Video: ಮಕ್ಕಳ ಮುಂದೆ ಕುರ್ಚಿಯ ಮೇಲೆ ಕಾಲು ಚಾಚಿ ಗಾಢ ನಿದ್ದೆಗೆ ಜಾರಿದ ಟೀಚರ್!
ಲಕ್ನೋ ಜುಲೈ 31: ಶಿಕ್ಷಕರು ಮಕ್ಕಳಿಗೆ ತಮ್ಮಲ್ಲಿರುವ ಜ್ಞಾನವನ್ನು ನೀಡುತ್ತಾರೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ ಶಾಲಾ ವಿದ್ಯಾರ್ಥಿಗಳ ಮುಂದೆ ಕುರ್ಚಿಯ ಮೇಲೆ ಕಾಲು ಚಾಚಿ ಗಾಢ ನಿದ್ದೆಗೆ ಜಾರಿದ ದೃಶ್ಯ ಕಂಡು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಜನ ಶಿಕ್ಷಕನ ವಿರುದ್ಧ ಆಕ್ರೋಶಗೊಂಡಿದ್ದಾರೆ. ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳ ಮುಂದೆ ಶಿಕ್ಷಕರು ವಿಶ್ರಾಂತಿ ಪಡೆದಿದ್ದು ಕಂಡು ಬಂದಿದೆ. ಮಕ್ಕಳ ಮುಂದೆ ಕುರ್ಚಿಯ ಮೇಲೆ ಕಾಲುಗಳನ್ನು ಚಾಚಿ ಗಾಢ ನಿದ್ರೆ ಮಾಡಿದ್ದು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.

ವಿಡಿಯೋದಲ್ಲಿ ಶಿಕ್ಷಕ ಕರ್ತವ್ಯದ ವೇಳೆ ಮಕ್ಕಳಿಗೆ ಪಾಠ ಮಾಡುವ ಬದಲು ಕುರ್ಚಿಯ ಮೇಲೆ ಮಲಗಿದ್ದಾರೆ. ಶಿಕ್ಷಕ ನಿದ್ದೆಗೆ ಜಾರಿದ್ದಾಗ ಮಕ್ಕಳು ಆಟವಾಡುತ್ತಾ ಗಲಾಟೆ ಮಾಡುತ್ತಾ ಕುಳಿತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಉನ್ನತ ಅಧಿಕಾರಿಗಳು ಶಿಕ್ಷಕನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಲಕ್ನೋನ ಸದರ್ ಬ್ಲಾಕ್‌ನ ಸಂಯೋಜಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಷಯ ತಿಳಿದ ಬಿಎಸ್‌ಎ ಅವರು ತನಿಖೆಗೆ ಬಿಇಒ ಅವರಿಗೆ ಸೂಚನೆ ನೀಡಿದ್ದಾರೆ. ಸಿಕ್ಕಾಪಟ್ಟೆ ಚಳಿ ಇತ್ತು ಸರ್ ಅದಕ್ಕೆ ನಿದ್ದೆ ಬಂದುಬಿಟ್ಟಿದೆ ಎಂದು ಶಿಕ್ಷಕ ವಿಚಾರಣೆ ವೇಳೆ ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಬಿಎಸ್‌ಎ ಶಾಲಿನಿ ಶ್ರೀವಾಸ್ತವ ಅವರು ಬ್ಲಾಕ್ ಶಿಕ್ಷಣಾಧಿಕಾರಿ ಸದಾರ್ ದೇವ್ ಮುನಿ ವರ್ಮಾ ಅವರನ್ನು ಶಾಲೆಗೆ ಕಳುಹಿಸಿ ಸತ್ಯಾಸತ್ಯತೆ ಪರಿಶೀಲಿಸಿದರು. ಸೋಮವಾರ ಶಾಲೆಗೆ ಆಗಮಿಸಿದ ಬ್ಲಾಕ್ ಶಿಕ್ಷಣಾಧಿಕಾರಿ ಈ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದಿದ್ದಾರೆ. ಅವರು ಶಿಕ್ಷಕರ ಸಮಜಾಯಿಸಿಯ ವರದಿಯನ್ನು ಬಿಎಸ್ಎಗೆ ಕಳುಹಿಸಿದ್ದಾರೆ.
ಶಾಲಾ ವೇಳೆಯಲ್ಲಿ ನಿದ್ದೆ ಮಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡುವಾಗ ಶಾಲೆ ತಂಪಾಗಿತ್ತು ಅಲ್ಲದೆ ತಮಗೆ ಶೀತದಿಂದ ಹುಷಾರಿಲ್ಲದೇ ನಿದ್ದೆಗೆ ಜಾರಿದ್ದಾಗಿ ಶಿಕ್ಷಕರು ತಿಳಿಸಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ತನಿಖೆಯ ಹೊಣೆಯನ್ನು ಬಿಇಒ ಸದರ್ ಅವರಿಗೆ ವಹಿಸಲಾಗಿದೆ ಎಂದು ಬಿಎಸ್‌ಎ ಶಾಲಿನಿ ಶ್ರೀವಾಸ್ತವ ತಿಳಿಸಿದ್ದಾರೆ. ತನಿಖಾ ವರದಿ ಬಂದ ಮೇಲೆ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇನ್ನೂ ಶಾಲೆಯಲ್ಲಿ ಶಿಕ್ಷಕರಿಂದ ಅನುಚಿತ ವರ್ತನೆಯ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಇತ್ತೀಚೆಗೆ ಕರ್ನಾಟಕದ ತುಮಕೂರಿನಲ್ಲಿ ಶಿಕ್ಷಕ ಹಾಗೂ ಶಿಕ್ಷಕಿ ನಡುವೆ ಪ್ರೇಮ ಹುಟ್ಟಿಕೊಂಡ ಕಥೆಯನ್ನು ಶಿಕ್ಷಕನ ಪತ್ನಿ ಬಿಚ್ಚಿಟ್ಟಿದ್ದರು.
ಒಂದೇ ಶಾಲೆಯ ಶಿಕ್ಷಕ-ಶಿಕ್ಷಕಿ ಲವ್ವಿ ಡವ್ವಿ
ಅವನು ಒಂದು ಶಾಲೆಯ ಶಿಕ್ಷಕ, ಇವಳೂ ಅದೇ ಶಾಲೆಯಲ್ಲಿ ಸಹಶಿಕ್ಷಕಿ. ಮಕ್ಕಳಿಗೆ ಒಳಿತಿನ ಪಾಠ ಮಾಡಬೇಕಾದ ಇವರಿಬ್ಬರು ತಾವಿಬ್ಬರೇ ಕೋಣೆಯಲ್ಲಿ ಕುಳಿತು ಕಾಮದಾಟ ಆಡಲು ಶುರು ಮಾಡಿದ್ದರು. ಆದರೆ, ಕದ್ದು ಮುಚ್ಚಿ ನಡೆಯೋ ಈ ವ್ಯವಹಾರಗಳೆಲ್ಲ ಎಷ್ಟು ದಿನ ನಡೆಯಲು ಸಾಧ್ಯ. ಶಿಕ್ಷಕನ ಹೆಂಡತಿ ರೆಡ್ ಹ್ಯಾಂಡ್ ಆಗಿ ಇವರಿಬ್ಬರನ್ನು ಹಿಡಿದಿರುವುದು ವರದಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಈ ಘಟನೆ ನಡೆದಿದೆ.
ಇಂತಹ ಘಟನೆಗಳು ದೇಶದೆಲ್ಲೆಡೆಯಿಂದ ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಜಾಋಇಗೆ ತರಬೇಕಿದೆ.












Click it and Unblock the Notifications