ಜು.3 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜು.3: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
9.00 : ಬುಧವಾರ ಸುರಿದ ಭಾರಿ ವರ್ಷಧಾರೆಯಿಂದ ತಂಪಾದ ಮಹಾನಗರಿ ಮುಂಬೈ.
8.50: ಜಮ್ಮು ಮತ್ತು ಕಾಶ್ಮೀರದ ಪೂಂಚ್ ನ ಗಡಿ ನಿಯಂತ್ರಣ ರೇಖೆ ದಾಟಿ ಒಳನುಗ್ಗಲು ಉಗ್ರರ ಗುಂಪೊಂದು ಯತ್ನಿಸಿದ ಘಟನೆ ಕೃಷ್ಣಘಾಟಿಯಲ್ಲಿ ನಡೆದಿದೆ.
8.45: ಜರ್ಮನ್ ಬೇಕರಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿಯೊಬ್ಬನನ್ನು ಬಂಧಿಸಿದ್ದಾರೆ.

8.30: ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ಡಾ. ಸುಧೀರ್ ಗುಪ್ತಾ ನೀಡಿರುವ ಹೇಳಿಕೆಯನ್ನು ಏಮ್ಸ್ ನಿರಾಕರಿಸಿದೆ.ವರದಿ ತಿರುಚುವಂತೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ ಎಂದಿದೆ.












Click it and Unblock the Notifications