Get Updates
Get notified of breaking news, exclusive insights, and must-see stories!

ಮತ್ತೊಂದು ದುರಂತ: ಮಹಿಳೆಗೆ ಡಿಕ್ಕಿ ಹೊಡೆದು, 3 ಕಿ.ಮೀ. ಮೃತದೇಹ ಎಳೆದೊಯ್ದ ಟ್ರಕ್

ಲಕ್ನೋ, ಜ. 04: ರಾಷ್ಟ್ರ ರಾಜಧಾನಿಯಲ್ಲಿ 20 ವರ್ಷದ ಯುವತಿಯ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಆಕೆಯನ್ನು 12 ಕಿಮೀ ಎಳೆದೊಯ್ದ ಆಘಾತಕಾರಿ ಘಟನೆಯ ಬೆನ್ನಲ್ಲೇ ಮತ್ತೊಂದು ದುರಂತ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಬುಧವಾರ ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಟ್ರಕ್‌ಗೆ ಡಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟ್ರಕ್‌ಗೆ ಸಿಲುಕಿದ ಆಕೆಯ ಮೃತ ದೇಹವನ್ನು 3 ಕಿಲೋಮೀಟರ್‌ವರೆಗೆ ಟ್ರಕ್ ಎಳೆದುಕೊಂಡು ಹೋಗಿದೆ. ಈ ಘೋರ ಘಟನೆಯು ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಾವಾಯಿ ಬುಜುರ್ಗ್ ಗ್ರಾಮದಲ್ಲಿ ನಡೆದಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಮಹಿಳೆಯ ದೇಹವು ಸಿಲುಕಿಕೊಂಡಿದ್ದರಿಂದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸಂತ್ರಸ್ತೆಯ ಸ್ಕೂಟರ್ ಕೂಡ ಸುಟ್ಟು ಬೂದಿಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಮೃತರ ದೇಹವನ್ನು ಟ್ರಕ್‌ನಿಂದ ಹೊರತೆಗೆದಿದ್ದಾರೆ.

Uttar Pradesh: Truck drags woman for 3 km in Banda

ಈ ಬಗ್ಗೆ ವರದಿ ಮಾಡಿರುವ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ವಿಶ್ವವಿದ್ಯಾನಿಲಯದ ಪಿಆರ್‌ಒ ಬಿಕೆ ಗುಪ್ತಾ, ಸಂತ್ರಸ್ತೆಯ ಹೆಸರು ಪುಷ್ಪಾ ಮತ್ತು ವಿಶ್ವವಿದ್ಯಾಲಯದಲ್ಲಿ ಗುಮಾಸ್ತರಾಗಿದ್ದರು. ಅಪಘಾತ ನಡೆದ ಸಮಯದಲ್ಲಿ ಗೃಹೋಪಯೋಗಿ ವಸ್ತುಗಳು ಮತ್ತು ಪೆಟ್ರೋಲ್ ಖರೀದಿಸಲು ಹೊರಗೆ ಹೋಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಅಪಘಾತದ ನಂತರ, ಟ್ರಕ್ ಮಹಿಳೆಯನ್ನು 3 ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದಿದೆ ಎಂದು ವರದಿಯಾಗಿದೆ. ಬಹಳಷ್ಟು ವಾಹನ ಸವಾರರು ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ ಆದರೆ ಚಾಲಕ ನಿಲ್ಲಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮೃತ ಮಹಿಳೆ ಲಕ್ನೋ ನಿವಾಸಿಯಾಗಿದ್ದಾರೆ. ದೇಹವನ್ನು ಟ್ರಕ್‌ನ ಡಂಪರ್‌ನಿಂದ ಹೊರತೆಗೆಯಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಎಸ್‌ಪಿ ಲಕ್ಷ್ಮಿ ನಿವಾಸ್ ತಿಳಿಸಿದ್ದಾರೆ.

"ಬಂದಾ ಜಿಲ್ಲೆಯಲ್ಲಿ ಮಹಿಳಾ ಸರ್ಕಾರಿ ಅಧಿಕಾರಿಯೊಬ್ಬರ ದ್ವಿಚಕ್ರ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದು ಅದರಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿಯ ಕೆಳಗೆ ಮೃತದೇಹ ಸಿಲುಕಿದ ಪರಿಣಾಮ ಲಾರಿಗೆ ಬೆಂಕಿ ಹತ್ತಿಕೊಂಡಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+