Uttar Pradesh: ಸಿಪ್ರಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ, 4 ಜನ ಸಜೀವ ದಹನ!

ಝಾನ್ಸಿ ಜುಲೈ 4: ಉತ್ತರ ಪ್ರದೇಶದ ಝಾನ್ಸಿ ನಗರದ ಸಿಪ್ರಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಮೂರು ಅಂತಸ್ತಿನ ವಿಆರ್ ಟ್ರೇಡರ್ಸ್ ಎಲೆಕ್ಟ್ರಾನಿಕ್ ವಸ್ತುಗಳ ಶೋರೂಂನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರಲ್ಲಿ ಇದುವರೆಗೆ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಕಿ ತೀವ್ರವಾಗಿದ್ದು ಸುತ್ತಮುತ್ತಲ ಪ್ರದೇಶದಲ್ಲಿ ಕೋಲಾಹಲ ಉಂಟಾಯಿತು ಎಂದು ಹೇಳಲಾಗುತ್ತಿದೆ.

ಮಾಹಿತಿಯ ಪ್ರಕಾರ, ಈ ಅಪಘಾತದಲ್ಲಿ ಸುಮಾರು 10 ಜನರು ಒಳಗೆ ಸಿಲುಕಿಕೊಂಡಿದ್ದರು. ಈ ಪೈಕಿ 5-6 ಜನರನ್ನು ತಕ್ಷಣ ಹೊರತೆಗೆಯಲಾಗಿದೆ. ಜಿಲ್ಲಾಧಿಕಾರಿ ರವೀಂದ್ರಕುಮಾರ್ ಮಾತನಾಡಿ, ಇದೊಂದು ದುರಂತ ಘಟನೆಯಾಗಿದ್ದು ಬೆಂಕಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುವಂತೆ ತನಿಖಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

Uttar Pradesh: Fire accident in Sipri market, 4 people burnt alive!

ಮತ್ತೊಂದೆಡೆ, ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಸ್ಥಳದಿಂದ ಇನ್ನೂ 3 ಶವಗಳನ್ನು ಹೊರತೆಗೆಯಲಾಗಿದೆ ಎಂದು ಎಸ್‌ಎಸ್‌ಪಿ ರಾಜೇಶ್ ಎಸ್, ಝಾನ್ಸಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 4 ಆಗಿದೆ. ಪತ್ತೆಯಾದ ಮೂವರ ದೇಹಗಳ ಗುರುತು ಪತ್ತೆಯನ್ನು ಮಾಡಲಾಗುತ್ತಿದೆ. ಇದೀಗ ಪೊಲೀಸರು ಸ್ಥಳದಲ್ಲಿಯೇ ಇದ್ದಾರೆ. ಅಂಗಡಿಗಳನ್ನು ಮತ್ತೊಮ್ಮೆ ತಪಾಸಣೆ ನಡೆಸಲಾಗುತ್ತಿದೆ ಎಂದರು.

ಭೀಕರ ಬೆಂಕಿಯಿಂದಾಗಿ ಸೇನೆಯನ್ನೂ ಕರೆಸಲಾಯಿತು. ಆದರೆ ಸ್ವಲ್ಪ ಸಮಯದಲ್ಲೇ ಪಕ್ಕದಲ್ಲೇ ಇದ್ದ ಬಿಆರ್ ಟ್ರೇಡರ್ಸ್‌ಗೆ ಬೆಂಕಿ ವ್ಯಾಪಿಸಿತು. ಕ್ಷಣಾರ್ಧದಲ್ಲಿ ಎರಡೂ ಅಂಗಡಿಗಳು ಸುಟ್ಟು ಭಸ್ಮವಾಗತೊಡಗಿದವು. ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮವಹಿಸಿ ನಿಯಂತ್ರಿಸಲು ಯತ್ನಿಸಿದರು.

Uttar Pradesh: Fire accident in Sipri market, 4 people burnt alive!

ಸಿಪ್ರಿ ಬಜಾರ್‌ನ ರಾಮ ಬುಕ್ ಡಿಪೋ ಇಂಟರ್‌ಸೆಕ್ಷನ್‌ನಲ್ಲಿರುವ ಎರಡು ಅಂಗಡಿಗಳಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮೊದಲು ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಎರಡೂ ಅಂಗಡಿಗಳ ಹೊರಗೆ ಜನರೇಟರ್ ಸೆಟ್ ಇಡಲಾಗಿತ್ತು. ಬೆಂಕಿಯಿಂದಾಗಿ ಇದು ಸ್ಫೋಟಿಸಿತು. ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+