ರಾಹುಲ್‌ ಗಾಂಧಿಗೆ ತನ್ನ ಆಸ್ತಿ ವಿಲ್ ಬರೆದ ಉತ್ತರಾಖಂಡ ಮಹಿಳೆ! ಕಾರಣವೇನು?

ಡೆಹ್ರಾಡೂನ್, ಏಪ್ರಿಲ್ 05: ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿಗೆ ತನ್ನ ಆಸ್ತಿಯನ್ನು ಉತ್ತರಾಖಂಡದ ಮಹಿಳೆಯೊಬ್ಬರು ವರ್ಗಾವಣೆ ಮಾಡಿದ್ದಾರೆ. ಡೆಹ್ರಾಡೂನ್‌ನ ಹಿರಿಯ ನಾಗರಿಕರಾದ ಪುಷ್ಪಾ ಮುಂಜಿಯಲ್ ಅವರು ಸೋಮವಾರ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ಎಲ್ಲಾ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವರ್ಗಾಯಿಸುವ ವಿಲ್ (ವಿಲ್) ಅನ್ನು ಸಲ್ಲಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ನ ಮಹಾನಗರ ಪಾಲಿಕೆ ಅಧ್ಯಕ್ಷ ಲಾಲ್‌ಚಂದ್‌ ಶರ್ಮಾ ಮಾತನಾಡಿ, "ರಾಹುಲ್ ಗಾಂಧಿ ಹೆಸರಿಗೆ ತನ್ನ ಆಸ್ತಿಯನ್ನು ವರ್ಗಾವಣೆ ಮಾಡುವ ವಿಲ್ ಅನ್ನು ಬರೆದ ಬಳಿಕ ಆಸ್ತಿಯ ಪತ್ರಗಳನ್ನು ಮಹಿಳೆ ಕಾಂಗ್ರೆಸ್ ನಾಯಕರಿಗೆ ಸಲ್ಲಿಸಿದರು. ಪತ್ರವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಮುಂಜಿಯಾಲ್ ಅವರು ರಾಹುಲ್‌ ಗಾಂಧಿಯವರ ವಿಚಾರಗಳಿಂದ ಪ್ರಭಾವಿತಳಾಗಿದ್ದೇನೆ ಎಂದು ಹೇಳಿದರು," ಎಂದು ತಿಳಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರೀ ಸದ್ದು ಮಾಡುತ್ತಿದ್ದು, ಹಲವಾರು ಕಾಂಗ್ರೆಸ್ ಬೆಂಬಲಿಗರು ಪುಷ್ಪಾ ಮುಂಜಿಯಲ್ ಅವರನ್ನು ಹಾಡಿ ಹೊಗಳಿದ್ದಾರೆ. ಇನ್ನು ಹಲವಾರು ಕಾಂಗ್ರೆಸ್‌ ಬೆಂಬಲಿಗರು ರಾಹುಲ್ ಗಾಂಧಿ ದೇಶದ ಮುಂದಿನ ನಾಯಕತ್ವ ಎಂದು ಹೇಳಿಕೊಂಡಿದ್ದಾರೆ.

Uttarakhand Woman Transfers Her Property To Rahul Gandhi, Know Reason

ರಾಹುಲ್ ಗಾಂಧಿಗೆ ಉತ್ತರಾಖಂಡ ಮಹಿಳೆ ಆಸ್ತಿ ವರ್ಗಾಯಿಸಿದ್ದು ಯಾಕೆ?

"ಪುಷ್ಪಾ ಮುಂಜಿಯಾಲ್ ಅವರು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಈ ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ರಾಷ್ಟ್ರದ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಅವರು ಇದರಿಂದ ತುಂಬಾ ಪ್ರಭಾವಿತರಾಗಿದ್ದಾರೆ ಎಂದು ಕೂಡಾ ಹೇಳಿದ್ದಾರೆ. ರಾಹುಲ್‌ ಗಾಂಧಿಯವರ ವಿಚಾರಗಳಿಂದ ಪ್ರಭಾವಿತಳಾಗಿದ್ದೇನೆ. ಆದ್ದರಿಂದ ಈ ಆಸ್ತಿಯನ್ನು ಅವರ ಹೆಸರಿಗೆ ಮಾಡಲು ವಿಲ್‌ ಮಾಡಿಸಿದ್ದೇನೆ ಎಂದು ಕಾರಣ ತಿಳಿಸಿದ್ದಾರೆ," ಎಂದು ಕಾಂಗ್ರೆಸ್‌ನ ಮಹಾನಗರ ಪಾಲಿಕೆ ಅಧ್ಯಕ್ಷ ಲಾಲ್‌ಚಂದ್‌ ಶರ್ಮಾ ಮಾಹಿತಿ ನೀಡಿದ್ದಾರೆ.

Uttarakhand Woman Transfers Her Property To Rahul Gandhi, Know Reason

ಪುಷ್ಪಾ ಮುಂಜಿಯಾಲ್ ಅವರು ತಮ್ಮ ಆಸ್ತಿಯನ್ನು ಮಾಜಿ ರಾಜ್ಯಾಧ್ಯಕ್ಷ ಪ್ರೀತಮ್ ಸಿಂಗ್ ಅವರ ನಿವಾಸದಲ್ಲಿ ರಾಹುಲ್ ಗಾಂಧಿಗೆ ವಿಲ್ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+