DA Hike: ಸರ್ಕಾರಿ ನೌಕರರಿಗೆ ಭರ್ಜರಿ ತುಟ್ಟಿಭತ್ಯೆ ಹೆಚ್ಚಳ ಘೋಷಣೆ: ಸಂಪೂರ್ಣ ವಿವರ ತಿಳಿಯಿರಿ
ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8ನೇ ವೇತನ ಆಯೋಗಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ 8ನೇ ವೇತನ ಆಯೋಗವನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದರ ನಡುವೆ ಉತ್ತರಾಖಂಡದ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಸಾರ್ವಜನಿಕ ಸಂಸ್ಥೆಗಳು ಮತ್ತು ಉದ್ದಿಮೆಗಳ ನೌಕರರಿಗೆ ತುಟ್ಟಿಭತ್ಯೆ (ಡಿಎ) ಏರಿಕೆಗೆ ಅನುಮೋದನೆ ನೀಡಿದ್ದಾರೆ. ಈ ಘೋಷಣೆಯಿಂದ ಸರ್ಕಾರಿ ನೌಕರರಲ್ಲಿ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ಬಹುದಿನಗಳಿಂದ ಕಾದು ಕುಳಿತ್ತಿದ್ದ ಸರ್ಕಾರಿ ನೌಕರರಿಗೆ ಕೊನೆಗೂ ಸರ್ಕಾರ ಶುಭ ಸುದ್ದಿ ನೀಡಿದಂತಾಗಿದೆ.

ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಐದನೇ ಕೇಂದ್ರ ವೇತನ ಶ್ರೇಣಿಯಲ್ಲಿ ಸಂಬಳ ಪಡೆಯುವ ಸಾರ್ವಜನಿಕ ಸಂಸ್ಥೆಗಳ ಉದ್ಯಮಗಳ ಉದ್ಯೋಗಿಗಳಿಗೆ ಜನವರಿ 01, 2025 ರಿಂದ ಪ್ರಸ್ತುತ ತುಟ್ಟಿಭತ್ಯೆಯ ದರವನ್ನು 455% ಪ್ರತಿಶತದಿಂದ 466 %ಪ್ರತಿಶತಕ್ಕೆ ಹೆಚ್ಚಿಸಲು ಮತ್ತು ಆರನೇ ಕೇಂದ್ರ ವೇತನ ಶ್ರೇಣಿಯಲ್ಲಿ ಸಂಬಳ ಪಡೆಯುವ ಸಾರ್ವಜನಿಕ ಸಂಸ್ಥೆಗಳು ಅಥವಾ ಉದ್ಯಮಗಳ ಉದ್ಯೋಗಿಗಳಿಗೆ ಪ್ರಸ್ತುತ ತುಟ್ಟಿಭತ್ಯೆಯ ದರವನ್ನು 246% ಪ್ರತಿಶತದಿಂದ 252% ಪ್ರತಿಶತಕ್ಕೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು.
ಇನ್ನೂ ಈ ತುಟ್ಟಿಭತ್ಯೆ ಹೆಚ್ಚಳದಿಂದಾಗಿ (ಡಿಎ) ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ತಿಂಗಳಿಗೆ 1,200 ರಿಂದ 2,200 ರೂಪಾಯಿಗಳ ಆರ್ಥಿಕ ಲಾಭವಾಗಲಿದೆ. ಉದಾಹರಣೆಗೆ, 20,000 ರೂಪಾಯಿಗಳ ಮೂಲ ವೇತನ ಪಡೆಯುವ ನೌಕರನಿಗೆ 11% ಏರಿಕೆಯಿಂದ ಸುಮಾರು 2,200 ರೂಪಾಯಿಗಳ ಹೆಚ್ಚುವರಿ ಲಾಭವಾಗಲಿದೆ. ಈ ತುಟ್ಟಿಭತ್ಯೆ ಏರಿಕೆಯಿಂದ ಉತ್ತರಾಖಂಡದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಗಣನೀಯ ಆರ್ಥಿಕ ನೆರವಾಗಲಿದ್ದು, ರಾಜ್ಯ ಸರ್ಕಾರದ ಈ ಕ್ರಮವನ್ನು ವ್ಯಾಪಕವಾಗಿ ಸ್ವಾಗತಿಸಲಾಗಿದೆ.
ಐದನೇ ಕೇಂದ್ರ ವೇತನ ಆಯೋಗದ ಆಧಾರದ ಮೇಲೆ ತುಟ್ಟಿಭತ್ಯೆಯನ್ನು 455% ರಿಂದ 466% ಕ್ಕೆ ಏರಿಕೆ ಮಾಡಲಾಗಿದೆ. ಇದು ಜನವರಿ 01, 2025 ರಿಂದ ಜಾರಿಗೆ ಬರಲಿದೆ. ಆರನೇ ಕೇಂದ್ರ ವೇತನ ಆಯೋಗದ ಆಧಾರದ ಮೇಲೆ ತುಟ್ಟಿಭತ್ಯೆಯನ್ನು 246% ರಿಂದ 252% ಕ್ಕೆ ಏರಿಕೆ ಮಾಡಲಾಗಿದೆ. ಇದೂ ಸಹ ಜನವರಿ 01, 2025 ರಿಂದ ಅನ್ವಯವಾಗಲಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಈ ನಿರ್ಧಾರವು ಐದನೇ ಮತ್ತು ಆರನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗಿದ್ದು, ರಾಜ್ಯದ ಸರ್ಕಾರಿ ನೌಕರರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.












Click it and Unblock the Notifications