ಉತ್ತರಪ್ರದೇಶ ಚುನಾವಣೆ: ಹೊರಬಿದ್ದ ಕುತೂಹಲಕಾರಿ ಸಮೀಕ್ಷೆ ಫಲಿತಾಂಶ

Posted By:
Subscribe to Oneindia Kannada

ಬಹು ನಿರೀಕ್ಷಿತ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಏಳು ಹಂತದಲ್ಲಿ ನಡೆಯುವ ಚುನಾವಣೆ ಫೆಬ್ರವರಿ 11ಕ್ಕೆ ಆರಂಭವಾಗಿ ಮಾರ್ಚ್ 8ರಂದು ಮುಕ್ತಾಯಗೊಳ್ಳಲಿದೆ.

ಮಾರ್ಚ್ 11ರಂದು 403 ಸ್ಥಾನಗಳ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಈ ನಡುವೆ, ಚುನಾವಣಾಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದ್ದು, ಯಾದವೀ ಕಲಹದ ನಡುವೆಯೂ ಸಮಾಜವಾದಿ ಪಕ್ಷ, ಬಿಜೆಪಿ ಮತ್ತು ಬಿಎಸ್ಪಿಗಿಂತ ಮುನ್ನಡೆ ಸಾಧಿಸಲಿದೆ.(5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ)

ಎಬಿಪಿ ನ್ಯೂಸ್ ಮತ್ತು ಲೋಕನೀತಿ ಸಿಎಸ್ ಡಿಎಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಮೊದಲ ಸ್ಥಾನಕ್ಕಾಗಿ ಸಮಾಜವಾದಿ ಪಕ್ಷ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.

ಸಮೀಕ್ಷೆಯಲ್ಲಿನ ಇನ್ನೊಂದು ಕುತೂಹಲಕಾರಿ ಅಂಶವೇನಂದರೆ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಅವರ ಸಾಧನೆ, ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರ ಸಾಧನೆಗಿಂತ ಉತ್ತಮ ಎಂದು ಜನಾಭಿಪ್ರಾಯ ವ್ಯಕ್ತವಾಗಿದ್ದು. ಸಮೀಕ್ಷೆಯಲ್ಲಿನ ಕೆಲವೊಂದು ಅಂಶಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

 ಉತ್ತರಪ್ರದೇಶ ಚುನಾವಣೆ

ಉತ್ತರಪ್ರದೇಶ ಚುನಾವಣೆ

ಶೇಕಡಾವಾರು ಮತ ಯಾರಿಗೆ ಎಷ್ಟು?

ಎಸ್ಪಿ - ಶೇ. 30
ಬಿಜೆಪಿ - ಶೇ. 27
ಬಿಎಸ್ಪಿ - ಶೇ. 22
ಕಾಂಗ್ರೆಸ್ - ಶೇ. 08
ಇತರರು - ಶೇ. 13

 ಯಾರಿಗೆ ಎಷ್ಟು ಸೀಟು ಸಾಧ್ಯತೆ

ಯಾರಿಗೆ ಎಷ್ಟು ಸೀಟು ಸಾಧ್ಯತೆ

ಎಸ್ಪಿ : 141-151
ಬಿಜೆಪಿ : 129-139
ಬಿಎಸ್ಪಿ : 93 - 103
ಕಾಂಗ್ರೆಸ್ : 13-19
ಇತರರು : 6-12

 ಸಿಎಂ ಆಗಿ ಯಾರು ಬೆಸ್ಟ್

ಸಿಎಂ ಆಗಿ ಯಾರು ಬೆಸ್ಟ್

ಅಖಿಲೇಶ್ ಯಾದವ್ - ಶೇ. 28
ಮಾಯಾವತಿ - ಶೇ. 21
ಮುಲಾಯಂ ಸಿಂಗ್ ಯಾದವ್ - ಶೇ. 03

 ಮುಸ್ಲಿಂರ ಮತ ಯಾರಿಗೆ

ಮುಸ್ಲಿಂರ ಮತ ಯಾರಿಗೆ

ಎಸ್ಪಿ - ಶೇ. 54
ಬಿಜೆಪಿ - ಶೇ. 9
ಬಿಎಸ್ಪಿ - ಶೇ. 14
ಕಾಂಗ್ರೆಸ್ - ಶೇ. 7

 ಸಮಾಜವಾದಿ ಪಕ್ಷ ಇಬ್ಬಾಗವಾದರೆ ಯಾರಿಗೆ ಎಷ್ಟು ಸ್ಥಾನ

ಸಮಾಜವಾದಿ ಪಕ್ಷ ಇಬ್ಬಾಗವಾದರೆ ಯಾರಿಗೆ ಎಷ್ಟು ಸ್ಥಾನ

ಎಸ್ಪಿ (ಅಖಿಲೇಶ್ ಬಣ) : 82-92
ಎಸ್ಪಿ (ಮುಲಾಯಂ ಬಣ) : 09-15
ಬಿಜೆಪಿ : 158-168
ಬಿಎಸ್ಪಿ : 110-120
ಕಾಂಗ್ರೆಸ್ : 14-20

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ABP News and Lokniti CSDS Pre Poll survey predicts, Akhilesh Will Remain UP CM and close fight between SP and BJP.
Please Wait while comments are loading...