ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ಸಮೀಕ್ಷೆ: ಬಿಜೆಪಿಗೆ ಮುನ್ನಡೆ

Written By:
Subscribe to Oneindia Kannada

ನವದೆಹಲಿ, ಸೆ 4: ದೇಶದ ಅತಿಹೆಚ್ಚು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆ ಬರುವ ವರ್ಷದ ಆದಿಯಲ್ಲಿ ನಡೆಯಲಿದೆ. ಈ ನಡುವೆ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆ ಹೊರಬಿದ್ದಿದೆ.

ಕಳೆದ ಜುಲೈ 25ರಂದು ಎಬಿಪಿ ನ್ಯೂಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ, ಬಿಜೆಪಿಯ ಪರಿಸ್ಥಿತಿ ಸುಧಾರಿಸಲಿದ್ದು, ಮತಗಳಿಕೆ ಪ್ರಮಾಣದಲ್ಲಿ ಮತ್ತು ಸೀಟ್ ಗೆಲ್ಲುವ ಸಾಧ್ಯತೆಯೂ ಈ ಸಮೀಕ್ಷೆಯಲ್ಲಿ ಹೆಚ್ಚಾಗಿದೆ. (UP ಚುನಾವಣಾ ಸಮೀಕ್ಷೆ, ಸರ್ವಂ ಅತಂತ್ರಮಯಂ)

ಇಂಡಿಯಾ ಟಿವಿ - ಸಿವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ ಸಮಾಜವಾದಿ ಪಕ್ಷ ಮತ್ತು ಬಿಜೆಪಿಯ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದ್ದು, ಬಿಜೆಪಿ ಅಲ್ಪ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ.

ಎಲ್ಲಾ ಪಕ್ಷಕ್ಕಿಂತ ಮುನ್ನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೂ, ಪ್ರಶಾಂತ್ ಕಿಶೋರ್ ರಾಜಕೀಯ ನೈಪುಣ್ಯತೆಯ ಪ್ಲಸ್ ಪಾಯಿಂಟ್ ಇದ್ದರೂ, ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ ಸಮೀಕ್ಷೆಯ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ.

ಆಗಸ್ಟ್ 1ರಿಂದ 31ರವರೆಗೆ ರಾಜ್ಯದ ಎಲ್ಲಾ 403 ಕ್ಷೇತ್ರದ 20,642 ಮತದಾರರನ್ನು ಸಂಪರ್ಕಿಸಿ ಇಂಡಿಯಾ ಟಿವಿ - ಸಿವೋಟರ್ ಈ ಸಮೀಕ್ಷೆ ಸಿದ್ದಪಡಿಸಿದೆ.

ಸಮೀಕ್ಷೆಯನ್ವಯ, ಕಾಂಗ್ರೆಸ್ ಮತ್ತು ಪಕ್ಷೇತರರು/ಇತರರ ನಡುವೆ ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಏರ್ಪಡಲಿದೆ. ಸಮೀಕ್ಷೆಯ ಹೈಲೆಟ್ಸ್ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಎರಡೂ ಪಕ್ಷಕ್ಕೆ ಬಹುಮತದ ಸಮಸ್ಯೆ

ಎರಡೂ ಪಕ್ಷಕ್ಕೆ ಬಹುಮತದ ಸಮಸ್ಯೆ

ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಸಮಾಜವಾದಿ ಪಕ್ಷಕ್ಕೆ ಬಹುಮತದ ಸಮಸ್ಯೆ ಕಾಡಲಿದೆ. ಬಿಜೆಪಿ, ಎಸ್ಪಿ ಮತ್ತು ಬಿಎಸ್ಪಿ ನಡುವೆ ತೀವ್ರ ಸ್ಪರ್ಧೆ ನಡೆಯಲಿದೆ.

ಶೇಕಡಾವಾರು ಮತದಾನದ ಪ್ರಕಾರ ಯಾರಿಗೆ ಎಷ್ಟು?

ಶೇಕಡಾವಾರು ಮತದಾನದ ಪ್ರಕಾರ ಯಾರಿಗೆ ಎಷ್ಟು?

ಬಿಜೆಪಿ - ಶೇ. 27.79
ಎಸ್ಪಿ - ಶೇ. 27.51
ಬಿಎಸ್ಪಿ - ಶೇ. 25.44
ಕಾಂಗ್ರೆಸ್ - ಶೇ. 6.19

ಸಿಎಂ ಸ್ಥಾನಕ್ಕೆ ಯಾರು ಬೆಸ್ಟ್?

ಸಿಎಂ ಸ್ಥಾನಕ್ಕೆ ಯಾರು ಬೆಸ್ಟ್?

ಅಖಿಲೇಶ್ ಯಾದವ್ - ಶೇ.32.8
ಮಾಯಾವತಿ - ಶೇ. 28.2
ಶೀಲಾ ದೀಕ್ಷಿತ್ - ಶೇ. 5.1
ಬಿಜೆಪಿಯ ಯಾವ ಮುಖಂಡರಾದರೂ ಓಕೆ - ಶೇ. 26

ಯಾರಿಗೆ ಎಷ್ಟು ಸ್ಥಾನ? (ಒಟ್ಟು ಸ್ಥಾನ - 403)

ಯಾರಿಗೆ ಎಷ್ಟು ಸ್ಥಾನ? (ಒಟ್ಟು ಸ್ಥಾನ - 403)

ಬಿಜೆಪಿ - 134-150
ಎಸ್ಪಿ - 133-149
ಬಿಎಸ್ಪಿ - 95-111
ಕಾಂಗ್ರೆಸ್ - 05-013
ಇತರರು - 04-012

ಮುಂದಿನ ಚುನಾವಣೆಯಲ್ಲಿ ಅಖಿಲೇಶ್ ಸರಕಾರ ಬೇಕಾ, ಬೇಡ್ವಾ?

ಮುಂದಿನ ಚುನಾವಣೆಯಲ್ಲಿ ಅಖಿಲೇಶ್ ಸರಕಾರ ಬೇಕಾ, ಬೇಡ್ವಾ?

ಬೇಕು - ಶೇ. 34.8
ಬೇಡ - ಶೇ. 58.6

ಸಿಎಂ ಆಗಿ ಅಖಿಲೇಶ್ ಸರಕಾರದ ಸಾಧನೆ ತೃಪ್ತಿ ತಂದಿದೆಯಾ?

ಸಿಎಂ ಆಗಿ ಅಖಿಲೇಶ್ ಸರಕಾರದ ಸಾಧನೆ ತೃಪ್ತಿ ತಂದಿದೆಯಾ?

ಹೌದು - ಶೇ. 60.8
ಇಲ್ಲ - ಶೇ. 38

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP and the ruling SP appear to be in a neck-and-neck contest in the Uttar Pradesh assembly stakes, with BSP projected to come third, says the latest India TV-CVoter survey.
Please Wait while comments are loading...