ಪತಿಯಿಂದ ಕದ್ದು 8 ವರ್ಷಗಳಿಂದ ಕೂಡಿಟ್ಟ 12 ಲಕ್ಷ ರೂ. ನುಂಗಿದ ಇಲಿಗಳು: ಮಹಿಳೆಯ ಕನಸು ಭಗ್ನ

ಸಾಮಾನ್ಯವಾಗಿ ಮಹಿಳೆಯರಿಗೆ ಭವಿಷ್ಯದ ಭದ್ರತೆಗಗಿಯೋ ಅಥವಾ ಕಷ್ಟಕಾಲಕ್ಕೆ ಪತಿಗೆ ಅಥವಾ ಮನೆಯ ಇತರ ಸದಸ್ಯರಿಗೆ ನೆರವಾಗಲೆಂದು ಯಾರಿಗೂ ತಿಳಿಯದ ಹಾಗೆ ಒಂದಿಷ್ಟು ಹಣ ಕೂಡಿಡುವ ಅಭ್ಯಾಸ ಇದ್ದೇ ಇರುತ್ತದೆ. ಅನೇಕ ಬಾರಿ ಹೀಗೆ ಕೂಡಿಟ್ಟ ಹಣ ಸಂಕಷ್ಟದ ಸಮಯದಲ್ಲಿ ಕುಟುಂಬದ ಕೈಹಿಡಿದ ಉದಾಹರಣೆಗಳೂ ಕೂಡ ನಮ್ಮ ಸಮಾಜದಲ್ಲಿ ಇದೆ.

ಆದರೆ, ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದ ಈ ಒಂದು ವಿಚಿತ್ರ ಘಟನೆ ಎಲ್ಲರನ್ನ ನಿಬ್ಬೆರಗಾಗಿಸಿದೆ. ಹೌದು, ಮಹಿಳೆಯೊಬ್ಬರು ತಮ್ಮ ಆಸೆಗಳನ್ನ ಈಡೇರಿಸಿಕೊಳ್ಳಲು ಬರೋಬ್ಬರಿ ಎಂಟು ವರ್ಷಗಳ ಕಾಲ ಕಷ್ಟಪಟ್ಟು ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ಇಲಿಗಳ ಪಾಲಾಗಿದೆ.

Uttar Pradesh

ಟ್ರಂಕ್‌ನಲ್ಲಿತ್ತು 12 ಲಕ್ಷ ರೂಪಾಯಿ

ಗೊಂಡಾ ಜಿಲ್ಲೆಯ ನಿವಾಸಿಯಾಗಿರುವ ಈ ಮಹಿಳೆ, ಕಳೆದ ಎಂಟು ವರ್ಷಗಳಿಂದ ಪ್ರತಿದಿನದ ಹಾಗೂ ತಿಂಗಳ ಖರ್ಚಿನಲ್ಲಿ ಸ್ವಲ್ಪ ಸ್ವಲ್ಪ ಹಣವನ್ನ ಉಳಿತಾಯ ಮಾಡುತ್ತಾ ಬಂದಿದ್ದರು. ಆಕೆಯ ಪತಿಗೂ ಈ ವಿಚಾರದ ಬಗ್ಗೆ ಸಣ್ಣ ಸುಳಿವೂ ಕೂಡ ಇರಲಿಲ್ಲ. ಕದ್ದುಮುಚ್ಚಿ ಪತಿಗೆ ಗೊತ್ತಾಗದಂತೆ ಮನೆಯಲ್ಲಿದ್ದ ಹಳೆಯ ಕಬ್ಬಿಣದ ಟ್ರಂಕ್ ಒಂದರಲ್ಲಿ ಹಣವನ್ನ ಸುರಕ್ಷಿತವಾಗಿ ಇಡುತ್ತಿದ್ದರು.

ಯಾರಿಗೂ ಅನುಮಾನ ಬಾರದಂತೆ, ಬಟ್ಟೆಗಳ ಮಧ್ಯೆ ಈ ನೋಟುಗಳನ್ನಾ ಜೋಡಿಸಿಟ್ಟಿದ್ದರು. ಎಂಟು ವರ್ಷಗಳಲ್ಲಿ ಆಕೆ ಬರೋಬ್ಬರಿ 12 ಲಕ್ಷ ರೂಪಾಯಿಗಳನ್ನ ಜೋಡಿಸಿಟ್ಟಿದ್ದಳು.

ಚಿನ್ನಾಭರಣ ಖರೀದಿಸುವ ಕನಸು

ಯಾವ ಮಹಿಳೆಗೆ ಚಿನ್ನ ಎಂದರೆ ಇಷ್ಟ ಇರಲ್ಲ ಹೇಳಿ. ಈ ಮಹಿಳೆಯೂ ಇದಕ್ಕೆ ಹೊರತಾಗಿರಲಿಲ್ಲ. ಮುಂದೊಂದು ದಿನ ತನ್ನಿಷ್ಟದ ಆಭರಣಗಳನ್ನೆಲ್ಲ ಒಮ್ಮೆಲೇ ಖರೀದಿಸಬೇಕು ಎಂಬ ಆಸೆಯಿಂದ ಆಕೆ ಈ ಹಣವನ್ನ ಕೂಡಿಡುತ್ತಿದ್ದಳು.

ಅದರಲ್ಲೂ ಒಂದು ವೇಳೆ ಬ್ಯಾಂಕ್‌ಗೆ ಹೋಗಿ ಹಣ ಜಮೆ ಮಾಡಿದರೆ ಪತಿಗೆ ಅಥವಾ ಮನೆಯವರಿಗೆ ವಿಚಾರ ತಿಳಿದುಹೋಗುತ್ತದೆ, ಅಥವಾ ಬೇರೆ ಯಾವುದಾದರೂ ಕೆಲಸಕ್ಕೆ ಆ ಹಣ ಖರ್ಚಾಗಿಬಿಡಬಹುದು ಎಂಬ ಭಯದಿಂದ ಆಕೆ ಬ್ಯಾಂಕ್ ಅಲ್ಲಿ ಇಡಲಿಲ್ಲ. ಬದಲಾಗಿ ತನ್ನ ಬೆಡ್‌ರೂಮ್‌ನಲ್ಲಿದ್ದ ಟ್ರಂಕ್ ಅನ್ನೇ ಬ್ಯಾಂಕ್ ಲಾಕರ್‌ನಂತೆ ಅಂದುಕೊಂಡಿದ್ದಳು.

ಕಷ್ಟಪಟ್ಟು ಕೂಡಿಟ್ಟ ಹಣ ಇಲಿಪಾಲು

ಹೀಗೆ ವರ್ಷಗಳಿಂದ ಕೂಡಿಟ್ಟ ಹಣವನ್ನ ಎಣಿಸಲು ಶುಕ್ರವಾರದಂದು ಮಹಿಳೆ ಆ ಟ್ರಂಕ್ ಅನ್ನ ತೆರೆದಿದ್ದಾರೆ. ಆದರೆ, ಪೆಟ್ಟಿಗೆ ತೆರೆಯುತ್ತಿದ್ದಂತೆ ಆಕೆಗೆ ಆಗಿದ್ದು ಭಾರಿ ಆಘಾತ. ಟ್ರಂಕ್‌ ಒಳಗೆ ಇದೆ ಎಂದುಕೊಂಡಿದ್ದ 12 ಲಕ್ಷ ರೂಪಾಯಿ ಮೌಲ್ಯದ ಹಣದ ನೋಟುಗಳನ್ನ ಇಲಿಗಳು ಸಂಪೂರ್ಣವಾಗಿ ಕಚ್ಚಿ ಚಿಂದಿ ಚಿಂದಿ ಮಾಡಿದ್ದವು.

ನೂರು, ಐನೂರು ರೂಪಾಯಿಯ ನೋಟುಗಳೆಲ್ಲವೂ ಸಣ್ಣ ಸಣ್ಣ ತುಂಡುಗಳಾಗಿ ಕಸದಂತೆ ಬಿದ್ದಿದ್ದವು. ತನ್ನ ಕಣ್ಣೆದುರೇ ಎಂಟು ವರ್ಷಗಳ ಕನಸು ನುಚ್ಚುನೂರಾಗಿರುವುದನ್ನು ಕಂಡು ಮಹಿಳೆ ಕಣ್ಣೀರು ಹಾಕಿದ್ದಾರೆ. ನೋಟುಗಳು ಯಾವ ಮಟ್ಟಿಗೆ ಹಾನಿಗೊಳಗಾಗಿವೆ ಎಂದರೆ, ಅವುಗಳನ್ನ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ ಬದಲಾಯಿಸಲು ಕೂಡ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಬ್ಯಾಂಕ್ ಬದಲಿಗೆ ಮನೆಯಲ್ಲೇ ಹಣ ಇಡುವ ಅಪಾಯಗಳು

ಈ ಘಟನೆಯು ಸಾರ್ವಜನಿಕರಿಗೆ ಒಂದು ದೊಡ್ಡ ಪಾಠವನ್ನು ಕಲಿಸಿದೆ. ಎಷ್ಟೇ ಹಣವನ್ನ ಕೂಡಿಡಬೇಕೆಂದಿದ್ದರೂ, ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ನಗದನ್ನು ಇಡುವುದು ಅತ್ಯಂತ ಅಪಾಯಕಾರಿ. ಕಳ್ಳಕಾಕರ ಭಯ ಮಾತ್ರವಲ್ಲದೆ, ಗೆದ್ದಲು, ಇಲಿ, ಜಿರಳೆಗಳಂತಹ ಕೀಟಗಳಿಂದ ಅಥವಾ ಬೆಂಕಿ, ನೀರಿನಿಂದಲೂ ಹಣ ನಾಶವಾಗುವ ಸಾಧ್ಯತೆಗಳಿರುತ್ತವೆ.

ಇಂದಿನ ದಿನಗಳಲ್ಲಿ ಮಹಿಳೆಯರಿಗಾಗಿಯೇ ಅನೇಕ ಬ್ಯಾಂಕಿಂಗ್ ಸೌಲಭ್ಯಗಳು, ಜೀರೋ ಬ್ಯಾಲೆನ್ಸ್ ಖಾತೆಗಳು ಹಾಗೂ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಲಭ್ಯವಿವೆ. ಇವುಗಳಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುವುದರ ಜೊತೆಗೆ ಬಡ್ಡಿಯೂ ದೊರೆಯುತ್ತದೆ.

ಮನೆಯಲ್ಲಿ ಹಣ ಕೂಡಿಟ್ಟು ನೆಮ್ಮದಿ ಕಳೆದುಕೊಳ್ಳುವ ಬದಲು, ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಭರವಸೆ ಇಡುವುದು ಜಾಣತನ ಎಂಬುದನ್ನ ಈ ಘಟನೆ ಸಾಬೀತುಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+