿದ್ದಾರೆ?]
ಏನಿದು ಘಟನೆ :
ಉತ್ತರ ಪ್ರದೇಶದ ದಾದ್ರಿಯ ಬಿಸದಾ ಗ್ರಾಮದ ಮಹಮ್ಮದ್ ಇಖ್ಲಾಕ್ ಗೋ ಮಾಂಸ ಸಂಗ್ರಹಣೆಯಲ್ಲಿ ತೊಡಗಿದ್ದಾನೆ ಎಂದು ಆರೋಪಿಸಿ ಉದ್ರಿಕ್ತ ಗುಂಪೊಂದು ಕಳೆದ ತಿಂಗಳು ಆತನನ್ನು ಕೊಲೆ ಮಾಡಿತ್ತು. ಇಖ್ಲಾಕ್ ಮಗನಾದ ದಾನೀಶ್ ಮೇಲೆಯೂ ಹಲ್ಲೆ ನಡೆದ ವೇಳೆಯಲ್ಲಿ ಮೆದುಳಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಆತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇಖ್ಲಾಕ್ ನ ಸಹೋದರರಿಗೂ ಗಂಭೀರ ಗಾಯಗಳಾಗಿವೆ.












Click it and Unblock the Notifications