ಪೊಲೀಸರ ನಡೆಗೆ ನೊಂದು ಹಿಂದು ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಕುಟುಂಬ
ಬಾಘ್ಪತ್(ಉತ್ತರ ಪ್ರದೇಶ), ಅಕ್ಟೋಬರ್ 03: ಪೊಲೀಸರ ವರ್ತನೆಯಿಂದ ನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದು ಮತಕ್ಕೆ ಮತಾಂತರವಾದ ಘಟನೆ ಉತ್ತರ ಪ್ರದೇಶದ ಬಾಪ್ಘತ್ ಎಂಬಲ್ಲಿ ನಡೆದಿದೆ.
ತನ್ನ ಮಗನ ಅಸಹಜ ಸಾವನ್ನು ಕೊಲೆ ಎಂದು ತನಿಖೆ ಮಾಡುವ ಬದಲು ಆತ್ಮಹತ್ಯೆ ಎಂದು ಪೊಲಿಸರು ಮುಚ್ಚಿಹಾಕಿದ್ದಾರೆ ಎಂದು ನೊಂದ ಮುಸ್ಲಿಂ ವ್ಯಕ್ತಿ ತಮ್ಮ ಕುಟುಂಬದ 12 ಜನರೊಂದಿಗೆ ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾರೆ.
ಇಲ್ಲಿನ ಬದರ್ಖಾ ಎಂಬ ಹಳ್ಳಿಯ ಅಖ್ತರ್ ಎಂಬುವವರ ಪುತ್ರ ಗುಲ್ ಹಸನ್ ಇತ್ತೀಚೆಗಷ್ಟೇ ಸಾವಿಗೀಡಾಗಿದ್ದರು. ಆತನದು ಸಹಜ ಸಾವಲ್ಲ, ಕೊಲೆ ಎಂದು ದೂರಿ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡುವ ಬದಲು, ಅಖ್ತರ್ ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂದು ಅವರು ದೂರಿದ್ದಾರೆ.

ಪೊಳಿಸರ ಈ ನಡೆಯ ವಿರುದ್ಧ ಹೋರಾಡಲು ಮುಸ್ಲಿಂ ಸಮುದಾಯದ ಜನರು ತಮಗೆ ಯಾವುದೇ ಬೆಂಬಲ ನೀಡಲಿಲ್ಲ. ಇದರಿಂದ ಬೇಸೆತ್ತ ನಾನು ಮತ್ತು ನನ್ನ ಕುಟುಂಬಸ್ಥರೆಲ್ಲರೂ ಹಿಂದು ಧರ್ಮಕ್ಕೆ ಸ್ವ ಇಚ್ಛೆಯಿಂದ ಮತಾಂತರವಾಗುತ್ತಿದ್ದೇವೆ ಎಂದು ಅಖ್ತರ್ ಹೇಳಿದ್ದಾರೆ.
ಕಾನೂನಾತ್ಮಕವಾಗಿ ಮತ್ತು ಹೋಮ-ಹವನಗಳ ಮೂಲಕ ಶಾಸ್ತ್ರೋಸ್ತ್ರವಾಗಿ ಅವರು ಹಿಂದು ಮತಕ್ಕೆ ಮತಾಂತರವಾದರು.












Click it and Unblock the Notifications