ಚುನಾವಣೆ ಸಮಯದಲ್ಲಿ ಉಗ್ರರ ಕಾಟ: ಇಬ್ಬರ ಸೆರೆ

ಅಯೋಧ್ಯೆ, ಮಾರ್ಚ್ 27: ಇಡೀ ಭಾರತ ಮಹಾಸಮರದತ್ತ ದಾಪುಗಾಲು ಹಾಕುತ್ತಿದೆ. ಈ ಆದರೆ ಈ ಹೊತ್ತಿನಲ್ಲಿ ಅಹಿತರಕ ಸುದ್ದಿಯೊಂದು ಕೇಳಿಬಂದಿದೆ. ದೇಶಕ್ಕೆ ಮಹಾಮಾರಿಯಂತೆ ಅಂಟಿಕೊಂಡಿರುವ ಭಯೋತ್ಪಾದನೆ ಪಿಡುಗು ಮತ್ತೆ ಕಾಣಿಸಿಕೊಂಡಿದೆ. ಆದರೆ ಸಕಾಲದಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.

ನರೇಂದ್ರ ಮೋದಿ ಜೀವಕ್ಕೆ ಆಪತ್ತು ಕಾದಿತ್ತಾ!?:
ಹೌದು ಬುಧವಾರ ರಾತ್ರಿ ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ದಳವು (ATS) ಇಬ್ಬರು ಮಾನವ ಬಾಂಬರುಗಳನ್ನು ಬಂಧಿಸಿದೆ. ಅಯೋಧ್ಯೆಯಲ್ಲಿ ATS ಅಧಿಕಾರಿಗಳು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇವರು ಸೆರೆ ಸಿಕ್ಕಿದ್ದು, ಇಬ್ಬರೂ ಪಾಕಿಸ್ತಾನದ ಪ್ರಜೆಗಳು ಎಂದು ಉತ್ತರ ಪ್ರದೇಶ ಸರಕಾರ ತಿಳಿಸಿದೆ.

ಭಾರತದಲ್ಲಿ ಭಾರಿ ದೊಡ್ಡ ಮಟ್ಟದ ಭಯೋತ್ಪಾದಕ ಕೃತ್ಯವೆಸಗಲು ದೊಡ್ಡ ಯೋಜನೆ ಹಾಕಿಕೊಳ್ಳಲಾಗಿತ್ತು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ([ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ])

up-ayodhya-ats-arrest-2-suicide-bombers-planning-to-attack-bjp-modi

ಮೊನ್ನೆಯಷ್ಟೇ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ತಹಸೀನ್ ಅಖ್ತರ್ (ಮೋನು) ಮತ್ತು ಜಿಯಾ ಉರ್ ರೆಹಮಾನ್ (ವಖಾಸ್) ಎಂಬಿಬ್ಬರನ್ನು ಬಂಧಿಸಲಾಗಿತ್ತು. ಅವರಿಬ್ಬರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಈ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಆ ಕುಕೃತ್ಯ ಯೋಜನೆಯಲ್ಲಿ ಪಾಲ್ಗೊಂಡಿರುವ ಇಬ್ಬರ ಬಗ್ಗೆಯೂ ಬಾಯ್ಬಿಟ್ಟಿದ್ದರು. ಆ ಮಾಹಿತಿಯನ್ನಾಧರಿಸಿ ನಿನ್ನೆ ಮತ್ತಿಬ್ಬರನ್ನು ಬಂಧಿಸಲಾಗಿದೆ.

Target Modi: ಬನಾರಸ್ ನಲ್ಲಿ ಸ್ಫೋಟ ನಡೆಸುವ ಮೂಲಕ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಉಡಾಯಿಸುವುದು ಇವರ ಉದ್ದೇಶವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಇಂತಹ ಕೃತ್ಯಗಳನ್ನು ಎಸಗಿದರೆ ದೇಶದಲ್ಲಿ ಅಲ್ಲೋಕಕಲ್ಲೋಲ ಸೃಷ್ಟಿಸಬಹುದು ಎಂಬುದು ಇವರ ಇರಾದೆಯಾಗಿತ್ತು. ಬಂಧಿತರಿಂದ ಕುಕೃತ್ಯಕ್ಕೆ ಬಳಸಬಹುದಾದ ಸಾಮಗ್ರಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. (ಪ್ರಧಾನಿ ಅಭ್ಯರ್ಥಿ ಮೋದಿಗೆ ಎದುರಾಳಿಗಳು ಸಿಕ್ಕಿದರು)

ಉತ್ತರ ಪ್ರದೇಶದ ATS ಅಧಿಕಾರಿಗಳನ್ನು ಬಂಧಿತ ನಾಲ್ವರನ್ನೂ ಇನ್ನೂ ತೀವ್ರ ವಿಚಾರಣೆಗೆ ಗುರಿಪಡಿಸಿದ್ದು, ಅವರ ಯೋಜನೆಗಳ ಬಗ್ಗೆ ನಿಖರ ಮಾಹಿತಿ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ. ಸಮಾಧಾನಕರ ಸಂಗತಿಯೆಂದರೆ ಇದೀಗ Indian Mujahideen ಸಂಘಟನೆಯ ಅಷ್ಟೂ ಪ್ರಮುಖ ಉಗ್ರರು ATS ಮತ್ತು NIA ಸೆರೆಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+