ಮೋದಿ ಹತ್ಯೆಯ ಮಾತನ್ನಾಡಿದ ಕಾಂಗ್ರೆಸ್ಸಿಗ ಅರೆಸ್ಟ್
ಸಹಾರನಪುರ (ಉತ್ತರ ಪ್ರದೇಶ), ಮಾರ್ಚ್ 29: ಚುನಾವಣೆಯ ಹೊಸ್ತಿಲಲ್ಲಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಪೀಸ್ ಪೀಸ್ ಮಾಡಿ ಕಡಿದುಹಾಕುವುದಾಗಿ ಬೆದರಿಕೆಯೊಡ್ಡಿದ್ದ ಸಹಾರನಪುರ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, 40 ವರ್ಷದ ಇಮ್ರಾನ್ ಮಸೂದ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ಇಂದು ನ್ಯಾಯಾಲಯಕ್ಕೆ ಜಾಹರುಪಡಿಸಿದಾಗ ಮಸೂದನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದರಿಂದ ಮೋದಿಯ ವಿರುದ್ಧ ಮನಸಾರೆ ಬೈಗುಳ ಪ್ರಯೋಗ ಮಾಡುತ್ತಿದ್ದ ಕಾಂಗ್ರೆಸ್ ಮಂದಿಗೆ ಚುನಾವಣೆ ಆಯೋಗ ಎಚ್ಚರಿಕೆ ಸಂದೇಶ ರವಾನಿಸಿದ್ದರೆ ಮಸೂದ್ ಚುನಾವಣಾ ಸ್ಪರ್ಧೆಯ ಮೇಲೆ ಅಂಧಕಾರ ಆವರಿಸಿದೆ. (ಮೋದಿ ನಾಡಿನಲ್ಲಿ ಮುಸ್ಲಿಮರು ಸುಭಿಕ್ಷವಾಗಿದ್ದಾರೆ)

ಈ ಇಮ್ರಾನ್ ಮಸೂದ್ ಯಾರಪ್ಪಾ ಎಂದು ನೋಡಿದರೆ ಇತ್ತೀಚೆಗೆ ಭ್ರಷ್ಟಾಚಾರ ಆರೋಪ ಸಾಬೀತಾಗಿ ರಾಜ್ಯಸಭೆ ಸ್ಥಾನ ಕಳೆದುಕೊಂಡ ಮೊತ್ತಮೊದಲ ಸಂಸದ ರಷೀದ್ ಮಸೂದ್ ಅವರ ಸೋದರ ಸಂಬಂಧಿ. (ಲಂಚ: ಜೈಲು ಪಾಲಾದ ಮಸೂದ್, ಸಂಸದ ಸ್ಥಾನ ಹೋಯ್ತು)
ವಿಡಿಯೋ ಬಗ್ಗೆ ಪತ್ರಿಕೆಯೊಂದಕ್ಕೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ಮಸೂದ್ ಇದು ಹಳೆ ವಿಡಿಯೋ, ನಾನು ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿ ಮೋದಿಗೆ ಉತ್ತರ ನೀಡುತ್ತೇನೆ. ನಾನೇನು ಹೇಳಬಾರದ್ದು ಹೇಳಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದರು. (ಬಿಜೆಪಿ ಮೋದಿ ವಿರುದ್ಧ ಕಾಂಗ್ರೆಸ್ಸಿಗರ 'ನಪುಂಸಕ ಧ್ವನಿ')
ಉತ್ತರ ಪ್ರದೇಶ ಗುಜರಾತ್ ಅಲ್ಲ, ಗುಜರಾತಿನಲ್ಲಿ ಕೇವಲ 4% ಮುಸ್ಲಿಮರಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ 22% ಮುಸ್ಲಿಮರಿದ್ದಾರೆ. ನಾನು ನರೇಂದ್ರ ಮೋದಿ ಅವರ ವಿರುದ್ಧ ಹೋರಾಡುತ್ತೇನೆ, ನನಗೆ ಮೋದಿಗೆ ಹೇಗೆ ಉತ್ತರ ನೀಡಬೇಕೆಂದು ತಿಳಿದಿದೆ. ನಾವು ಮೋದಿಯನ್ನು ಕತ್ತರಿಸಿ ಹಾಕುತ್ತೇವೆ. ಮೋದಿಯವರು ಗುಜರಾತ್ ದಂಗೆಯ ವಿಚಾರದಲ್ಲಿ ತಪ್ಪೊಪ್ಪಿ ಕೊಂಡರೆ ಮಾತ್ರ ಕ್ಷಮೆ ಕೋರುವುದಾಗಿ ಮಸೂದ್ ಹೇಳಿದ್ದರು.












Click it and Unblock the Notifications