ಯುಪಿ: ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ, ಡಬಲ್ ಇಂಜಿನ ಸರ್ಕಾರವನ್ನು ಶ್ಲಾಘಿಸಿದ ಸಿಎಂ ಯೋಗಿ ಆದಿತ್ಯನಾಥ್
ಲಕ್ನೋ ಏಪ್ರಿಲ್ 8: ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗುತ್ತದೆ, ಆದರೆ ಪಾಕಿಸ್ತಾನದಲ್ಲಿ ಹೊತ್ತಿನ ರೊಟ್ಟಿಗೂ ಕೊರತೆ ಇದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಮೂರು ದಿನಗಳ ಕೌಶಂಬಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಿದರು ಮತ್ತು ದೇಶದ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಹೊಗಳಿದರು. ಇದೇ ವೇಳೆ ನೆರೆ ರಾಷ್ಟ್ರ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಯೋಗಿ, ದೇಶದ 80 ಕೋಟಿ ಬಡ ಕುಟುಂಬಗಳಿಗೆ ಸರ್ಕಾರ ಉಚಿತ ಪಡಿತರ ವಿತರಿಸುತ್ತಿದ್ದು, ಆದರೆ ಪಾಕಿಸ್ತಾನದಲ್ಲಿ ಹೊತ್ತಿಗೂ ರೊಟ್ಟಿ ಕೊರತೆಯಾಗಿದೆ ಎಂದು ಹೇಳಿದ್ದಾರೆ.

ಸಂಸದ ವಿನೋದ್ ಸೋಂಕರ್ ಅವರ ಆಹ್ವಾನದ ಮೇರೆಗೆ 2018 ರಲ್ಲಿ ಕೌಶಾಂಬಿ ಉತ್ಸವದಲ್ಲಿ ಭಾಗವಹಿಸಲು ಬಂದಿದ್ದೆ. ಇದಾದ ಬಳಿಕ ಇದೀಗ ಮತ್ತೆ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿ ಬಂದಿದೆ. ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಸ್ಥಳದಿಂದ ರೂ. 612.94 ಕೋಟಿ ವೆಚ್ಚದ 117 ಯೋಜನೆಗಳಿಗೆ ಚಾಲನೆ ನೀಡಿ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಯುಪಿಯೊಂದರಲ್ಲೇ 46 ಲಕ್ಷಕ್ಕೂ ಹೆಚ್ಚು ಜನರಿಗೆ ಮನೆಗಳನ್ನು ಒದಗಿಸುವ ಕೆಲಸ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಎರಡು ಕೋಟಿ 61 ಲಕ್ಷ ಮನೆಗಳನ್ನು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಒಂದು ಕೋಟಿ 75 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. 10 ಲಕ್ಷಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳು ಸ್ವಾನಿಧಿ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. ಸ್ವಾಮಿತ್ವ ಯೋಜನೆಯಿಂದ 35 ಲಕ್ಷ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ರಾಮಾಯಣ, ಬೌದ್ಧ ಮತ್ತು ಆಧುನಿಕ ಐತಿಹಾಸಿಕ ಹಿನ್ನೆಲೆಗಳನ್ನು ಒಳಗೊಂಡಿರುವ ಗಂಗಾ ಮತ್ತು ಯಮುನೆಯ ದೋಬದಲ್ಲಿ ಕ್ರೀಡಾ ಪ್ರತಿಭೆಗಳು ಅರಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಜೊತೆಗೆ ಪ್ರತಿ ಗ್ರಾಮ ಮತ್ತು ಬ್ಲಾಕ್‌ಗಳಲ್ಲಿ ಕ್ರೀಡಾ ಮೈದಾನ ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದಾಗಿ ಘೋಷಿಸಿದರು.
ಇತಿಹಾಸವನ್ನು ಉಲ್ಲೇಖಿಸಿದ ಸಿಎಂ ಯೋಗಿ, ಪ್ರಾಚೀನ ಹಿನ್ನೆಲೆಯಲ್ಲಿ ಭಗವಾನ್ ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಈ ಜಿಲ್ಲೆಯಲ್ಲಿ ಒಂದು ರಾತ್ರಿ ಕಳೆದಿದ್ದಾನೆ ಎಂದು ನಂಬಲಾಗಿದೆ. ಅಂತಹ ಐತಿಹಾಸಿಕ ಮತ್ತು ಪೌರಾಣಿಕ ಸಂಪ್ರದಾಯಗಳನ್ನು ಹೊಂದಿರುವ ಶಕ್ತಿಪೀಠ ಮಾತಾ ಶೀತಲ ದೇವಾಲಯವು ಇನ್ಮುಂದೆ ಜನರನ್ನು ತನ್ನತ್ತ ಆಕರ್ಷಿಸುತ್ತದೆ ಎಂದು ಹೇಳಿದರು. ರಾಜ್ಯ ಸರ್ಕಾರ ಯಾವುದೇ ತಾರತಮ್ಯವಿಲ್ಲದೆ ಎಲ್ಲರ ಅಭಿವೃದ್ಧಿ ಮಾಡಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಅಭಿವೃದ್ಧಿಯ ಕಿರಣವು ಪ್ರತಿಯೊಬ್ಬ ನಿರ್ಗತಿಕರನ್ನು ತಲುಪುತ್ತದೆ.

ರಾಜ್ಯದಲ್ಲಿ ಗೋವಿನ ಹುಡಿ ಬಳಕೆಗೆ ಒತ್ತು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದಲ್ಲಿ ಗೋವಿನ ಹುಡಿ ಬಳಕೆ ಹೆಚ್ಚಿಸಲು ಬಯಸಿದ್ದಾರೆ. ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಬಳಸುವ ಮರದ ಕಟ್ಟಿಗೆಯೊಂದಿಗೆ ಶೇಕಡ 50ರಷ್ಟು ದನದ ಸಗಣಿ ಹುಡಿ ಇರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಬರುವ ಆದಾಯವನ್ನು ಸ್ಮಶಾನಗಳಿಗೆ ಗೋವಿನ ಸಗಣಿ ಲಭ್ಯವಾಗುವಂತೆ ಮಾಡುವ ಆಯಾ ಗೋ ಕಲ್ಯಾಣ ಕೇಂದ್ರದ ನಿರ್ವಹಣೆಗೆ ಬಳಸಬೇಕು ಎಂದು ಯೋಗಿ ಹೇಳಿದ್ದಾರೆ.












Click it and Unblock the Notifications