ಉತ್ತರ ಪ್ರದೇಶ: ಹೊಸ 'ರಾಜಧಾನಿ ಎಕ್ಸ್‌ಪ್ರೆಸ್' ಬಸ್ ಸೇವೆಗೆ ಚಾಲನೆ ನೀಡಿದ ಸಿಎಂ ಯೋಗಿ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ UPSRTC ನೂತನ 'ರಾಜಧಾನಿ ಎಕ್ಸ್‌ಪ್ರೆಸ್' ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದರು. ಈ ಸೇವೆ ಲಕ್ನೋದಿಂದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಿಗೆ ಸಾರಿಗೆ ಸಂಪರ್ಕ ಒದಗಿಸಲಿದೆ.
ಲಕ್ನೋ, ಮಾರ್ಚ್ 05: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ UPSRTC ನೂತನ ಬಸ್ ಸೇವೆಯಾಗಿರುವ 'ರಾಜಧಾನಿ ಎಕ್ಸ್‌ಪ್ರೆಸ್'ಗೆ ಹಸಿರು ನಿಶಾನೆ ತೋರಿಸಿದರು. ಈ ನೂತನ ಸೇವೆಯು ಲಕ್ನೋ ನಗರದಿಂದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಿಗೆ ಸಾರಿಗೆ ಸಂಪರ್ಕ ಒದಗಿಸಲಿದೆ.
ಈ ವೇಳೆ ಮಾತನಾಡಿದ ಅವರು, ಒಟ್ಟು ಸುಮಾರು ಉತ್ತರ ಪ್ರದೇಶದ ರಾಜ್ಯದ ಒಂದು ಲಕ್ಷ ಕಂದಾಯ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಇದೇ ರೀತಿ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

ನಗರದ ವಿವಿಧ ಮಾರ್ಗಗಳಿಗೆ 76 ರಾಜಧಾನಿ ಎಕ್ಸ್‌ಪ್ರೆಸ್ ಮತ್ತು 39 ಸಾಮಾನ್ಯ ಬಸ್‌ಗಳು ಸೇರಿ ಒಟ್ಟು 115 ಹೊಸ ಬಸ್‌ಗಳ ಸಾರಿಗೆ ಸೇವೆ ಇಂದಿನಿಂದ ಆರಂಭವಾಯಿತು. ಈ ಬಸ್ ಸೇವೆಗಳ ಪ್ರಯಾಣದ ಟಿಕೆಟ್ ಅನ್ನು ಆನ್‌ಲೈನ್ ಕಾಯ್ದಿರಿಸುವಿಕೆಗೆ ಅನುಕೂಲವಾಗಲೆಂದು 'ಯುಪಿ ರಾಹಿ' ಅಪ್ಲಿಕೇಶನ್ ಸಹ ಆರಂಭಿಸಲಾಯಿತು. ಅಲ್ಲದೇ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (UPSRTC) 50 ವರ್ಷ ಪೂರೈಸಿದ್ದಕ್ಕಾಗಿ ಗಣ್ಯರು ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು, 50 ವರ್ಷ ಪೂರೈಸಿದ ನಿಗಮಕ್ಕೆ ಅಭಿನಂದಿಸಿದರು. ಈ ಸಾರಿಗೆ ನಿಗಮದ ಅಮೃತ ಕಾಲದ ಈ ಮೊದಲ ವರ್ಷದಲ್ಲಿ ತನ್ನ ಸುವರ್ಣ ಪಯಣವನ್ನು ಪಾಲಿಸುತ್ತಾ ಹೊಸ, ವೈಭವಯುತ ಪ್ರಯಾಣದತ್ತ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಪ್ರಯಾಗರಾಜ ಕುಂಭ ಮೇಳ ಹಾಗೂ ಕೋವಿಡ್ ಕಾಲದಲ್ಲಿ ಈ ಸಾರಿಗೆ ನಿಗಮವು ಅಮೋಘ ಸೇವೆ ನೀಡಿದೆ. 45 ದಿನಗಳ ಕುಂಭವು 24 ಕೋಟಿ ಭಕ್ತರನ್ನು ಸೆಳೆಯಿತು. ರಾಜ್ಯ ಸರ್ಕಾರವು ಕುಂಭಮೇಳಕ್ಕಾಗಿ ನಿಗಮದಿಂದ 5,000 ಹೊಸ ಬಸ್‌ಗಳನ್ನು ಒದಗಿಸಿತ. ಈ ವೇಳೆ ನಿಗಮ ಸಮರ್ಪಕವಾಗಿ ಕೆಲಸ ಮಾಡಿತು ಎಂದರು.
ಕಳೆದ 2020 ಮಾರ್ಚ್ 25ರಂದು ಲಾಕ್‌ಡೌನ್ ಜಾರಿಯಾದಾಗ ನವದೆಹಲಿ, ಪಂಜಾಬ್ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಕಾರ್ಮಿಕರುತಮ್ಮ ಮನೆಗಳಿಗೆ ತೆರಳಿದರು. ದೆಹಲಿ ಮತ್ತು ಇತರ ಗಡಿ ಪ್ರದೇಶಗಳಲ್ಲಿ ಸಾವಿರಾರು ಜನರು ಜಮಾಯಿಸಿದರು. ಆ ಸಂದರ್ಭದಲ್ಲಿ UPSRTC ಜೊತೆ ತುರ್ತು ಸಭೆ ನಡೆಸಿ. 12,000 ದಿಂದ 14,000 ಬಸ್‌ಗಳು ಸೇವೆ ನಿಯೋಜನೆಗೊಂಡವು ಎಂದು ಇಲಾಖೆ ತಿಳಿಸಿದೆ.

ಬಜೆಟ್‌ನಲ್ಲಿ 400 ಕೋಟಿ ರೂ. ಮೀಸಲು
ಬೇರೆಡೆ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು 500 ಬಸ್ ಕೋಟಾಕ್ಕೆ ಕಳುಹಿಸಲಾಗಿತ್ತು. ಅವರಲ್ಲಿ 4,500 ಉತ್ತರಾಖಂಡ್‌ನವರು. ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಯಿತು. ಕಷ್ಟಕಾಲದಲ್ಲಿ ಪಾಲಿಕೆ ಜನಪರ ನಿಂತಿದೆ ಎಂಬುದನ್ನು ಸಾಬೀತುಪಡಿಸಿದೆ. ಇದೀಗ ಹೋಳಿ ಹಬ್ಬದ ವೇಳೆ ಒಟ್ಟು 150 ಹೊಸ ಬಸ್‌ಗಳು ನೂತನ ಸೇವೆ ನೀಡುತ್ತಿವೆ. ಈ ಬಾರಿ ಬಜೆಟ್‌ನಲ್ಲಿ 1,000 ಹೊಚ್ಚ ಹೊಸ ಬಸ್‌ಗಳನ್ನು ಖರೀದಿಸಲು, ನಾವು ನಿಗಮಕ್ಕೆ ಬಜೆಟ್‌ನಲ್ಲಿ 400 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಬಸ್ ಟರ್ಮಿನಲ್‌ಗಳ ಅಭಿವೃದ್ಧಿಗೆ ಒಟ್ಟು 100 ಕೋಟಿ ರೂ, ಒಂದು ಲಕ್ಷ ಕಂದಾಯ ಗ್ರಾಮಗಳಲ್ಲಿ ರೈಲ್ವೆ ಮತ್ತು ವಿಮಾನ ನಿಲ್ದಾಣಗಳಿಗಿಂತ ನಿಗಮವು ಉತ್ತಮ ಸೇವೆಯನ್ನು ನೀಡುತ್ತದೆ. UPSRTC ಪ್ರವಾಸೋದ್ಯಮ ಮತ್ತು ಕಂದಾಯ ಇಲಾಖೆ ಸಂಪರ್ಕಿಸುತ್ತಿದೆ ಎಂದು ಯೋಗಿ ಆದಿತ್ಯನಾಥ್ ವಿವರಿಸಿದರು.












Click it and Unblock the Notifications