ಜು.12 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಜು.12: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

5.30: ಮಣಿಪುರದ ವಿಶ್ವವಿದ್ಯಾಲಯ ಎದುರು ಪ್ರಬಲ ಬಾಂಬ್ ಸ್ಫೋಟಿಸಿದ್ದು 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
4.30: ಗಾಜಾ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್ - ಸಮರದಲ್ಲಿ 120 ಸಾವು
4.15: ಸ್ವರೂಪಾನಂದರ ಮತ್ತೆ ಶಿರಡಿ ಬಾಬಾ ವಿರುದ್ಧ ಹೇಳಿಕೆ ನೀಡಿದ್ದು, ವೇಶ್ಯೆಯೊಬ್ಬರ ಮಗ ಎಂದಿದ್ದಾರೆ.

4.10: 'ಪಿಂಡಾರಿ ಬಹ್ರುದ್ದೀನ್ ಎಂಬಾತ ಅಪಘಾನಿಸ್ತಾನದಿಂದ ಅಹಮದಾಬಾದಿಗೆ ಬರುತ್ತಾನೆ. ಅಲ್ಲಿ ವೇಶ್ಯೆಯ ಮನೆಯೊಂದರಲ್ಲಿ ತಂಗುತ್ತಾನೆ. ಆತನಿಗೆ ಎರಡು ಮಕ್ಕಳು. ಒಬ್ಬ ಚಾಂದ್ ಮಿಯಾ, ಮತ್ತೊಂದು ಹೆಣ್ಣು ಮಗಳು. ಆಮೇಲೆ ಚಾಂದ್​ ಮಿಯಾನೇ ಶಿರಡಿ ಸಾಯಿಬಾಬಾ ಎನ್ನಿಸಿಕೊಂಡ' ಎಂದಿದ್ದಾರೆ.

International News in Brief on July 12

11.15: ಕರ್ನಾಟಕದ ಗಡಿ ಭಾಗದ ಗ್ರಾಮಗಳಿಗೂ ತಟ್ಟಿದ ತೆಲಂಗಾಣದಲ್ಲಿ ಬಂದ್ ಬಿಸಿ.
11.00: ತೆಲಂಗಾಣ ಕ್ರಿಯಾ ಸಮಿತಿ(ಟಿಜೆಎಸಿ) ಹಾಗೂ ಎಡ ಪಕ್ಷಗಳು ಕರೆ ನೀಡಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತೆಲಂಗಾಣ ಪ್ರಾಂತ್ಯದ 200ಕ್ಕೂ ಅಧಿಕ ಗ್ರಾಮಗಳನ್ನು ಆಂಧ್ರಪ್ರದೇಶಕ್ಕೆ ಸೇರಿಸುವ ಬಗ್ಗೆ ಪೊಲವರಂ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುವುದನ್ನು ವಿರೋಧಿಸಿ ಬಂದ್ ಕರೆ ನೀಡಲಾಗಿದೆ.

Updates India, International News in Brief on July 12

10.45: ಆಂಧ್ರಪ್ರದೇಶದ ಗೋದಾವರಿ ನದಿ ಪಾತ್ರದಲ್ಲಿ ಪೊಲಾವರಂ ವಿದ್ಯುತ್ ಯೋಜನೆ ಜಾರಿಗೊಂಡರೆ ಮೇಲೆ ಹೆಸರಿಸಿದ ಗ್ರಾಮಗಳು ಮುಳುಗಡೆಯಾಗುವ ಭೀತಿ ಎದುರಾಗಿದೆ.
10.30: ಪುದುಚೇರು ಉಪ ರಾಜ್ಯಪಾಲ ಹಿರಿಯ ಕಾಂಗ್ರೆಸ್ ನಾಯಕ ವೀರೇಂದ್ರ ಕಠಾರಿಯಾ ಅವರನ್ನು ಮೋದಿ ಸರ್ಕಾರ ವಜಾಗೊಳಿಸಿದೆ.
10.15: ನಾಗಾಲ್ಯಾಂಡ್ ವರ್ಗಾವಣೆ ಮಾಡಿದ್ದಕ್ಕೆ ಕೋಪಗೊಂಡು ಜೋರಾಂ ರಾಜ್ಯಪಾಲ ವಕ್ಕೊಂ ಬಿ ಪುರುಷೋತ್ತಮನ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
10.00: ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನಗಳು ಪಶ್ಚಿಮ ಬಂಗಾಳದಲ್ಲಿ ಸ್ವಲ್ಪದರಲ್ಲೇ ಡಿಕ್ಕಿ ಹೊಡೆಯುವುದರಿಂದ ತಪ್ಪಿಸಿಕೊಂಡಿವೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+