Vice President: ದಿಢೀರ್ ಉಪರಾಷ್ಟ್ರಪತಿ ರಾಜೀನಾಮೆ ಹಿನ್ನೆಲೆ ಚುನಾವಣೆಗೆ ತಯಾರಿ!
ದೇಶದ ಪ್ರಮುಖ ಸ್ಥಾನಗಳ ಪೈಕಿ, ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಅವರಿಗೆ ಅತ್ಯುನ್ನತ ಸ್ಥಾನಮಾನ ಇದ್ದರೆ ಆ ನಂತರದ ಸ್ಥಾನವನ್ನು ಉಪರಾಷ್ಟ್ರಪತಿಗೆ ನೀಡಲಾಗುತ್ತದೆ. ಅದರಲ್ಲೂ, ರಾಷ್ಟ್ರಪತಿ ಅವರಿಗೆ ಉತ್ತರಾಧಿಕಾರಿಯಾಗಿ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾರೆ ಉಪರಾಷ್ಟ್ರಪತಿ ಎನ್ನಬಹುದು. ಆದರೆ ನಿನ್ನೆ ದಿಢೀರ್ ಒಂದು ಪ್ರಮುಖ ಘಟನೆ ನಡೆದು ಹೋಗಿದೆ, ಜಗದೀಪ್ ಧನಕರ್ ಅವರು ತಮ್ಮ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಈ ಸಮಯದಲ್ಲೇ ಹೊಸ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಸಲು ತಯಾರಿ ಸಾಗಿದೆ.
ಅಂದಹಾಗೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಭಾರತ ಜಗತ್ತಿಗೇ ಮಾದರಿ ಎನ್ನಬಹುದು. ಏಕೆಂದರೆ ಅಭಿವೃದ್ಧಿ ವಿಚಾರದಿಂದ ಹಿಡಿದು ರಾಜಕೀಯ ವ್ಯವಸ್ಥೆ ತನಕ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತ ಅತ್ಯುತ್ತಮವಾಗಿ ಇದೆ. ಹೀಗೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಉಪರಾಷ್ಟ್ರಪತಿಗಳು ದಿಢೀರ್ ರಾಜೀನಾಮೆ ನೀಡಿದ್ದು, ಜಾಗತಿಕ ಮಟ್ಟದಲ್ಲೂ ಸುದ್ದಿಯಾಗಿ ಸದ್ದು ಕೂಡ ಮಾಡುತ್ತಿದೆ. ಹೀಗಿದ್ದಾಗಲೇ ಹೊಸ ಉಪರಾಷ್ಟ್ರಪತಿ ಆಯ್ಕೆಗೆ ಎಲೆಕ್ಷನ್ ಇನ್ನೇನು ಫಿಕ್ಸ್ ಆಗುವುದು ಈಗ ಪಕ್ಕಾ ಆಗಿದೆ.

ಉಪರಾಷ್ಟ್ರಪತಿ ಆಯ್ಕೆಗೆ ಎಲೆಕ್ಷನ್ ಯಾವಾಗ?
ಹೌದು, ಭಾರತೀಯ ಸಂವಿಧಾನದ ಕಲಂ 68 ಉಪಕಲಂ 2 ಹೇಳುವಂತೆ ಉಪರಾಷ್ಟ್ರಪತಿ ಅವರ ಹುದ್ದೆ ಖಾಲಿ ಬಿಡಬಾರದು. ಅಂದರೆ, ಉಪರಾಷ್ಟ್ರಪತಿ ಅವರ ರಾಜೀನಾಮೆಯೂ ಸೇರಿದಂತೆ, ಮರಣ ಅಥವಾ ವಜಾ ಮಾಡುವುದು ಇಲ್ಲವೇ ಇನ್ಯಾವುದೇ ಕಾರಣಕ್ಕೆ ಉಪರಾಷ್ಟ್ರಪತಿ ಅವರ ಹುದ್ದೆ ಖಾಲಿ ಆದರೆ ತಕ್ಷಣ ಆ ಹುದ್ದೆಗೆ ಚುನಾವಣೆ ನಡೆಸಬೇಕು. ಉಪರಾಷ್ಟ್ರಪತಿಗಳ ಅಧಿಕಾರದ ಅವಧಿ ಒಟ್ಟು 5 ವರ್ಷ ಆಗಿದ್ದು, ದಿಢೀರ್ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಕೊಟ್ಟಿರುವುದು ಭಾರಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದೇ ಕಾರಣಕ್ಕೆ ಆದಷ್ಟು ಬೇಗ ಚುನಾವಣೆ ನಡೆಸಲು ಇದೀಗ ತಯಾರಿಯೂ ಸಾಗಿದೆ.
2ನೇ ಅತ್ಯುನ್ನತ ಸಾಂವಿಧಾನಿಕ ಪದವಿ
ಉಪರಾಷ್ಟ್ರಪತಿ ಅವರಿಗೆ ಭಾರತದಲ್ಲಿ 2ನೇ ಅತ್ಯುನ್ನತ ಸಾಂವಿಧಾನಿಕ ಪದವಿಯನ್ನು ನೀಡಲಾಗಿದೆ. ಹೀಗೆ ಆಯ್ಕೆ ಆಗುವ ಉಪರಾಷ್ಟ್ರಪತಿ ಅವರಿಗೆ ಒಟ್ಟಾರೆ 5 ವರ್ಷ ಅಧಿಕಾರ ಅವಧಿಯನ್ನು ನೀಡಲಾಗುತ್ತಿದೆ. ಈ ರೀತಿ 5 ವರ್ಷ ಅಧಿಕಾರ ಅವಧಿ ನೀಡುವ ಜೊತೆಗೆ, ಅವರ ಉತ್ತರಾಧಿಕಾರಿ ಅಧಿಕಾರ ಸ್ವೀಕರಿಸುವವರೆಗೂ ತಮ್ಮ ಸ್ಥಾನದಲ್ಲೇ ಉಪರಾಷ್ಟ್ರಪತಿ ಮುಂದುವರಿಯುತ್ತಾರೆ. ಹೀಗೆ ಭಾರತೀಯ ಸಂವಿಧಾನ & ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಪರಾಷ್ಟ್ರಪತಿ ಅವರ ಜಾಗಕ್ಕೆ ಅತ್ಯುತ್ತಮ ಸ್ಥಾನಮಾನವನ್ನು ನೀಡಿ ಗೌರವಿಸಲಾಗುತ್ತದೆ.
ಇನ್ನು ಅಕಸ್ಮಾತ್ ಅವರು ರಾಜೀನಾಮೆ ನೀಡಿ ಹುದ್ದೆ ತ್ಯಜಿಸಿದರೆ ಅಥವಾ ಉಪರಾಷ್ಟ್ರಪತಿ ಅವರ ಪದಚ್ಯುತಿ ನಡೆದರೆ ತಕ್ಷಣ ಆ ಸ್ಥಾನಕ್ಕೆ ಚುನಾವಣೆ ನಡೆಸಬೇಕು. ಇದೀಗ, ಉಪರಾಷ್ಟ್ರಪತಿ ಅವರ ರಾಜೀನಾಮೆಯ ಹಿನ್ನೆಲೆ ಚುನಾವಣೆಗೆ ತಯಾರಿ ನಡೆದಿದೆ. ಇನ್ನು ಉಪರಾಷ್ಟ್ರಪತಿ ಆಗಿ ಆಯ್ಕೆಯಾಗಲು ಹಲವು ನಿಮಯ ಇದ್ದು, ಪ್ರಮುಖವಾಗಿ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಭಾರತ ದೇಶದ ಪ್ರಜೆಯಾಗಿರಬೇಕು. ಹಾಗೂ ಅವರಿಗೆ ಕನಿಷ್ಠ 35 ವರ್ಷ ವಯಸ್ಸು ಆಗಿರಬೇಕು ಎಂದು ನಿಯಮ ಹೇಳುತ್ತದೆ. ಹಾಗೇ ರಾಜ್ಯಸಭೆ ಸದಸ್ಯನಾಗಿ ಆಯ್ಕೆ ಆಗುವ ಅರ್ಹತೆ ಹೊಂದಿರಬೇಕು. ಜೊತೆಗೆ ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರ ಇಲ್ಲವೇ ಯಾವುದೇ ಸ್ಥಳೀಯ ಪ್ರಾಧಿಕಾರದ ಅಧೀನದಲ್ಲಿ ಲಾಭದ ಹುದ್ದೆಯನ್ನು ಹೊಂದಿರಬಾರದು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications