Uttarakhand Earthquake: ಉತ್ತರಾಖಂಡದಲ್ಲಿ 48 ಗಂಟೆಗಳಲ್ಲಿ ಎರಡನೇ ಬಾರಿ ಕಂಪಿಸಿದ ಭೂಮಿ: ಆತಂಕದಲ್ಲಿ ಜನ!
ಗುರುವಾರ ಮುಂಜಾನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದ್ದು ಜನ ಆತಂಕಗೊಂಡಿದ್ದಾರೆ. ಇಂದು ಬೆಳಗಿನ ಜಾವ 3:49ಕ್ಕೆ 5 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್‌ನಲ್ಲಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ಹಂಚಿಕೊಂಡಿದೆ.
ರಾಜ್ಯದಲ್ಲಿ 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ದಾಖಲಾದ ಎರಡನೇ ಭೂಕಂಪ ಇದಾಗಿದೆ. ಮಂಗಳವಾರ ಪಿಥೋರಗಢದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದೇ ದಿನ ನೇಪಾಳದಲ್ಲಿ ಸರಣಿ ನಾಲ್ಕು ಭೂಕಂಪಗಳು ಸಂಭವಿಸಿದೆ. ಅತ್ಯಂತ ಶಕ್ತಿಶಾಲಿ ಭೂಕಂಪದ ಕೇಂದ್ರಬಿಂದು ಉತ್ತರಾಖಂಡದ ಜೋಶಿಮಠದ ಆಗ್ನೇಯಕ್ಕೆ 206 ಕಿಮೀ ಮತ್ತು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 284 ಕಿಮೀ ಉತ್ತರದಲ್ಲಿದೆ.

ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಈ ಭೂಕಂಪದ ಕಂಪನದ ಅನುಭವವಾಗಿದೆ.
ಎನ್‌ಸಿಎಸ್‌ನ ಅಧಿಕಾರಿಯ ಪ್ರಕಾರ, ಮಂಗಳವಾರ ನೇಪಾಳದ ಭೂಕಂಪಗಳ ಅನುಕ್ರಮ ಹೀಗಿದೆ- ಪಶ್ಚಿಮ ನೇಪಾಳದಲ್ಲಿ ಮಧ್ಯಾಹ್ನ 2:25ರ ಸುಮಾರಿಗೆ 10 ಕಿಲೋಮೀಟರ್ ಆಳದಲ್ಲಿ 4.6 ತೀವ್ರತೆಯ ಭೂಕಂಪ ಆಯಿತು. ಇದರ ನಂತರ ಮಧ್ಯಾಹ್ನ 2:51 ಕ್ಕೆ 6.2 ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿದೆ. ತರುವಾಯ, ಅದೇ ಪ್ರದೇಶದಲ್ಲಿ 3.6 ಮತ್ತು 3.1 ತೀವ್ರತೆಯ ಎರಡು ಕಂಪನಗಳು ಕ್ರಮವಾಗಿ 15 ಕಿಮೀ ಮತ್ತು 10 ಕಿಮೀ ಆಳದಲ್ಲಿ ಮಧ್ಯಾಹ್ನ 3:06 ಮತ್ತು 3:19 ಕ್ಕೆ ಸಂಭವಿಸಿದವು.












Click it and Unblock the Notifications