OMG: ಮದುವೆಯಲ್ಲಿ ಮಕ್ಕಳ ಮೈ ಮುಟ್ಟಿದ ಮಹಾಪಾಪಿ, ಇಬ್ಬರು ಅಪ್ರಾಪ್ತರ ಮೇಲೆ ಅತ್ಯಾಚಾರ

ಬಿಜ್ನೋರ್ (ಯುಪಿ) ಮೇ 29: ಮದುವೆ ಸಮಾರಂಭದಲ್ಲಿ ಇಬ್ಬರು ಅಪ್ರಾಪ್ತರ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.

ವಿವಾಹ ಸಮಾರಂಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಶನಿವಾರ ರಾತ್ರಿ ಶೆರ್ಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ಮದುವೆ ಪಾರ್ಟಿ ('ಬರಾತ್') ನಡೆದಿತ್ತು ಎನ್ನಲಾಗಿದೆ.

UP: Two minors raped during wedding ceremony

ಇಬ್ಬರು ಹುಡುಗಿಯರಲ್ಲಿ ಒಬ್ಬರಿಗೆ ಐದು ವರ್ಷ ಮತ್ತು ಇನ್ನೊಬ್ಬರಿಗೆ ಆರು ವರ್ಷ ವಯಸ್ಸು. ಇವರಿಬ್ಬರು ಸಮಾರಂಭದಲ್ಲಿ ಡಿಜೆ ನುಡಿಸುವುದನ್ನು ಆನಂದಿಸುತ್ತಿದ್ದರು. ಇದ್ದಕ್ಕಿದ್ದಂತೆ, ಇಬ್ಬರೂ ಕಣ್ಮರೆಯಾದರು. ಗ್ರಾಮಸ್ಥರು ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಎಲ್ಲೂ ಪತ್ತೆಯಾಗದೇ ಇದ್ದಾಗ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ಹುಡುಕಾಟ ನಡೆಸಿದಾಗ, ಅವರಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಹತ್ತಿರದ ಕಾಡಿನಲ್ಲಿ ಸಿಕ್ಕಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ಅವರು ಭಾನುವಾರ, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಕಾಮುಕ ವ್ಯಕ್ತಿ ಗ್ರಾಮಕ್ಕೆ ಶನಿವಾರ ಮದುವೆ ಪಾರ್ಟಿಗೆಂದು ಬಂದಿದ್ದ ಎಂದು ಪೊಲೀಸ್ ಹೇಳಿದ್ದಾರೆ. ಈ ವೇಳೆ ಆರು ವರ್ಷ ಮತ್ತು ಇನ್ನೊಬ್ಬ ಐದು ವರ್ಷದ ಬಾಲಕಿಯರನ್ನು ಅಪಹರಿಸಲಾಗಿದೆ.

UP: Two minors raped during wedding ceremony

ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಾಹ ಸಮಾರಂಭದ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಯುಪಿಯಲ್ಲಿ ಮತ್ತೊಂದು ಅತ್ಯಾಚಾರ:

ಯುಪಿಯಲ್ಲಿ ಕಳೆದ ಶುಕ್ರವಾರ ಮತ್ತೊಂದು ಅತ್ಯಾಚಾರ ಘಟನೆ ನಡೆದಿದೆ. ಯುಪಿ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಯೊಬ್ಬಳು ಬಿದ್ದು ಸಾವನ್ನಪ್ಪಿದ್ದು, ಅತ್ಯಾಚಾರ ಮತ್ತು ಕೊಲೆ ಆರೋಪ ಕೇಳಿ ಬಂದಿದೆ.

ಅಯೋಧ್ಯೆಯ ಖಾಸಗಿ ಶಾಲೆಯ ಟೆರೇಸ್‌ನಿಂದ ಬಿದ್ದು 15 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಟೆರೇಸ್‌ನಿಂದ ಎಸೆಯುವ ಮೊದಲು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ತಂದೆ ಹೇಳಿಕೊಂಡಿದ್ದಾರೆ.

ಶಾಲೆಯ ಪ್ರಾಂಶುಪಾಲರು ಮತ್ತು ಇಬ್ಬರು ಸಿಬ್ಬಂದಿ, ಒಬ್ಬರು ಕ್ರೀಡಾ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತರಗತಿ ಇಲ್ಲದಿದ್ದರೂ 10ನೇ ತರಗತಿ ವಿದ್ಯಾರ್ಥಿಯನ್ನು ಪ್ರಾಂಶುಪಾಲರು ಬೆಳಗ್ಗೆ 8:30ಕ್ಕೆ ಬಾಲಕಿಯನ್ನು ಶಾಲೆಗೆ ಕರೆ ತಂದಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. "ನನ್ನ ಮಗುವಿಗೆ ಉಯ್ಯಾಲೆಯಿಂದ ಬಿದ್ದು ಗಾಯವಾಗಿದೆ ಎಂದು ಬೆಳಿಗ್ಗೆ 9:50 ರ ಸುಮಾರಿಗೆ ಪ್ರಾಂಶುಪಾಲರು ನನಗೆ ಮಾಹಿತಿ ನೀಡಿದರು. ನಾನು ಶಾಲೆಗೆ ತಲುಪಿದಾಗ, ನನ್ನ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ನನಗೆ ತಿಳಿಸಲಾಯಿತು. ಅವಳ ದೇಹದಾದ್ಯಂತ ಗಾಯದ ಗುರುತುಗಳಿವೆ, ಆ ಗಾಯಗಳು ಸ್ವಿಂಗ್‌ನಿಂದ ಬಿದ್ದರೆ ಸಾಧ್ಯವಿಲ್ಲ" ಎಂದು ತಂದೆ ಆರೋಪಿಸಿದ್ದಾರೆ.

"ಮರಣೋತ್ತರ ಪರೀಕ್ಷೆಯು ಕಟ್ಟಡದಿಂದ ಬಿದ್ದ ಕಾರಣದಿಂದ ಗಾಯಗಳಾಗಿವೆ ಎಂದು ಬಹಿರಂಗಪಡಿಸುತ್ತದೆ. ಮರಣೋತ್ತರ ಪರೀಕ್ಷೆಯ ಪರಿಣಾಮವಾಗಿ ಆಘಾತ ಮತ್ತು ರಕ್ತಸ್ರಾವವು ಸಾವಿಗೆ ಕಾರಣ ಎಂದು ವರದಿಗಳು ಹೇಳುತ್ತವೆ" ಎಂದು ಅಯೋಧ್ಯೆಯ ಪೊಲೀಸ್ ಉಪ ಮಹಾನಿರೀಕ್ಷಕ ಜಿ ಮುನಿರಾಜ್ ಹೇಳಿದ್ದಾರೆ. ವಿದ್ಯಾರ್ಥಿಯನ್ನು ಬೇರೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಪ್ರಾಂಶುಪಾಲರ ಹೇಳಿಕೆಗೆ ವ್ಯತಿರಿಕ್ತವಾಗಿ ಬಾಲಕಿ ಶಾಲಾ ಕಟ್ಟಡದ ಟೆರೇಸ್‌ನಿಂದ ಬಿದ್ದಿದ್ದಾಳೆ ಎಂದು ಕಣ್ಗಾವಲು ದೃಶ್ಯಾವಳಿ ತೋರಿಸುತ್ತದೆ. ಅತ್ಯಾಚಾರ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+