ಉತ್ತರ ಪ್ರದೇಶ: ಆ. 15ರಂದು ರಾಷ್ಟ್ರಧ್ವಜ ಹಾರಿಸಲು ಮದರಸಾಗಳಿಗೆ ಸೂಚನೆ

ಉತ್ತರ ಪ್ರದೇಶದ ಎಲ್ಲಾ ಮದರಸಾಗಳಿಗೆ ಅಲ್ಲಿನ ಸರ್ಕಾರದಿಂದ ಕಟ್ಟುನಿಟ್ಟಾದ ಸೂಚನೆ. ಸ್ವಾತಂತ್ರೋತ್ಸವದಂದು ಎಲ್ಲಾ ಮದರಸಾಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಆದೇಶ.

ನವದೆಹಲಿ, ಆಗಸ್ಟ್ 11: ಇದೇ ತಿಂಗಳ 15ರಂದು ನಡೆಯಲಿರುವ 71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಉತ್ತರ ಪ್ರದೇಶದ ಎಲ್ಲಾ ಮದರಸಾಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿಸಿದೆ.

'ಉತ್ತರ ಪ್ರದೇಶ ಮದರಸಾ ಶಿಕ್ಷಣ ಪರಿಷತ್' ವತಿಯಿಂದ ಈ ಆದೇಶ ಹೊರಡಿಸಲಾಗಿದ್ದು, ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಎಲ್ಲಾ ಮದರಸಾಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು. ಮದರಸಾಗಳ ಎಲ್ಲಾ ಮಕ್ಕಳೂ, ಶಿಕ್ಷಕ ವೃಂದವು ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕೆಂದು ಮದರಸಾಗಳಿಗೆ ಹೊರಡಿಸಲಾಗಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

UP govt asks madrasas to host cultural events on Independence Day

ಈ ಹಿಂದೆಯೂ, ಇಂಥ ಸೂಚನೆಗಳು ಮದರಸಾಗಳಿಗೆ ರಾಜ್ಯ ಸರ್ಕಾರದಿಂದ ರವಾನೆಯಾಗುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸೂಚನೆ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.

ಇದಿಷ್ಟೇ ಅಲ್ಲ, ಎಲ್ಲಾ ಮದರಸಾಗಳೂ ತಮ್ಮಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಗಳ ಫೋಟೋ ಹಾಗೂ ವಿಡಿಯೋಗಳನ್ನು ಶಿಕ್ಷಣ ಪರಿಷತ್ ಗೆ ಕಳುಹಿಸಬೇಕೆಂದು ತಾಕೀತು ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ, ಮದರಸಾ ಶಿಕ್ಷಣ ಪರಿಷತ್ ನಿಂದ ಅಂಗೀಕೃತವಾದ 8000 ಮದರಸಾಗಳಿದ್ದು, ಇವುಗಳಲ್ಲಿ 560 ಮದರಸಾಗಳು ರಾಜ್ಯ ಸರ್ಕಾರದ ಸಂಪೂರ್ಣ ಅನುದಾನಿತ ಶಿಕ್ಷಣ ಸಂಸ್ಥೆಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+