ಹಿಪ್ ಹಿಪ್ ಹುರ್ರೇ... 17 ದಿನಗಳ ನಂತರ ಸಾವು ಗೆದ್ದು ಬಂದ ಧೀರರು!
ಸಣ್ಣದೊಂದು ಸುರಂಗ ಮಾರ್ಗದಲ್ಲಿ 17 ದಿನದಿಂದ 41 ಬಡ ಕಾರ್ಮಿಕರು ಎದುರಿಸುತ್ತಿದ್ದ ಸಾವು & ಬದುಕಿನ ಹೋರಾಟ ಮುಗಿದಿದೆ. ಇಡೀ ದೇಶಕ್ಕೆ ದೇಶವೆ ಮಾಡಿದ್ದ ಪ್ರಾರ್ಥನೆಯ ಫಲ ಹಾಗೂ ನೂರಾರು ಸುರಂಗ ತಜ್ಞರ ಶ್ರಮದಿಂದಾಗಿ 41 ಕಾರ್ಮಿಕರು 17 ದಿನದ ಬಳಿಕ ಕೂಡ ಸಾವು ಗೆದ್ದು ಹೊರ ಬಂದಿದ್ದಾರೆ. ಅವರೆಲ್ಲ ಇಂದು ಒಬ್ಬೊಬ್ಬರಾಗಿ ಸುರಂಗದಿಂದ ಹೊರಗೆ ಬಂದು, ಮತ್ತೊಂದು ಜನ್ಮ ಪಡೆದಿದ್ದಾರೆ. ಹಾಗಾದ್ರೆ ಹೇಗಿತ್ತು ಈ ಸಾವಿನ ಜೊತೆ ಸರಸ?
17 ದಿನಗಳ ಹಿಂದೆ ಅಂದ್ರೆ ನ. 12 ರಂದು, ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿ ಇದ್ದ ಸಿಲ್ಕ್ಯಾರಾ ಸುರಂಗ ಕುಸಿತವಾಗಿತ್ತು. ಆದ್ರೆ ದಿಢೀರ್ ಹೀಗೆ ಸುರಂಗ ಕುಸಿತ ಕಂಡ ಕಾರಣ ಅದರೊಳಗೆ ಸಿಲುಕಿದ್ದ 41 ಕಾರ್ಮಿಕರು ನರಳಾಡಿಬಿಟ್ಟರು.

ಹೀಗಾಗಿ ಅವರ ರಕ್ಷಣೆಗಾಗಿ ಕಳೆದ 17 ದಿನದಿಂದ ಜಗತ್ತಿನ ವಿವಿಧ ದೇಶಗಳಿಂದ ಬಂದಿದ್ದ, ತಜ್ಞರ ಸಹಾಯ ಪಡೆದು ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಕಾರ್ಯಾಚರಣೆ ಯಶಸ್ವಿಯಾಗಿ ನಡೆದು, 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರಗಡೆ ತರುವ ಕಾರ್ಯ ನಡೆಯುತ್ತಿದೆ. ಹೀಗೆ ಇಡೀ ದೇಶವೇ ಈ ಕ್ಷಣಕ್ಕೆ ಸಾಕ್ಷಿಯಾಗಿದೆ.
ಹೇಗಿತ್ತು ಗೊತ್ತಾ ಸಾವಿನ ಜೊತೆ ಸರಸ?
41 ಜನರ ಜೀವ ಉಳಿಸಲು ಹಲವು ತಂತ್ರ ಪ್ರಯೋಗ ಮಾಡಿದ್ದರು ತಜ್ಞರು. ಕಾರ್ಮಿಕರನ್ನ ಉಳಿಸಲು ರಕ್ಷಣಾ ತಂಡಗಳು ಅಂತಿಮವಾಗಿ ಬಂಡೆ ತೆರವುಗೊಳಿಸಿದ್ದವು. ಇಷ್ಟೆಲ್ಲಾ ಮಾಡಿ, ಬಡ ಕಾರ್ಮಿಕರ ಜೀವ ಉಳಿಸಲು ಯತ್ನಿಸಿದರೂ ಅದು ಪ್ರಯೋಗಕ್ಕೆ ಬಂದಿರಲಿಲ್ಲ. ಇದೇ ಕಾರಣಕ್ಕೆ 'ರ‍್ಯಾಟ್ ಹೋಲ್' ತಂತ್ರಜ್ಞಾನದ ಮೊರೆ ಹೋಗಿ ರಂಧ್ರ ಕೊರೆದು ಒಟ್ಟಾರೆ 41 ಕಾರ್ಮಿಕರನ್ನು ರಕ್ಷಿಸಿ ಹೊರಗೆ ಕರೆತರಲಾಗಿದೆ. ಹೈಟೆಕ್ ಯಂತ್ರಗಳು ಅಥವಾ ಆಗರ್‌ಗಳು ಸುಮಾರು 60 ಮೀಟರ್ ಬಂಡೆಯನ್ನ ಕೊರೆಯಲು ವಿಫಲವಾದ ನಂತರ, 'ರ‍್ಯಾಟ್ ಹೋಲ್' ತಂತ್ರದ ಮೂಲಕ ಸುರಂಗ ಕೊರೆದು 41 ಜೀವಗಳನ್ನು ಇದೀಗ ಉಳಿಸಲಾಗಿದೆ.
सिलक्यारा टनल में चल रहे रेस्क्यू ऑपरेशन में बड़ी सफलता मिली है, पाइप पुशिंग का कार्य मलबे के आर-पार हो चुका है। अब श्रमिकों को सुरक्षित बाहर निकालने की तैयारी शुरू कर दी गई है। pic.twitter.com/wCMZrWSRSn
— Pushkar Singh Dhami (@pushkardhami) November 28, 2023
'ರ‍್ಯಾಟ್ ಹೋಲ್' ಅಂದ್ರೆ ಏನು?
ಈ ಐಸಿಹಾಸಿಕ ಕಾರ್ಯಾಚರಣೆಯನ್ನು, ಸಾವಿನ ಜೊತೆ ಸರಸ ಅಂತಲೇ ಕರೆಯಲಾಗಿತ್ತು. ಹೀಗಾಗಿಯೇ ಮೈಯೆಲ್ಲಾ ಕಣ್ಣಾಗಿಸಿಕೊಂಡು 41 ಕಾರ್ಮಿಕರಿಗಾಗಿ ವಿಧ ವಿಧದ ಐಡಿಯಾ ಮಾಡಿ ಕಾರ್ಯಾಚರಣೆ ಮುನ್ನಡೆಸಲಾಗಿತ್ತು. ಇದೀಗ ಅಂತಿಮವಾಗಿ 'ರ‍್ಯಾಟ್ ಹೋಲ್'ಗೆ ಜೈ ಎನ್ನಲಾಗಿತ್ತು. 'ರ‍್ಯಾಟ್ ಹೋಲ್' ಮೈನಿಂಗ್ ತಂತ್ರವನ್ನು, ಭಾರತದಲ್ಲಿ ಈಗಾಗಲೇ ಬ್ಯಾನ್ ಮಾಡಿದ್ದರೂ ಇದೇ ತಂತ್ರದ ಮೂಲಕ 41 ಕಾರ್ಮಿಕರ ಜೀವವನ್ನ ಉಳಿಸಿದೆ ತಜ್ಞರ ತಂಡ. 41 ಕಾರ್ಮಿಕರನ್ನು ರಕ್ಷಣೆ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ಖುಷಿಯಾಗಿದ್ದು, ರಕ್ಷಣೆ ಮಾಡಿ ಹೊರಗೆ ಕರೆತಂದ ಕಾರ್ಮಿಕರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಹಾವು-ಏಣಿ ಆಟ ನಡೆದಿತ್ತು
ಒಟ್ನಲ್ಲಿ ಸಾವು & ಬದುಕಿನ ಹಾವು-ಏಣಿ ಆಟದಲ್ಲಿ ಕಾರ್ಮಿಕರು ಬದುಕಿ ಬಂದಿದ್ದಾರೆ. ಈ ದುರ್ಘಟನೆ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಅಲ್ಲದೆ ಭಾರತದ ಮೇಲೆ, ಜಗತ್ತಿನ ಕಣ್ಣು ನೆಡುವಂತೆ ಮಾಡಿತ್ತು. ಇದೀಗ ಭಾರತ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ, ಬಡ ಕಾರ್ಮಿಕರ ಜೀವ ಉಳಿಸಿದೆ. ಈ ಮೂಲಕವೇ ಭಾರತದ ತಂತ್ರಜ್ಞಾನ ಶಕ್ತಿ ಕೂಡ ಜಗತ್ತಿಗೆ ಅರಿವಾಗಿದೆ ಎನ್ನಬಹುದು.

ಕಾರ್ಮಿಕರಿಗೆ ರಂಧ್ರದಲ್ಲೇ ಊಟ
ಮತ್ತೊಂದು ಕಡೆ ಕಾರ್ಮಿಕರ ಕುಟುಂಬ ಸದಸ್ಯರು, ಸ್ಥಳದಲ್ಲೇ ತಮ್ಮ ಕುಟುಂಬ ಸದಸ್ಯರ ಆಗಮನಕ್ಕೆ ಕಾಯುತ್ತಿದ್ದರು. ಅಲ್ಲದೆ ಪ್ರಾರ್ಥನೆ ಕೂಡ ಸಲ್ಲಿಸಿದ್ದರು. ಅವರ ಪ್ರಾರ್ಥನೆಗೂ ದೇವರು ಅಸ್ತು ಎಂದಿದ್ದು, ಎಲ್ಲರ ಜೀವ ಉಳಿದಿದೆ. ಇಷ್ಟು ದಿನ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಿಗೆ, ಸಣ್ಣ ಸಣ್ಣ ರಂಧ್ರದ ಮೂಲಕ ಆಹಾರ ಸರಬರಾಜು ಮಾಡಲಾಗಿತ್ತು. ಈ ಮೂಲಕ ಕಾರ್ಮಿಕರ ಆರೋಗ್ಯದ ಮೇಲೂ ನಿಗಾ ಇಡಲಾಗಿತ್ತು. ಅವರು ಹೇಗಿದ್ದಾರೆ? ಎನ್ನುವ ಬಗ್ಗೆ ಕ್ಷಣಕ್ಷಣಕ್ಕೂ ಕೇಂದ್ರ ತಂಡಗಳು ಮಾಹಿತಿ ಪಡೆಯುತ್ತಿದ್ದವು. ತಜ್ಞರು ಕೂಡ ಕಾರ್ಯಾಚರಣೆಗಾಗಿ ಹಗಲು-ರಾತ್ರಿ ಶ್ರಮ ವಹಿಸಿದ್ದರು.












Click it and Unblock the Notifications