ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ

By Mahesh
|
Google Oneindia Kannada News

ನವದೆಹಲಿ, ಫೆ. 28: ಮಹಾ ಶಿವರಾತ್ರಿಯ ನಂತರ ಐವತ್ತು ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಮೂವತ್ತು ಲಕ್ಷ ಪಿಂಚಣಿದಾರರ ಬಾಯಿಗೆ ಯುಪಿಎ ಸರ್ಕಾರ ಲಡ್ಡು ಹಾಕಿದೆ. ಶೇ 100 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಆದರೆ, ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೊಸ ತುಟ್ಟಿಭತ್ಯೆ ಹೆಚ್ಚಳ ಆದೇಶ ಜನವರಿ 1, 2014ರಿಂದ ಜಾರಿಗೆ ಬರಲಿದೆ.

ಮುಂಬರುವ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಯುಪಿಎ 2 ಮಹತ್ವದ ಆದೇಶವನ್ನು ಹೊರಹಾಕಿದೆ.ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ (CPI-IW data) ಆಧಾರದಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ.

ಶೇ. 80ರಷ್ಟು ಇರುವ ತುಟ್ಟಿಭತ್ಯೆಯನ್ನು ಶೇ. 90ಕ್ಕೆ ಏರಿಸಬೇಕು ಎಂಬ ಬೇಡಿಕೆಗೆ 2013ರಲ್ಲಿ ಯುಪಿಎ ಸರ್ಕಾರ ಅಸ್ತು ಎಂದಿತ್ತು. ಇದಕ್ಕೂ ಮುನ್ನ 2010ರ ಸೆಪ್ಟೆಂಬರ್ ‌ನಲ್ಲಿ ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು ಶೇ. 10ರಷ್ಟು ಏರಿಕೆ ಮಾಡಿತ್ತು. ಈಗ ಕೂಡಾ ಎರಡಂಕಿಯ ಡಿಎ ಏರಿಕೆ ಮಾಡಲಾಗಿದೆ.

 100% DA for 80 lakh employees and pensioners

ಡೀಸೆಲ್ ಬೆಲೆ ಏರಿಕೆ, ಬಹುಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ, ಅತಿಯಾದ ಹಣದುಬ್ಬರದ ನಡುವೆ ತತ್ತರಿಸಿರುವ ನೌಕರ ವರ್ಗವನ್ನು ಓಲೈಸಿಕೊಳ್ಳಲು ಕೇಂದ್ರದ ಯುಪಿಎ ಸರ್ಕಾರ ಈ ಹಿಂದೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಉದಾಹರಣೆಗಳಿವೆ. ಈ ಬಾರಿ ಮತಬ್ಯಾಂಕ್ ಭದ್ರ ಪಡಿಸಿಕೊಳ್ಳಲು ಈ ಮಟ್ಟದ ಏರಿಕೆ ನೀಡಲಾಗಿದೆ.

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕವಾಗಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.

English summary
UPA Government on Friday(Feb.28) raised dearness allowance to 100 per cent, from 90 per cent, benefiting its 50 lakh employees and 30 lakh pensioners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X