ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಕೋವಿಡ್ ಬಿಕ್ಕಟ್ಟಿನಲ್ಲಿ ಬಲವಂತದ ಧಾರ್ಮಿಕ ಮತಾಂತರದ ಆರೋಪ- ಪ್ರಕರಣ ದಾಖಲು

|
Google Oneindia Kannada News

ಮೀರತ್(ಉತ್ತರ ಪ್ರದೇಶ), ಅಕ್ಟೋಬರ್ 29: ಉತ್ತರ ಪ್ರದೇಶದ ಮೀರತ್‌ನಲ್ಲಿ 400 ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವಂತೆ ಒತ್ತಾಯಿಸಿದ ಆರೋಪದ ಮೇಲೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತರು ಹಿರಿಯ ಪೊಲೀಸ್ ಅಧೀಕ್ಷಕರನ್ನು (ಎಸ್‌ಎಸ್‌ಪಿ) ಸಂಪರ್ಕಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಆಮಿಷ ಒಡ್ಡಲಾಗಿದೆ ಎಂದು ದೂರಿದ್ದಾರೆ. ಮಂಗಟ್ ಪುರಂನ ಮಲಿನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪೊಲೀಸ್ ದೂರಿನಲ್ಲಿ, ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ತೆಗೆದುಹಾಕುವಂತೆ ಒತ್ತಾಯಿಸಲಾಯಿತು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಎಫ್‌ಐಆರ್‌ನ ಪ್ರಕಾರ, ಅಕ್ರಮವಾಗಿ ಇತರ ಧರ್ಮಗಳಿಗೆ ಮತಾಂತರಗೊಳ್ಳಲು ಜನರನ್ನು ಒತ್ತಾಯಿಸಿದ ಆರೋಪಿಗಳು ಕೋವಿಡ್ -19 ಪ್ರೇರಿತ ಸಮಯದಲ್ಲಿ ಸಂತ್ರಸ್ತರೊಂದಿಗೆ ಸಂಪರ್ಕಕ್ಕೆ ಬಂದರು ಎಂದಿದ್ದಾರೆ.

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಕೊಳೆಗೇರಿ ನಿವಾಸಿಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗಲಿಲ್ಲ. ತಮ್ಮ ಮನೆಗಳನ್ನು ನಿರ್ವಹಿಸಲು ಹೆಣಗಾಡುತ್ತಿದ್ದರು. ಈ ಪ್ರದೇಶದಲ್ಲಿ ಕಟ್ಟಡಗಳಲ್ಲಿ ವಾಸಿಸುತ್ತಿದ್ದ ಉತ್ತಮ ಸ್ಥಿತಿಯ ಜನ ಅವರಿಗೆ ಆಹಾರ ಮತ್ತು ಮನೆಯ ಖರ್ಚಿಗೆ ಹಣವನ್ನು ನೀಡಿತು ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ.

ಬಲವಂತದ ಧಾರ್ಮಿಕ ಮತಾಂತರ

ಬಲವಂತದ ಧಾರ್ಮಿಕ ಮತಾಂತರ

ಆದರೆ, ಸಹಾಯ ಮಾಡಿದ ಜನರು ಅವರಿಗೆ ಒಬ್ಬನೇ ದೇವರು ಯೇಸುಕ್ರಿಸ್ತ ಎಂದು ಹೇಳಲು ಪ್ರಾರಂಭಿಸಿದರು. ಜೊತೆಗೆ ಚರ್ಚ್‌ಗೆ ಭೇಟಿ ನೀಡಿ ಆತನನ್ನು ಪ್ರಾರ್ಥಿಸುವಂತೆ ಕೇಳಿಕೊಂಡರು. ಮಾತ್ರವಲ್ಲದೆ ಹಿಂದೂಗಳನ್ನು ಆರಾಧಿಸುವುದನ್ನು ನಿಲ್ಲಿಸುವಂತೆ ಕೇಳಿಕೊಂಡರು. ಕ್ರಿಸ್ತನನ್ನು ಮಾತ್ರ ಪ್ರಾರ್ಥಿಸಿ ಎಂದು ಒತ್ತಾಯಿಸಿದರು.

ದೂರು ದಾಖಲಿಸಿದ ಗ್ರಾಮಸ್ಥರು

ದೂರು ದಾಖಲಿಸಿದ ಗ್ರಾಮಸ್ಥರು

ಶುಕ್ರವಾರ ಸಂತ್ರಸ್ತರು ಬಿಜೆಪಿ ನಾಯಕನೊಂದಿಗೆ ಬ್ರಹ್ಮಪುತ್ರಿ ಪೊಲೀಸ್ ಠಾಣೆಗೆ ಆಗಮಿಸಿ, ಆರೋಪಿಗಳು ಧಾರ್ಮಿಕ ಮತಾಂತರಕ್ಕಾಗಿ ಹಣ ಮತ್ತು ಆಹಾರದ ಆಮಿಷ ಒಡ್ಡಿದ್ದಾರೆ ಎಂದು ಹೇಳಿದ್ದಾರೆ. ಈಗ ಈ ಜನರು ಹಿಂದೂ ದೇವತೆಗಳ ವಿಗ್ರಹಗಳು, ಪ್ರತಿಮೆಗಳು ಮತ್ತು ಭಾವಚಿತ್ರಗಳನ್ನು ತೆಗೆದು ಕ್ರಿಶ್ಚಿಯನ್ ಧರ್ಮ ಸ್ವೀಕರಿಸುವಂತೆ ಗ್ರಾಮಸ್ಥರನ್ನು ಒತ್ತಾಯಿಸುತ್ತಿದ್ದಾರೆ ಎಂದು ಅವರು ಹೇಳಿದರು.

2 ಲಕ್ಷ ಬೇಡಿಕೆ, ಜೀವ ಬೆದರಿಕೆ

2 ಲಕ್ಷ ಬೇಡಿಕೆ, ಜೀವ ಬೆದರಿಕೆ

ದೂರುದಾರರು ಪೊಲೀಸರಿಗೆ, ''ನಮ್ಮ ಮೇಲೆ ಧಾರ್ಮಿಕ ಮತಾಂತರಕ್ಕೆ ಒತ್ತಡ ಹೇರಲಾಗುತ್ತಿದೆ ಮತ್ತು ನಮ್ಮ ಆಧಾರ್ ಕಾರ್ಡ್‌ನಲ್ಲಿ ನಮ್ಮ ಹೆಸರನ್ನು ಬದಲಾಯಿಸುವಂತೆ ಕೇಳಲಾಯಿತು, ದೀಪಾವಳಿಯ ದಿನದಂದು ನಾವು ಪೂಜೆ ಮಾಡುತ್ತಿದ್ದಾಗ, ಆರೋಪಿಗಳು ನಮ್ಮ ಮನೆಗೆ ನುಗ್ಗಿ ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ನಾವು ಅದನ್ನು ವಿರೋಧಿಸಿದಾಗ ತಲಾ ₹ 2 ಲಕ್ಷಕ್ಕೆ ಬೇಡಿಕೆ ಇಟ್ಟರು. ಅವರು ಚಾಕು ಮತ್ತು ರಾಡ್‌ಗಳನ್ನು ತಂದು ನಾವು ಅಧಿಕಾರಿಗಳನ್ನು ಸಂಪರ್ಕಿಸಿದರೆ ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ'' ಎಂದು ದೂರಿದ್ದಾರೆ.

ಸೂಕ್ತ ಕ್ರಮದ ಭರವಸೆ ನೀಡಿದ ಎಸ್ಪಿ

ಸೂಕ್ತ ಕ್ರಮದ ಭರವಸೆ ನೀಡಿದ ಎಸ್ಪಿ

ಎಫ್‌ಐಆರ್‌ ದಾಖಲಾದ ಆರೋಪಿಗಳ ಹೆಸರು ಇಂತಿದೆ- ಛಬಿಲಿ ಅಲಿಯಾಸ್ ಶಿವ, ಬಿನ್ವಾ, ಅನಿಲ್, ಸರ್ದಾರ್, ನಿಕ್ಕು, ಬಸಂತ್, ಪ್ರೇಮಾ, ತಿತ್ಲಿ ಮತ್ತು ರಾಣಿ.

ಎಸ್ಪಿ ಪಿಯೂಷ್ ಸಿಂಗ್ ಮಾತನಾಡಿ, 'ಶುಕ್ರವಾರ ಕೆಲವರು ನಮ್ಮ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸಿದ್ದು, ಇತರೆ ಧರ್ಮದವರು ಮಲಿನ್ ಗ್ರಾಮದ ಜನರ ಧರ್ಮವನ್ನು ಬಲವಂತವಾಗಿ ಮತಾಂತರ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನೋಂದಣಿ ಮಾಡಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.

English summary
Nine people have been booked for allegedly forcing 400 people to convert to Christianity in Uttar Pradesh's Meerut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X