Get Updates
Get notified of breaking news, exclusive insights, and must-see stories!

ಭಾರತರತ್ನ ಪುರಸ್ಕೃತರಿಂದ ಈ ಬಾರಿಯೂ ಮತದಾನ ಸಾಧ್ಯವಿಲ್ಲ!

ನವಾಬರ ನಗರಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಆಯ್ಕೆಯಾಗಿ, ಲಕ್ನೋ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 141ನೇ ಸಂಖ್ಯೆ ಹೊಂದಿರುವ 'ಭಾರತ ರತ್ನ' ಈ ಬಾರಿಯೂ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ.

ಲಕ್ನೋ, ಫೆಬ್ರವರಿ 17: ನವಾಬರ ನಗರಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಆಯ್ಕೆಯಾಗಿ, ಲಕ್ನೋ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 141ನೇ ಸಂಖ್ಯೆ ಹೊಂದಿರುವ 'ಭಾರತ ರತ್ನ' ಈ ಬಾರಿಯೂ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ.

ಹೌದು, ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮತದಾರರ ಗುರುತಿನ ಸಂಖ್ಯೆ141. ಅನಾರೋಗ್ಯ ಪೀಡಿತರಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿರುವ ವಾಜಪೇಯಿ ಅವರು 2004ರ ಲೋಕಸಭಾ ಚುನಾವಣೆಯಲ್ಲಿ ಕೊನೆ ಬಾರಿ ಮತದಾನ ಮಾಡಿದ್ದರು. ನಂತರ ಮತದಾನ ಮಾಡಿಲ್ಲ.

UP Elections 2017: Former PM Atal Bihari Vajpayee may not cast vote

1991,1996,1998,1999 ಮತ್ತು 2004ರ ಲೋಕಸಭಾ ಚುನಾವಣೆಗಳಲ್ಲಿ ಲಕ್ನೋ ಕ್ಷೇತ್ರದಿಂದ ವಾಜಪೇಯಿ ಆಯ್ಕೆಯಾಗಿದ್ದರು. 2009 ಮತ್ತು 2014ರಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆದ್ದುಕೊಂಡಿದ್ದಾರೆ.

2007 ಮತ್ತು 2012ರ ವಿಧಾನಸಭಾ ಚುನಾವಣೆಗಳು ಹಾಗೂ 2009 ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಮಾಡಲು ಅವರಿಗೆ ಸಾಧ್ಯವಾಗಿಲ್ಲ.

ಫೆಬ್ರವರಿ 19ರಂದು ವಿಧಾನಸಭಾ ಚುನಾವಣೆಯಲ್ಲಿಯೂ ಮತ ಚಲಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ವಾಜಪೇಯಿ ಅವರ ನಿಕಟ ಸಹಾಯಕ ಶಿವಕುಮಾರ್ ತಿಳಿಸಿದರು. ವಾಜಪೇಯಿಯವರು ಮತದಾನ ಮಾಡಬೇಕಾಗಿರುವ ಮತಗಟ್ಟೆ ಲಕ್ನೋ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸ್ಥಾಪನೆಗೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+