ಜು.24 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಜು.24: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.30: ಮುಂಬೈನ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮೇಲೆ ರೂಪದರ್ಶಿಯೊಬ್ಬರು ಮಾನಭಂಗ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದಾರೆ.
4.45: ಕೇಸರಿ ನಾಥ್ ತ್ರಿಪಾಠಿ ಅವರು ಪಶ್ಚಿಮ ಬಂಗಾಳದ ಹೊಸ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
2.25: ಅಫ್ರಿಕಾ ಖಂಡ ಅಲ್ಜೀರಿಯಾದ ವಿಮಾನವೊಂದು ನಾಪತ್ತೆಯಾಗಿದ್ದು, ವಿಮಾನದಲ್ಲಿರುವ 110 ಜನ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

10.30: ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ತನ್ನ ಸಂಸದನನ್ನು ಸಮರ್ಥಿಸಿಕೊಂಡಿದೆ. ಮಹಾರಾಷ್ಟ್ರ ಸದನದಲ್ಲಿ ನಡೆದ ಪ್ರಕರಣಕ್ಕೆ ಬಣ್ಣ ಕಟ್ಟಿ ಕೋಮು ಭಾವನೆ ಕೆರಳಿಸಲು ಹಲವರು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
10.15: ಬೆಂಗಳೂರಿನ ವಿಬ್ ಗಯಾರ್ ಶಾಲೆಯ ಮುಖ್ಯಸ್ಥ ರುಸ್ತುಂ ಕೇರವಾಲ ಅವರನ್ನು ಡಿಯು ಡಮನ್ ನಲ್ಲಿ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Updates India, International News in Brief July 24

10.00 : ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ತೆಲಂಗಾಣ ಸರ್ಕಾರ ಗೌರವಿಸುವುದಕ್ಕೆ ಬಿಜೆಪಿ ಆಕ್ಷೇಪಿಸಿದೆ. ಆಕೆ ಪಾಕಿಸ್ತಾನದ ಸೊಸೆ ಎಂದು ಪ್ರತಿಕ್ರಿಯಿಸಿದೆ.
9.30: ತೆಲಂಗಾಣದ ಕಾಮರೆಡ್ಡಿ ಪ್ರದೇಶದಲ್ಲಿ ಶಾಲಾ ಬಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 4 ಮಕ್ಕಳು ಹಾಗೂ 12 ಜನ ಗಾಯಗೊಂಡಿದ್ದಾರೆ.
9.00: ಸ್ಕಾಟ್ಲೆಂಡಿನ ಗ್ಲಾಸ್ಗೋದಲ್ಲಿ 20ನೇ ಕಾಮನ್ ವೆಲ್ತ್ ಕ್ರೀಡಾಕೂಟ ಬುಧವಾರ ಮಧ್ಯರಾತ್ರಿ(IST) ಆರಂಭಗೊಂಡಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+