ಮೇ.13: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಮೇ.13: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
3.45: ಪಾಟ್ನದಲ್ಲಿ ಸಶಸ್ತ್ರವಾಗಿ ಬ್ಯಾಂಕಿನಿಂದ ಹಣ ಸಾಗಿಸುತ್ತಿದ್ದ ವಾಹನದಿಂದ 1 ಕೋಟಿ ನಗದು ಲೂಟಿ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
3.15: ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಯಾವುದೇ ತನಿಖೆ ಬಾಕಿ ಉಳಿದಿಲ್ಲವೆಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸುಮಿತ್ ದಲಾಲ್ ಎಂಬ ಕಾರ್ಯಕರ್ತ ಐ.ಟಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
3.00: ಉತ್ತರಪ್ರದೇಶದಲ್ಲಿ ಅಮೆರಿಕ ಮೂಲದ ಮಹಿಳಾ ಪ್ರವಾಸಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಟ್ಯಾಕ್ಸಿ ಡ್ರೈವರ್ ರೊಬ್ಬರನ್ನು ಬಂಧಿಸಲಾಗಿದೆ. ದೆಹಲಿ- ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

2.45: ಗುಜರಾತ್ ಭವನಕ್ಕೆ ಉಗ್ರರ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರಿಗೆ ಭದ್ರತೆ ಒದಗಿಸುವಂತೆ ಗುಪ್ತಚರ ಇಲಾಖೆ ಸೂಚನೆ ಸಿಕ್ಕಿದೆ.
2.25: ರಾಹುಲ್ ಗಾಂಧಿ ಮಾತ್ರವಲ್ಲ, ಯುಪಿಎ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲವಾಗಿದೆ: ಕೇಂದ್ರ ಸಚಿವ ಕಮಲ್ ನಾಥ್.
2.15: ಚೀನಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ಟಿಲು ಕುಸಿದ ಪರಿಣಾಮ ಐವರು ಕಾರ್ಮಿಕರು ಮೃತರಾಗಿರುವ ಘಟನೆ ನಡೆದಿದೆ.
2.00: ಭಾರತದ ಲೋಕಸಭಾ ಚುನಾವಣೆ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ನೀಡಿರುವ ಹೇಳಿಕೆಯನ್ನು ಬಿಜೆಪಿ ಸ್ವಾಗತಿಸಿದೆ.
1.45: ಬಿಜೆಪಿ ಮೂಲಗಳ ಪ್ರಕಾರ ರಾಜನಾಥ್ ಸಿಂಗ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
1.30: ಎಕ್ಸಿಟ್ ಪೋಲ್ ವರದಿಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ತಳ್ಳಿ ಹಾಕಿದ್ದಾರೆ.
In a Country of 800 Million Voters how can few Lakhs sample size surveys predict the result ? Let's wait for 16 th May.
— digvijaya singh (@digvijaya_28) May 13, 2014 1.15: ಎಕ್ಸಿಟ್ ಪೋಲ್ ವರದಿಗಳು ಬಂದಿರುವ ನಂತರ ಎನ್ ಡಿಎ ಪರ ಜನರ ಅಭಿಮತ ಬಂದಿದ್ದು, ಇದರ ಪರಿಣಾಮವಾಗಿ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 23729 ಅಂಕಗಳಿಗೆ ಜಿಗಿದಿದೆ, ನಿಫ್ಟಿಯಲ್ಲೂ 100 ಅಂಕಗಳ ಏರಿಕೆ ಕಂಡು ಬಂದಿದೆ.
1.00: ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಆಡಳಿತ ಅವಧಿಯ ಕಟ್ಟ ಕಡೆಯ ಸಚಿವ ಸಂಪುಟ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
12.45: ಜೋರ್ಡಾನ್ನಿನ ನಿರಾಶ್ರಿತರಿಗೆ ಐಎಂಎಫ್ ನಿಂದ ಹೆಚ್ಚಿನ ನಿಧಿ ಕಳಿಸಲಾಗಿದೆ.
12.30: ಗಲಭೆ ಪೀಡಿತ ಉಕ್ರೇನಿಗೆ ಜರ್ಮನಿಯ ವಿದೇಶಾಂಗ ಸಚಿವರು ಭೇಟಿ ನೀಡುತ್ತಿದ್ದಾರೆ.
12.15: ಬಹುಮತ ಸಿಗದಿದ್ದರೆ ವಿಪಕ್ಷವಾಗಿ ಕಾರ್ಯ ನಿರ್ವಹಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂಬ ಸಂದೇಶ ಹೊರಬಿದ್ದಿದೆ. ಮೈತ್ರಿ ಒಕ್ಕೂಟ ಸಾಧಿಸುವ ಬಗ್ಗೆ ಕಾಂಗ್ರೆಸ್ಸಿನಲ್ಲಿ ಒಮ್ಮತ ಮೂಡಿ ಬಂದಿಲ್ಲ.
12.00: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇ.13 ಒಂದು ವರ್ಷ ಆಡಳಿತಾವಧಿ ಪೂರೈಸಿದೆ.
11.30: ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 1.09ರು ನಷ್ಟು ಏರಿಕೆ ಮಾಡಲಾಗಿದೆ.
11.00: ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಕೇದರಾನಾಥ್ ಯಾತ್ರೆಯನ್ನು ಮೆ.16ರ ತನಕ ಸ್ಥಗಿತಗೊಳಿಸಲಾಗಿದೆ.












Click it and Unblock the Notifications