ಜಮ್ಮು: 17 ಯೋಧರು ಹುತಾತ್ಮ, 4 ಉಗ್ರರು ಹತ್ಯೆ
ಶ್ರೀನಗರ, ಸೆ. 18: ಜಮ್ಮು ಮತ್ತು ಕಾಶ್ಮೀರದ ಉರಿ ನಗರದಲ್ಲಿ ಭಾನುವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ 17 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ನಾಲ್ವರು ಉಗ್ರರನ್ನು ಸದೆಬಡಿಯಲಾಗಿದೆ.
ಉರಿ ನಗರದ ಬೇಸ್ ಕ್ಯಾಂಪ್ ಗುರಿಯನ್ನಾಗಿಸಿಕೊಂಡು ದಾಳಿ ನಡೆಸಿದ್ದ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿ ಎಂದು ಉತ್ತರ ಕಮ್ಯಾಂಡ್ ಉಧಂಪುರ್ ಕೇಂದ್ರ ಕಚೇರಿಯಿಂಡ ಕರ್ನಲ್ ಎಸ್ ಡಿ ಗೋಸ್ವಾಮಿ ಅವರು ಐಎಎನ್ ಎಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಭಾನುವಾರ ಬೆಳಗ್ಗೆ ಸುಮಾರು 5.30ರ ವೇಳೆಗೆ ಆತ್ಮಾಹುತಿ ದಾಳಿ ನಡೆಸಲಾಯಿತು. ಉರಿಯ ಬ್ರಿಗೇಡ್ 12 ಕೇಂದ್ರ ಕಚೇರಿ ಮೇಲೆ ನಂತರ ಉಗ್ರರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು. ಹಠಾತ್ ದಾಳಿಯಲ್ಲಿ 17 ಯೋಧರು ವೀರ ಮರಣ ಹೊಂದಿದರೆ, 6 ಭಾರತೀಯ ಯೋಧರು ಗಾಯಗೊಂಡಿದ್ದಾರೆ.
ಈ ಘಟನೆ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾ ಹಾಗೂ ಯುಎಸ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಕಾಶ್ಮೀರದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ತುರ್ತುಸಭೆಗೆ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ.












Click it and Unblock the Notifications