ನ.11: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.11: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
14.50: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮಂಗಳವಾರ ಖಾಸಗಿ ಬಸ್ ಹಾಗೂ ಟ್ರಕ್ ನಡುವೆ ಡಿಕ್ಕಿ ಹೊಡೆತ ಪರಿಣಾಮ 56 ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ 21 ಮಹಿಳೆಯರು 18 ಮಕ್ಕಳು ಸೇರಿದ್ದಾರೆ.
13.00: 10ದಿನಗಳ ಪ್ರವಾಸ ನಿರತ ಪ್ರಧಾನಿ ಮೋದಿ ಅವರು ಸುರಕ್ಷಿತವಾಗಿ ಮ್ಯಾನ್ಮರ್ ತಲುಪಿದ್ದಾರೆ.
12.30: ತಮಿಳುನಾಡಿನ ಕಾಂಗ್ರೆಸ್ ತೊರೆದಿರುವ ಮಾಜಿ ಕೇಂದ್ರ ಸಚಿವ ಜಿ.ಕೆ ವಾಸನ್ ಅವರು ನ.28ರಂದು ಹೊಸ ಪಕ್ಷ ವನ್ನು ತಿರುಚ್ಚಿಯಲ್ಲಿ ಘೋಷಿಸಲಿದ್ದಾರೆ.
9.40: ನ.11ರಿಂದ ಭಾರತದ ಪ್ರಧಾನಿ ಮೋದಿ ಅವರ 10ದಿನಗಳ ಕಾಲದ ಸುದೀರ್ಘ ಪ್ರವಾಸ ಆರಂಭಗೊಳ್ಳಲಿದೆ.ಮ್ಯಾನ್ಮಾರ್, ಆಸ್ಟ್ರೇಲಿಯಾ, ಫಿಜಿ ದೇಶಗಳಿಗೆ ಮೋದಿ ಭೇಟಿ ನೀಡಲಿದ್ದಾರೆ.

9.35: ನೈಜೀರಿಯಾದಲ್ಲಿ ಸೋಮವಾರ ಶಾಲಾ ಸಮವಸ್ತ್ರದ ವೇಷ ಧರಿಸಿದ್ದ ಆತ್ಮಹತ್ಯಾ ಬಾಂಬರ್ ಶಾಲಾ ಆವರಣದಲ್ಲಿ ನಡೆಸಿದ ದಾಳಿಯಲ್ಲಿ 48 ವಿದ್ಯಾರ್ಥಿಗಳು ಹತರಾಗಿದ್ದಾರೆ. ಪ್ರಧಾನಿ ಮೋದಿ ಅವರು ಈ ಘಟನೆಯನ್ನು ಖಂಡಿಸಿದ್ದಾರೆ.
9.30: ಕೋಲ್ಕತ್ತಾ: ಸಿಆರ್ ಪಿಎಫ್ ಕಚೇರಿ ಸಮೀಪ ನಡೆದ ಪಟಾಕಿ ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
Kolkata: Security officials examining the site after firecracker explosion outside CRPF premises pic.twitter.com/F3EdjpvnD5
— ANI (@ANI_news) November 10, 2014 9.00: ಭಾರತ ಮೂಲದ ಅದಿತಿ ಹಾರ್ಡಿಕರ್ ಅವರು ಶ್ವೇತಭವನದ ಪ್ರಮುಖ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.












Click it and Unblock the Notifications