ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಉತ್ತರಕಾಶಿಯಲ್ಲಿ 3.1 ತೀವ್ರತೆ ಭೂಕಂಪನ

|
Google Oneindia Kannada News

ಉತ್ತರಕಾಶಿ, ಡಿಸೆಂಬರ್ 19: ಉತ್ತರಾಖಂಡದ ಉತ್ತರಕಾಶಿಯಲ್ಲಿ ಸೋಮವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, 3.1 ತೀವ್ರತೆಯ ಕಂಪನವು 1:50ರ ಸುಮಾರಿಗೆ ಸಂಭವಿಸಿದೆ.

ಉತ್ತರಕಾಶಿಯಲ್ಲಿ ಸಂಭವಿಸಿದ ಭೂಕಂಪನದ ಕೇಂದ್ರಬಿಂದುವು ಉತ್ತರಕಾಶಿಯ ಪೂರ್ವ-ಆಗ್ನೇಯಕ್ಕೆ 24 ಕಿಮೀ ದೂರದಲ್ಲಿರುವ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ 5 ಕಿಮೀ ಆಳದಲ್ಲಿದೆ ಎಂದು ತಿಳಿದು ಬಂದಿದೆ.

ಕಳೆದ ನವೆಂಬರ್ 9ರಂದು ತೆಹ್ರಿ ಪ್ರದೇಶದಲ್ಲಿ ಸಂಭವಿಸಿದ 4.5 ತೀವ್ರತೆಯ ಭೂಕಂಪದಿಂದ ಉತ್ತರಾಖಂಡವು ಕೊನೆಯದಾಗಿ ಆಘಾತಕ್ಕೊಳಗಾಯಿತು. ಕಳೆದ ಒಂದು ದಶಕದಲ್ಲಿ ಗುಡ್ಡಗಾಡು ರಾಜ್ಯವು 700 ಸಣ್ಣ ಭೂಕಂಪಗಳಿಂದ ತತ್ತರಿಸಿದೆ. ವಿಶ್ವದ ಅತ್ಯಂತ ಭೂಕಂಪನಶೀಲವಾಗಿರುವ ಹಿಮಾಲಯದ ಬೆಲ್ಟ್‌ನಲ್ಲಿ ಒಂದು ದೊಡ್ಡ ಭೂಕಂಪದ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Uttarakhand: Magnitude 3.1 earthquake hits Uttarkashi

ಮೂರು ದಿನದ ಹಿಂದೆ ಹಿಮಾಚಲದಲ್ಲಿ ಕಂಪನ:

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ವೇಳೆಯಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಶುಕ್ರವಾರ ರಾತ್ರಿ 10.02ರ ಸುಮಾರಿಗೆ ಕಂಪನದ ಅನುಭವವಾಗಿದ್ದು, ಕಿನ್ನೌರ್‌ನ ನಾಕೋ ಬಳಿಯ ಚಾಂಗೊ ನಿಚ್ಲಾ ಭೂಕಂಪದ ಕೇಂದ್ರಬಿಂದು ಎಂದು ವಿಪತ್ತು ನಿರ್ವಹಣಾ ವಿಶೇಷ ಕಾರ್ಯದರ್ಶಿ ಸುದೇಶ್ ಮೊಕ್ತಾ ತಿಳಿಸಿದ್ದಾರೆ.

ಈ ಭೂಕಂಪದ ಆಳವು 5 ಕಿಮೀ ಉತ್ತರದಲ್ಲಿ 31.931 ಡಿಗ್ರಿ ಮತ್ತು ಪೂರ್ವದಲ್ಲಿ 78.638 ಡಿಗ್ರಿ ಎಂದು ಗೊತ್ತಾಗಿದೆ. ಈ ಕಂಪನ ಸಂಭವಿಸಿದ ಕೆಲವು ಸೆಕೆಂಡುಗಳಲ್ಲಿ ಜನರು ಆತಂಕಗೊಂಡಿದ್ದರು. ಭೂಮಿ ಕಂಪಿನಿಸ ಅನುಭವ ಆಗುತ್ತಿದ್ದಂತೆ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು.

English summary
Uttarakhand: Magnitude 3.1 earthquake hits Uttarkashi. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X