ಜೂ.30: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಜೂ.30: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

4.10: ಬಿಹಾರದ ಕಿಶಾನ್ ಗಂಜ್ ನಲ್ಲಿ ಪ್ಯಾಸೆಂಜರ್ ರೈಲಿನಲ್ಲಿ 8 ಸಜೀವ ಬಾಂಬ್ ಪತ್ತೆ.
4.00: ಉತ್ತರಪ್ರದೇಶದ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಬಿಜೆಪಿ ಯುವಮೋರ್ಚಾ ಸದಸ್ಯರು ನಡೆಸಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

3.45: ಉತ್ತರಪ್ರದೇಶದ ಅಸೆಂಬ್ಲಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ.

3.30: ಬದೌನ್ ಅತ್ಯಾಚಾರ, ಬೆಲೆ ಏರಿಕೆ ಖಂಡಿಸಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಆಗ್ರಹಿಸಿ ಅಸೆಂಬ್ಲಿ ಎದುರು ಬಿಜೆಪಿ ಭಾರಿ ಪ್ರತಿಭಟನೆ ನಡೆಸಿದೆ.
2.30: ಮುಂಬೈನ ಯುವ ವಕೀಲೆ ಪಲ್ಲವಿ ಪುರಕಾಯಸ್ಥ ಅವರನ್ನು ಕೊಲೆ ಮಾಡಿದ್ದು ಸೆಕ್ಯುರಿಟಿ ಗಾರ್ಡ್ ಸಜ್ಜದ್ ಅಹ್ಮದ್ ಎಂದು ಸೋಮವಾರ ನ್ಯಾಯಾಲಯ ಘೋಷಿಸಿದೆ.

News in brief on June 30

11.05: ಐದು ವಿದೇಶಿ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ ಸಿ 23 ರಾಕೆಟ್ ಉಡಾವಣೆ ಯಶಸ್ವಿಯಾಗಿದ್ದನ್ನು ಶ್ರೀಹರಿಕೋಟಾದಲ್ಲಿ ಕಣ್ಣಾರೆ ನೋಡಿ ಆನಂದಿಸಿದ ಪ್ರಧಾನಿ ನರೇಂದ್ರ ಮೋದಿ.[ಸಚಿತ್ರ ವರದಿ ಇಲ್ಲಿದೆ]
10.45: ಚೆನ್ನೈ ಹೊರವಲಯದ ಕಟ್ಟಡ ಕುಸಿತ ದುರಂತದ ಕಾರಣ ತಿಳಿದು ಬಂದಿದೆ. ಕಟ್ಟಡ ಕುಸಿತಕ್ಕೆ ಮಳೆ, ಸಿಡಿಲು, ಗುಡುಗು ಕಾರಣವಲ್ಲ, ಕಳಪೆ ಕಾಮಗಾರಿಯೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

Top news in brief for the day

10.30: ಚೆನ್ನೈನ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಕಟ್ಟಡದ ಅವಶೇಷಗಳಡಿಯಲ್ಲಿರುವ ಜನರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

9.45: ಅಗ್ರ ಶ್ರೇಯಾಂಕದ ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. 6-1, 3-6, 4-6 ಸೆಟ್‌ಗಳಿಂದ ಫ್ರಾನ್ಸಿನ ಅಲಿಜ್ ಕಾರ್ನೆಟ್‌ಗೆ ಶರಣಾಗಿದ್ದಾರೆ.
9.30: ಸಿರಿಯಾ ಅಧ್ಯಕ್ಷ ಬಾಶರ್‌ ಅಲ್‌ ಅಸದ್‌ ಅವರ ಆಡಳಿತ ಮತ್ತು ಜಿಹಾದಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಬಂಡುಕೋರರ ವಿರುದ್ಧ ಸಮರ ಸಾರಿರುವ ಜಿಹಾದಿಗಳ ಸಂಘಟನೆಐಎಸ್‌ಐಎಲ್‌ 9 ಮಂದಿಯನ್ನು ಅತ್ಯಂತ ಕ್ರೂರವಾಗಿ ಸಾರ್ವಜನಿಕವಾಗಿ ಶಿಲುಬೆಗೇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+