ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ ಚುನಾವಣೆ: ಮಹಿಳಾ ಅಭ್ಯರ್ಥಿಗಳನ್ನು ಹುಡುಕಿಕೊಡಿ ಪ್ಲೀಸ್..

ಚುನಾವಣೆ ಬಂತೆಂದರೆ ಸಾಕು ಮಹಿಳೆಯರ ಓಲೈಕೆಗೆ ಇಳಿಯುವ ಎಲ್ಲಾ ಪಕ್ಷಗಳು ಟಿಕೆಟ್ ಹಂಚಿಕೆ ಬಂದಾಗ ಮಾತ್ರ ಮಹಿಳೆಯರನ್ನು ಕಡೆಗಣಿಸಿ ಬಿಡುತ್ತವೆ.

By ಅನುಶಾ ರವಿ
|
Google Oneindia Kannada News

ಲಕ್ನೊ, ಜನವರಿ 27: ಉತ್ತರ ಪ್ರದೇಶದ ಎಲ್ಲಾ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲೂ ಮಹಿಳೆಯರೇ ರಾರಾಜಿಸುತ್ತಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಭರಪೂರ ಜಾರಿಗೆ ತರುವುದಾಗಿಯೂ ಎಲ್ಲಾ ಪಕ್ಷಗಳು ಭರವಸೆ ನೀಡಿವೆ. ಆದರೆ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಮಾತ್ರ ಯಾವ ಪಕ್ಷದಲ್ಲೂ ಮಹಿಳೆಯರು ಕಾಣಸಿಗುತ್ತಿಲ್ಲ.

ಹಾಗೆ ನೋಡಿದರೆ ಉತ್ತರ ಪ್ರದೇಶ ಘಟಾನುಘಟಿ ಮಹಿಳಾ ನಾಯಕರ ತವರೂರು. ಇವತ್ತು ರಾಷ್ಟ್ರ ರಾಜಕಾರಣದಲ್ಲಿ ಮೆರೆದಾಡುತ್ತಿರುವ ಸೋನಿಯಾ ಗಾಂಧಿ, ಮೇನಕಾ ಗಾಂಧಿ, ಪ್ರಿಯಾಂಕಾ ವಾದ್ರಾ, ಬೆಹನ್ ಜೀ ಮಾಯಾವತಿ, ಜಯಪ್ರದಾ, ಡಿಂಪಲ್ ಯಾದವ್, ಹೇಮಾ ಮಾಲಿನಿ, ಸ್ಮೃತಿ ಇರಾನಿ.. ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಮಹಿಳೆಯರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಮಾತ್ರ ಎಲ್ಲಾ ಪಕ್ಷಗಳು ಹಿಂದೇಟು ಹಾಕಿವೆ.[2019 ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಕಣಕ್ಕೆ?]

ಪಕ್ಷಾಧ್ಯಕ್ಷೆ ಮಹಿಳೆ ಆದರೂ ಅಭ್ಯರ್ಥಿಗಳಿಲ್ಲ

ಪಕ್ಷಾಧ್ಯಕ್ಷೆ ಮಹಿಳೆ ಆದರೂ ಅಭ್ಯರ್ಥಿಗಳಿಲ್ಲ

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಓರ್ವ ಮಹಿಳೆ. ಇನ್ನು ಕಾಂಗ್ರೆಸ್- ಸಮಾಜವಾದಿ ಮೈತ್ರಿಕೂಟ ಪ್ರಿಯಾಂಕಾ ವಾದ್ರಾ ಮತ್ತು ಡಿಂಪಲ್ ಯಾದವ್ರನ್ನು ಸ್ಟಾರ್ ಪ್ರಚಾರಕಿಯರಾಗಿ ಘೋಷಿಸಿದೆ. ಆದರೆ ಅಭ್ಯರ್ಥಿಗಳ ಪಟ್ಟಿ ನೋಡಿದರೆ ಅಲ್ಲೊಂದು ಇಲ್ಲೊಂದು ಮಹಿಳೆಯರ ಹೆಸರಷ್ಟೇ ಕಾಣಿಸುತ್ತದೆ. ಇಲ್ಲಿವರೆಗೆ ಒಟ್ಟು 224 ಅಭ್ಯರ್ಥಿಗಳ ಹೆಸರನ್ನು ಸಮಾಜವಾದಿ ಪಕ್ಷ ಘೋಷಿಸಿದೆ. ಇದರಲ್ಲಿ ಕೇವಲ 24 ಮಹಿಳೆಯರಷ್ಟೆ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಹಿರಿಯ ನಾಯಕರಾದ ಅರುಣ್ ಕುಮಾರಿ ಕೊರಿ ಮತ್ತು ಸುಶೀಲಾ ಸರೋಜ್ ಕೂಡಾ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಇಲ್ಲಿವರೆಗೆ 43 ಹೆಸರುಗಳನ್ನು ಘೋಷಿಸಿದೆ. ಇದರಲ್ಲಿ ಕೇವಲ ಇಬ್ಬರು ಮಹಿಳೆಯರ ಹೆಸರಷ್ಟೇ ಇದೆ. ಇದರಲ್ಲಿ ಜನಪ್ರಿಯ ಗುಲಾಬಿ ಗ್ಯಾಂಗ್ ಸಂಸ್ಥಾಪಕಿಯೂ ಇದ್ದಾರೆ.[ಬಿಜೆಪಿಗೆ ಹೊಡೆತ ನೀಡುತ್ತಾ ಕಾಂಗ್ರೆಸ್-ಎಸ್ಪಿ ಮೈತ್ರಿಕೂಟ?][ಚಿತ್ರ ಕೃಪೆ: ಪಿಟಿಐ]

ಬೆಹನ್ ಜೀ, ಮಹಿಳೆಯರೆಲ್ಲಿ?

ಬೆಹನ್ ಜೀ, ಮಹಿಳೆಯರೆಲ್ಲಿ?

ಬಹುಜನ ಪಕ್ಷದ ಮುಖ್ಯಸ್ಥೆ ಮಾಯಾವತಿ ಬಲು ಜನಪ್ರಿಯರು. ತಾವು ಓರ್ವ ಮಹಿಳೆಯಾಗಿದ್ದರೂ ಅವರು ಟಿಕೆಟ್ ಮಾತ್ರ ಮಹಿಳೆಯರಿಗೆ ಕೊಟ್ಟಿಲ್ಲ. ಇಲ್ಲಿವರೆಗೆ ಬಹುಜನ ಸಮಾಜವಾದಿ ಪಕ್ಷ ಒಟ್ಟು 401 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ಮಹಿಳೆಯರ ಸಂಖ್ಯೆ ಜಸ್ಟ್ 18. ಅದರಲ್ಲೂ ಈ 18 ಜನ ಒಂದೋ ಪುರುಷ ರಾಜಕಾರಣಿಗಳ ಪತ್ನಿಯರಾಗಿದ್ದಾರೆ. ಇಲ್ಲವೇ ಅವರ ಕುಟುಂಬಸ್ಥರಾಗಿದ್ದಾರೆ.[ಉತ್ತರ ಪ್ರದೇಶ: ಕೊನೆಗೂ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ ಅಖಿಲೇಶ್][ಚಿತ್ರ ಕೃಪೆ: ಪಿಟಿಐ]

ಮಾತೆಯರೇ ಎಲ್ಲಿದ್ದೀರಿ?

ಮಾತೆಯರೇ ಎಲ್ಲಿದ್ದೀರಿ?

ಸದಾ ಮಹಿಳೆಯರನ್ನು ಮಾತೆ, ತಾಯಿ ಎನ್ನುವ ಬಿಜೆಪಿ ಅದೇ ಮಾತೆಯರಿಗೆ ಟಿಕೆಟ್ ನೀಡಿಲ್ಲ. ಇಲ್ಲಿವರೆಗೆ 304 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದು ಕೇವಲ36 ಜನರಿಗೆ ಟಿಕೆಟ್ ನೀಡಿದೆ. ಪ್ರತಿಪಕ್ಷಗಳಾದ ಬಿಎಸ್ಪಿ, ಕಾಂಗ್ರೆಸ್ ಮತ್ತು ಎಸ್ಪಿಗಿಂತ ಈ ಸಂಖ್ಯೆ ಸ್ವಲ್ಪ ಹೆಚ್ಚಾಗಿದ್ದರೂ ಅಷ್ಟೇನೂ ಉತ್ತಮವಾಗಿಲ್ಲ. ಎಲ್ಲಾ ಪಕ್ಷಗಳಂತೆ ಇಲ್ಲೂ ಪುರುಷ ಪ್ರಭಾವಿ ರಾಜಕಾರಣಿಗಳ ಸಂಬಂಧಿಕರೇ ಟಿಕೆಟ್ ಗಿಟ್ಟಿಸಿದ್ದಾರೆ. ಮುಂದೆ ಇವರೆಲ್ಲಾ ಚುಕ್ಕಾಣಿ ಹಿಡಿದರೂ ನಿಯಂತ್ರಣವನ್ನು ಮಾತ್ರ ಪುರುಷರೇ ಇಟ್ಟುಕೊಂಡಿರುತ್ತಾರೆ. ನಾಮ್ ಕೆ ವಾಸ್ತೆ ಮಹಿಳೆಯರಷ್ಟೆ ಸದಸ್ಯರಾಗಿರುತ್ತಾರೆ.[ಚಿತ್ರ ಕೃಪೆ: ಪಿಟಿಐ]

ಮಹಿಳೆಯರು ಗೆಲ್ಲೋದಿಲ್ವಾ?

ಮಹಿಳೆಯರು ಗೆಲ್ಲೋದಿಲ್ವಾ?

ಮಹಿಳೆಯರಿಗೆ ಟಿಕೆಟ್ ನೀಡಿದರೆ ಗೆಲ್ಲೋದಿಲ್ಲ ಅನ್ನುವುದು ಸುಳ್ಳು. ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದೂ ಓರ್ವ ಮಹಿಳೆ ತೇಜಸ್ವಿನಿ ರಮೇಶ್ ಎಂಬುದನ್ನು ಮರೆಯಬಾರದು. ಹೀಗಿದ್ದೂ ಎಲ್ಲಾ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿದರೆ ಸೋಲಾಗುತ್ತದೆ ಎಂಬ ಅಪನಂಬಿಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿವೆ. ಚುನಾವಣೆಯಲ್ಲಿ ಮಹಿಳೆಯರನ್ನು ಓಲೈಸುವ ಪ್ರತಿಯೊಂದು ಪಕ್ಷಗಳೂ, ಟಿಕೆಟ್ ನೀಡುವ ವಿಚಾರಕ್ಕೆ ಬಂದಾಗ ಮಾತ್ರ ಮಹಿಳೆಯರನ್ನು ಕಡೆಗಣಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಖಂಡಿತಾ ಅಲ್ಲ. (ಒನ್ ಇಂಡಿಯಾ ಸುದ್ದಿ)[ಚಿತ್ರ ಕೃಪೆ: ಪಿಟಿಐ]

English summary
Women empowerment and women friendly schemes are on the manifesto of every political party for the upcoming assembly elections. But none of that has changed the fact that representation of women candidates cutting across party lines are abysmally low.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X