ಉ.ಪ್ರ ಸಿಎಂ ಕುರ್ಚಿಗೆ ಕಾದಾಟ: ಯೋಗಿ, ಮೌರ್ಯ ಬಣ ಪ್ರತಿಭಟನೆ

Posted By:
Subscribe to Oneindia Kannada

ಲಕ್ನೋ, ಮಾರ್ಚ್ 18: ಉತ್ತರಪ್ರದೇಶ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆದಿರುವ ಪೈಪೋಟಿ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶನಿವಾರ ಸಂಜೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಚೇರಿಯಿಂದ ಸುದ್ದಿ ಬಂದಿದೆ.

ಈ ನಡುವೆ ರೇಸಿನಲ್ಲಿ ಮುಂಚೂಣಿಯಲ್ಲಿರುವ ಕೇಶವ್ ಪ್ರಸಾದ್ ಮೌರ್ಯ, ಯೋಗಿ ಆದಿತ್ಯನಾಥ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಯೋಗಿ ಆದಿತ್ಯನಾಥ್ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.[ಮುಖ್ಯಮಂತ್ರಿ ಯಾರೆಂದು ತಿಳಿಯಲು ಸಂಜೆವರೆಗೆ ತಡೀರಿ]

ಶನಿವಾರ ಸಂಜೆ 4 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಿಗದಿಯಾಗಿದೆ. ದೆಹಲಿಯಿಂದ ಹಿರಿಯ ನಾಯಕರು ಈಗಾಗಲೇ ಲಕ್ನೋದಲ್ಲಿ ಬೀಡು ಬಿಟ್ಟಿದ್ದಾರೆ. ವೆಂಕಯ್ಯನಾಯ್ಡು ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. [ಮೋದಿ ವಿರುದ್ಧ ಸೆಣೆಸುವ ಮೈತ್ರಿಕೂಟಕ್ಕೆ ಮುಂದಾಳು ಯಾರು?]

UP CM Race: Mauyra, Adityanath supporters stage demonstration

ಈ ನಡುವೆ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರ ಹೆಸರು ಸಿಎಂ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ, ನಾನು ಸಿಎಂ ಸ್ಥಾನದ ರೇಸಿನಲ್ಲಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. [ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಮನೋಜ್ ಸಿನ್ಹಾ!]

ಶಾಸಕಾಂಗ ಸಭೆ ನಂತರವಷ್ಟೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದು ಬಿಜೆಪಿ ಹೈಕಮಾಂಡ್ ಕೂಡಾ ಹೇಳಿದೆ. ಕಳೆದ ಕೆಲ ದಿನಗಳಿಂದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಮುಖಂಡರ ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿ ಬಂದಿದೆ.

ಪ್ರಕಾಶ್ ಪಂತ್, ಮದನ್ ಕೌಶಿಕ್, ಯಶ್ಪಾಲ್ ಆರ್ಯ, ಸುಬೋಧ್ ಉನಿಯಾಲ್, ರೇಖಾ ಆರ್ಯ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Supporters of Keshav Prasad Maurya, the chief of the BJP's Uttar Pradesh unit are staging a demonstration demanding that he be made the chief minister. The supporters of Yogi Adityanath, senior BJP leader are also staging a demonstration that he be made the CM.
Please Wait while comments are loading...