ಹೇಳಿಕೆ ನೀಡದಂತೆ ಬಿಜೆಪಿ ಶಾಸಕನಿಗೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ

ಲಕ್ನೋ ಫೆಬ್ರವರಿ 20: ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿಗೆ ಮತ ಹಾಕುವಂತೆ ಪ್ರಚೋದನಕಾರಿ, ಬೆದರಿಕೆ ಒಡ್ಡುವಂಥ ಹೇಳಿಕೆ ನೀಡಿದ್ದ ತೆಲಂಗಾಣದ ಬಿಜೆಪಿ ಮುಖಂಡ ಟಿ ರಾಜಾ ಸಿಂಗ್‌ಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಹೈದರಾಬಾದ್‌ನ ಗೋಶಾಮಹಲ್‌ನ ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ಗೆ 72 ಗಂಟೆಗಳ ಕಾಲ ಯಾವುದೇ ಹೇಳಿಕೆ ನೀಡದಂತೆ ಆಯೋಗ ಆದೇಶಿಸಿದೆ.

ಚುನಾವಣಾ ಆಯೋಗವು ಕಳೆದ ಬುಧವಾರವೇ ಶಾಸಕ ರಾಜಾ ಸಿಂಗ್‌ಗೆ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ಗೆ ಉತ್ತರಿಸಲು ಆಯೋಗ 24 ಗಂಟೆಗಳ ಕಾಲಾವಕಾಶ ನೀಡಿತ್ತು.

ಚುನಾವಣಾ ನೀತಿ ಸಂಹಿತೆ, ಭಾರತೀಯ ದಂಡ ಸಂಹಿತೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳನ್ನು ಪ್ರಾಥಮಿಕವಾಗಿ ಉಲ್ಲಂಘಿಸಿದ್ದಾರೆ ಎಂದು ಆಯೋಗ ತಿಳಿಸಿದೆ.

UP Election 2022: 72-Hour Statement Ban on MLA for ‘Vote for Yogi or Face Bulldozers’ Remark

ಸಿಂಗ್ ಅವರು ಹೆಚ್ಚಿನ ಸಮಯವನ್ನು ನೀಡಿದ್ದರೂ ನೋಟಿಸ್ ಗೆ ಪ್ರತಿಕ್ರಿಯಿಸಲು ವಿಫಲರಾಗಿದ್ದಾರೆ ಮತ್ತು ಅವರ ಹೇಳಿಕೆಯು "ಸಂಪೂರ್ಣ ಬೇಜವಾಬ್ದಾರಿ" ಮತ್ತು ಉತ್ತರ ಪ್ರದೇಶ ಚುನಾವಣೆಯಲ್ಲಿ "ಅನುಚಿತ ಪ್ರಭಾವ" ಬೀರಬಹುದು. ಅವರು ಭಾರತೀಯ ದಂಡ ಸಂಹಿತೆ ಸೆಕ್ಷನ್ 171 ಸಿ ಮತ್ತು 171 ಎಫ್, ಜನರ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 123 ಮತ್ತು ಮಾದರಿ ನೀತಿ ಸಂಹಿತೆಯ ಭಾಗ 1 ರ ಪ್ಯಾರಾ 4 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಚುನಾವಣಾ ಅಧಿಕಾರಿಗಳಿಗೆ ಲಭ್ಯವಾದ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ ಎಂದು ಆಯೋಗ ಶನಿವಾರದ ತನ್ನ ಆದೇಶದಲ್ಲಿ ಹೇಳಿದೆ.

ಶನಿವಾರ(ಫೆ.19) ಸಂಜೆ 06:00 ಗಂಟೆಯಿಂದ 72 ಗಂಟೆಗಳ ಕಾಲ ಬಿಜೆಪಿ ಶಾಸಕ ರಾಜಾಸಿಂಗ್ ಯಾವುದೇ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು, ರ್‍ಯಾಲಿಗಳು ಅಥವಾ ರೋಡ್‌ಶೋಗಳನ್ನು ನಡೆಸುವುದನ್ನು ಮತ್ತು ಯಾವುದೇ ಮಾಧ್ಯಮಗಳ ಮೂಲಕ ಮತದಾನಕ್ಕೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ಮಾಡುವುದನ್ನು ಆಯೋಗ ನಿಷೇಧಿಸಿದೆ.

ಹೇಳಿಕೆ ಮೂಲಕ ವಿವಾದ
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಬೆಂಬಲಿಸಿ ಮತ ಚಲಾಯಿಸದ "ದೇಶದ್ರೋಹಿಗಳು" ಚುನಾವಣೆಯ ನಂತರದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಕಳೆದ ಮಂಗಳವಾರ ತಮ್ಮ ಹೇಳಿಕೆ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು.

"ಬಿಜೆಪಿಗೆ ಮತ ಹಾಕದವರಿಗೆ, ಯೋಗಿ ಜಿ ಸಾವಿರಾರು ಸಂಖ್ಯೆಯಲ್ಲಿ ಜೆಸಿಬಿ ಮತ್ತು ಬುಲ್ಡೋಜರ್‌ಗಳಿಗೆ ಆದೇಶ ನೀಡಿದ್ದಾರೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಈಗಾಗಲೆ ಅವರು ಉತ್ತರ ಪ್ರದೇಶದತ್ತ ಸಾಗುತ್ತಿದ್ದಾರೆ. ಚುನಾವಣೆಯ ನಂತರ ಯೋಗಿ ಜಿ ಅವರನ್ನು ಬೆಂಬಲಿಸದ ಪ್ರದೇಶಗಳನ್ನು ಗುರುತಿಸಲಾಗುವುದು. ಜೆಸಿಬಿ ಮತ್ತು ಬುಲ್ಡೋಜರ್‌ಗಳನ್ನು ಯಾವುದಕ್ಕೆ ಬಳಸುತ್ತಾರೆ ಎಂಬುದು ನಿಮಗೆ ತಿಳಿದಿದೆ ಎಂದು ಹೈದರಾಬಾದ್‌ನ ಗೋಶಾಮಹಲ್‌ನ ಶಾಸಕ ಸಿಂಗ್ ಹೇಳಿದ್ದರು.

ಉತ್ತರ ಪ್ರದೇಶದಲ್ಲಿ ಎರಡು ಹಂತದ ಚುನಾವಣೆ ಮುಗಿದಿದ್ದು, ರಾಜ್ಯದಲ್ಲಿ ಇನ್ನೂ ಐದು ಹಂತಗಳ ಮತದಾನ ಬಾಕಿ ಇದೆ. ಮೂರನೇ ಹಂತದ ಚುನಾವಣೆ ಭಾನುವಾರ ಜಾರಿಯಲ್ಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮೂರನೇ ಹಂತದಲ್ಲಿ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಲಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪರ್ಧಿಸುತ್ತಿರುವ ಕರ್ಹಾಲ್ ವಿಧಾನಸಭಾ ಕ್ಷೇತ್ರಕ್ಕೂ ಭಾನುವಾರ ಈ ಹಂತದಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರದಿಂದ ಬಿಜೆಪಿ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಾಘೇಲ್ ಅವರನ್ನು ಕಣಕ್ಕಿಳಿಸಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6ರವರೆಗೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+