ಕೈಲಿದ್ದದ್ದು 10 ಸಾವಿರದ ಫೋನ್, ಕಲಿತದ್ದು ಯೂಟ್ಯೂಬ್‌ನಲ್ಲಿ: ಇಂಗ್ಲೀಷ್ ಪಾಠ ಮಾಡಿ ಇಂಟರ್ನೆಟ್ ಸೆನ್ಸೇಶನ್ ಆದ ಹಳ್ಳಿ ಮಹಿಳೆ
ಜೀವನದಲ್ಲಿ ದಿಢೀರನೆ ಎದುರಾಗುವ ಒಂದಿಷ್ಟು ಕಷ್ಟಗಳು ಕೆಲವರನ್ನ ಕುಗ್ಗಿಸಿದರೆ, ಮತ್ತೆ ಕೆಲವರನ್ನ ಸಾಧನೆಯ ಶಿಖರಕ್ಕೇರಿಸುತ್ತವೆ. ಉತ್ತರ ಪ್ರದೇಶದ ಹಳ್ಳಿಯೊಂದರ ಗೃಹಿಣಿಯೊಬ್ಬರ ಬದುಕು ಇದಕ್ಕೆ ಒಂದು ಒಳ್ಳೇಯ ಉದಾಹರಣೆಯಾಗಿದೆ.
ಕೇವಲ 12ನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿದ್ದರೂ, ಇಂದು ತಮ್ಮ ಹಳ್ಳಿಯ ಮನೆಯಿಂದಲೇ ಕುಳಿತು ಲಕ್ಷಾಂತರ ಜನರಿಗೆ ಆನ್‌ಲೈನ್‌ನಲ್ಲಿ ಇಂಗ್ಲೀಷ್ ಕಲಿಸುವ ಮೂಲಕ ದೇಹಾತಿ ಮೇಡಂ ಯಶೋದಾ ಎಂದೇ ವಿಶ್ವದಾದ್ಯಂತ ಖ್ಯಾತರಾಗಿದ್ದಾರೆ. ಇವರ ಈ ದಿಟ್ಟತನ ಹಾಗೂ ಯಶಸ್ಸಿನ ಹಾದಿ ಇಂದಿನ ಅದೆಷ್ಟೋ ಮಹಿಳೆಯರಿಗೆ ಬಹುದೊಡ್ಡ ಸ್ಫೂರ್ತಿಯಾಗಿದೆ.

ಗಂಡನ ಅಪಘಾತ ಮತ್ತು ಆರ್ಥಿಕ ಸಂಕಷ್ಟ ಎದುರಿಸಿದ ಯಶೋದಾ ಲೋಧಿ
ಯಶೋದಾ ಲೋಧಿ ಅವರ ಜೀವನ ಎಲ್ಲರಂತೆ ಸಂತೋಷದಿಂದ ಸರಿಯಾಗಿ ಸಾಗುತ್ತಿತ್ತು. ಆದರೆ, ಅವರ ಪತಿ ಭೀಕರ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು, ದುಡಿಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದಾಗ ಇಡೀ ಕುಟುಂಬ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು.
ಮನೆಯ ನಿರ್ವಹಣೆ ಹಾಗೂ ಕುಟುಂಬವನ್ನ ಮುನ್ನೆಡೆಸುವ ಬಹುದೊಡ್ಡ ಜವಾಬ್ದಾರಿ ಯಶೋದಾ ಅವರ ಹೆಗಲೇರಿತು. ಅವರ ಬಳಿ ಯಾವುದೇ ಉನ್ನತ ಶಿಕ್ಷಣದ ಡಿಗ್ರಿ ಇರಲಿಲ್ಲ ಅಥವಾ ಯಶಸ್ಸಿನತ್ತ ಕೊಂಡೊಯ್ಯುವ ಸ್ಪಷ್ಟ ಮಾರ್ಗದರ್ಶನವೂ ಇರಲಿಲ್ಲ. ಆದರೆ, ಜೀವನದಲ್ಲಿ ಏನನ್ನಾದರೂ ಕಲಿಯಬೇಕು ಮತ್ತು ಸಾಧಿಸಿ ತೋರಿಸಬೇಕು ಎಂಬ ಛಲ ಮಾತ್ರ ಅವರಲ್ಲಿತ್ತು. ಇದೇ ಛಲ ಅವರನ್ನ ಡಿಜಿಟಲ್ ಲೋಕದತ್ತ ಹೆಜ್ಜೆ ಇಡುವಂತೆ ಮಾಡಿತು.
10 ಸಾವಿರದ ಸ್ಮಾರ್ಟ್‌ಫೋನ್ ಮೂಲಕ ಯೂಟ್ಯೂಬ್ ಸ್ಟಾರ್ ಆದ ಪಯಣ
ಕುಟುಂಬಕ್ಕೆ ಆಸರೆಯಾಗಲು ನಿರ್ಧರಿಸಿದ ಯಶೋದಾ, ತಮ್ಮ ಬಳಿಯಿದ್ದ ಕೇವಲ 10,000 ರೂಪಾಯಿಯ ಸಾಮಾನ್ಯ ಸ್ಮಾರ್ಟ್‌ಫೋನ ಯೂಟ್ಯೂಬ್ ಮೂಲಕ ತಾವೇ ಖುದ್ದಾಗಿ ಇಂಗ್ಲೀಷ್ ಕಲಿಯಲು ಆರಂಭಿಸಿದರು. ಕಲಿಯುತ್ತಲೇ, ತಾವು ಕಲಿತದ್ದನ್ನ ಇತರರಿಗೂ ಹೇಳಿಕೊಡುವ ಉದ್ದೇಶದಿಂದ ಡಿಸೆಂಬರ್ 2023ರಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನ ಆರಂಭಿಸಿದರು.
ಇಂಗ್ಲೀಷ್ ಕಲಿಯುವಾಗ ತಮಗೆ ಎದುರಾದ ಕಷ್ಟಗಳನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡು, ಅತ್ಯಂತ ಸರಳವಾಗಿ ಮತ್ತು ಹಳ್ಳಿಯ ಜನರಿಗೂ ಅರ್ಥವಾಗುವ ಶೈಲಿಯಲ್ಲಿ ಇಂಗ್ಲೀಷ್ ಪಾಠ ಮಾಡುವ ವಿಡಿಯೋಗಳನ್ನ ಅಪ್‌ಲೋಡ್ ಮಾಡಲು ಶುರುಮಾಡಿದರು.
A family crisis pushed her to find a way to earn. Today, she’s winning hearts by teaching English from her village home.When a road accident left her husband unable to work, Yashoda Lodhi knew her family needed support. A homemaker from Uttar Pradesh who had studied only up to Class 12, she had no fancy degree or roadmap to success.But she was willing to learn.She turned to YouTube to teach herself English and began making videos, practising what she learnt along the way.With a ₹10,000 smartphone and mobile data, Yashoda launched her YouTube channel in December 2023. Soon, her simple, relatable English lessons began reaching people who struggled with the language just as she once had.Today, popularly known as Dehati Madam, she encourages women, especially homemakers, to build their confidence and work towards financial independence.In October 2026, her efforts earned her a Power Creator Award.Yashoda’s journey is proof that you don’t need to know it all to begin. You just need to believe in yourself enough to start.#DehatiMadam #YashodaLodhi #PowerCreatorAwards2026 #WomenEmpowerment #InspiringStories[Yashoda Lodhi Dehati Madam, English with Dehati Madam, Dehati Madam YouTube journey, Power Creator Awards 2026 winner]
— The Better India (@thebetterindia) October 26, 2026
ಮಹಿಳಾ ಸಬಲೀಕರಣಕ್ಕೆ ನಾಂದಿ
ಇವರ ಸರಳ ಶೈಲಿಯ ಪಾಠಗಳು ಇಂಗ್ಲೀಷ್ ಭಾಷೆಯ ಬಗ್ಗೆ ಭಯವಿದ್ದವರಿಗೆ ಹಾಗೂ ಕಲಿಯಲು ಕಷ್ಟಪಡುತ್ತಿದ್ದವರಿಗೆ ಬಹಳ ಬೇಗನೆ ಹತ್ತಿರವಾಯಿತು. ನೋಡನೋಡುತ್ತಿದ್ದಂತೆ ಯಶೋದಾ ಅವರು ಇಂಟರ್ನೆಟ್ ಲೋಕದಲ್ಲಿ ದೇಹಾತಿ ಮೇಡಂ ಎಂದೇ ಜನಪ್ರಿಯರಾದರು.
ಕೇವಲ ಭಾಷೆ ಕಲಿಸುವುದು ಮಾತ್ರವಲ್ಲದೆ, ಗ್ರಾಮೀಣ ಮಹಿಳೆಯರು ಮತ್ತು ಗೃಹಿಣಿಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಕೂಡ ಇವರು ಮಾಡುತ್ತಿದ್ದಾರೆ. ಸೀರೆ ಉಟ್ಟು, ತಲೆಗೆ ಸೆರಗು ಹೊದ್ದು ತಮ್ಮ ಹಳ್ಳಿಯ ಮನೆಯ ಹಿತ್ತಲಿನಲ್ಲಿ ನಿಂತು ಇಂಗ್ಲಿಷ್ ಮಾತನಾಡುವ ಇವರ ಶೈಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ.
2026ರ ಪವರ್ ಕ್ರಿಯೇಟರ್ ಅವಾರ್ಡ್ ಪುರಸ್ಕಾರ
ಸತತ ಪರಿಶ್ರಮ, ಕಲಿಯುವ ಆಸಕ್ತಿ ಹಾಗೂ ಸಮಾಜಕ್ಕೆ ಏನಾದರೂ ಉತ್ತಮವಾದುದ್ದನ್ನು ನೀಡುವ ಯಶೋದಾ ಅವರ ಪ್ರಯತ್ನಕ್ಕೆ ತಕ್ಕ ಪ್ರತಿಫಲವೂ ಲಭಿಸಿದೆ. ಇದೇ ಅಕ್ಟೋಬರ್ 2026ರಲ್ಲಿ ಅವರ ಈ ಸಾಧನೆಯನ್ನ ಗುರುತಿಸಿ ಅವರಿಗೆ ಪ್ರತಿಷ್ಠಿತ ಪವರ್ ಕ್ರಿಯೇಟರ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಬದುಕಿನಲ್ಲಿ ಏನನ್ನಾದರೂ ಪ್ರಾರಂಭಿಸಲು ಅಥವಾ ಸಾಧಿಸಲು ಎಲ್ಲವೂ ತಿಳಿದಿರಬೇಕೆಂದಿಲ್ಲ, ಬದಲಾಗಿ ನಮ್ಮ ಮೇಲಿನ ನಂಬಿಕೆ ಹಾಗೂ ಹೊಸ ಹೆಜ್ಜೆ ಇಡುವ ಧೈರ್ಯವಿದ್ದರೆ ಸಾಕು ಎಂಬುದಕ್ಕೆ ದೇಹಾತಿ ಮೇಡಂ ಯಶೋದಾ ಅವರ ಈ ಕಥೆಯೇ ಸ್ಫೂರ್ತಿ.


Click it and Unblock the Notifications
