Uttarakhand Earthquake: ಪಿಥೋರಗಢನಲ್ಲಿ 3.2 ತೀವ್ರತೆ ಭೂಕಂಪ, ಜನ ಆತಂಕ
ನವದೆಹಲಿ, ಜುಲೈ 24: ಮಣಿಪುರ, ರಾಜಸ್ತಾನ ಬೆನ್ನಲ್ಲೆ ಉತ್ತರಾಖಂಡ್‌ನ ಪಿಥೋರಗಢದಲ್ಲಿ ಭಾನುವಾರ ಸಂಜೆ ಭೂಕಂಪನದ ಅನುಭವ ಆಗಿದೆ. 3.2ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಪಿಥೋರಗಢದಲ್ಲಿ ಭಾನವಾರ ಸಂಜೆ 6.34 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ (Earthquake) ಅನುಭವ ಆಗಿದ್ದು, ಜನರ ಆತಂಕಕ್ಕೀಡಾದರು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ರಿಕ್ಟರ್ ಮಾಪಕದಲ್ಲಿ 3.2ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಭೂಕಂಪನವು ಭೂಮಿಯ ಒಳಗೆ 5 ಕಿಲೋಮೀಟರ್ ಆಳದಲ್ಲಿ ಸಂಬವಿಸಿದೆ ಎಂದು ಕೇಂದ್ರವು ತಿಳಿಸಿದೆ ಎಂದು ಎಎನ್ಐ ವರದಿ ಮಾಡಿದೆ.

ಈ ಭೂಕಂಪನದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಇನ್ನಿತರ ಹಾನಿ ಸಂಭವಿಸಿಲ್ಲ. ಭೂಮಿ ಕಂಪಿಸಿದ್ದು ಅನುಭವಕ್ಕೆ ಬರುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವ ಹೊತ್ತು ಮನೆಒಳಗೆ ಹೋಗಲು ಭಯಪಟ್ಟು ಮನೆ ಹೊರಗೇ ನಿಂತ ದೃಶ್ಯ ಕಂಡು ಬಂದಿದೆ.
ಇಲ್ಲಿ ಭೂಕಂಪ ಇದೇ ಮೊದಲೇನಲ್ಲ. ಈ ಹಿಂದೆ ಇದೇ ಉತ್ತರಾಖಂಡದ ಪಿಥೋರಗಢದಲ್ಲಿ ಮೇ 11ರಂದು ಬೆಳಗ್ಗೆ 3.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮೇ 8 ರಂದು ಬಾಗೇಶ್ವರ ಜಿಲ್ಲೆಯಲ್ಲಿ 2.5 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಅದೇ ರೀತಿಯಾಗಿ ಮೇ 5 ಮತ್ತು 7 ರಂದು ಸಹ ಭೂಕಂಪ ಸಂಭವಿಸಿತ್ತು.
ಕಳೆದ ವಾರ ಮಣಿಪುರದಲ್ಲಿ ಬೆಳಂಬೆಳಗ್ಗೆ ಭೂಮಿ ಕಂಪನಿಸಿತ್ತು. ಇದರ ಬೆನ್ನಲ್ಲೆ ಕೇವಲ ಅರ್ಧ ಗಂಟೆ ಅವಧಿಯಲ್ಲಿ ರಾಜಸ್ತಾನದ ಜೈಪುರನಲ್ಲಿ ಮೂರು ಪ್ರತ್ಯೇಕ ಕಡೆಗಳಲ್ಲಿ ಭೂಕಂಪನ ಸಂಭವಿಸಿತ್ತು. ಅಂದು ರಾಜ್ಯ ಮೂರು ಭೂಕಂಪನಕ್ಕೆ ಸಾಕ್ಷಿಯಾಗಿದ್ದು, ಜನರು ಆತಂಕಗೊಂಡಿದ್ದರು.












Click it and Unblock the Notifications