ತನ್ನದೇ ಇಲಾಖೆಯ ಕಾರ್ಯದರ್ಶಿಯಿಂದ ಸಚಿವೆ ಸ್ಮೃತಿ ಇರಾನಿಗೆ ಶಾಕ್!

By: ಮೂಲ: ಇಂಡಿಯಾ ಸಂವಾದ್
Subscribe to Oneindia Kannada

ನವದೆಹಲಿ, ಆಗಸ್ಟ್ 30: ಮಾಜಿ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮೃತಿ ಇರಾನಿ ಒಂದಲ್ಲಾ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುವವರು. ಅದು ತನ್ನ ಟ್ವೀಟ್ ನಿಂದ ಇರಬಹುದು, ಅಥವಾ ರೋಹಿತ್ ವೇಮುಲಾ ಆತ್ಮಹತ್ಯೆ ಕೇಸ್ ವಿಚಾರದಲ್ಲಿರಬಹುದು.

ಇತ್ತೀಚೆಗೆ ಕ್ಯಾಬಿನೆಟ್ ನಲ್ಲಿ ಪ್ರಮುಖ ಬದಲಾವಣೆಯಾದ ನಂತರ ಸ್ಮೃತಿ ಇರಾನಿ ಜವಳಿ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಯೊಬ್ಬರ ಮಾಹಿತಿಯ ಪ್ರಕಾರ ತನ್ನದೇ ಸಚಿವಾಲಯದ ಕಾರ್ಯದರ್ಶಿಯ ಖಡಕ್ ನಿರ್ಧಾರದಿಂದ ಸಚಿವೆ ಸ್ಮೃತಿ ಇರಾನಿ ಶಾಕ್ ಅನುಭವಿಸಿದ್ದಾರೆ. (ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡ ಸ್ಮೃತಿ ಇರಾನಿ)

ಇಲಾಖೆಯ ಕಾರ್ಯದರ್ಶಿ ಮತ್ತು ಹಿರಿಯ ಐಎಎಸ್ ಅಧಿಕಾರಿ ರಶ್ಮಿ ವರ್ಮಾ, ಸಚಿವೆ ಸ್ಮೃತಿ ಇರಾನಿ ವಿರುದ್ದ ಕ್ಯಾಬಿನೆಟ್ ಸೆಕ್ರೆಟರಿಗೆ ದೂರು ನೀಡಿದ್ದಾರೆ. ಇವರು ನೀಡಿರುವ ದೂರು ಪ್ರಧಾನಮಂತ್ರಿ ಕಾರ್ಯಾಲಯದ ವರೆಗೂ ಹೋಗಿದೆ ಎನ್ನುವ ಮಾಹಿತಿಯಿದೆ.

ಇಷ್ಟೇ ಅಲ್ಲದೇ, ಸ್ಮೃತಿ ಇರಾನಿಯವರು ಇದೇ ರೀತಿ ವರ್ತಿಸಿದರೆ ಇಲಾಖೆಯಲ್ಲಿ ನಾನು ಮುಂದುವರಿಯಲು ಸಾಧ್ಯವಿಲ್ಲ ಎಂದು ರಶ್ಮಿ ವರ್ಮಾ, ಕ್ಯಾಬಿನೆಟ್ ಸೆಕ್ರೆಟರಿಗೆ ಲಿಖಿತ ದೂರು ನೀಡಿದ್ದಾರೆ. (ಖಾತೆ ಹಂಚಿಕೆಯಲ್ಲಿ ಭಾರೀ ಬದಲಾವಣೆ, ಸ್ಮೃತಿಗೆ ಶಾಕ್)

ಸೆಕ್ರೆಟರಿ ರಶ್ಮಿ ವರ್ಮಾ, ಸಚಿವೆ ಸ್ಮೃತಿ ಇರಾನಿ ವಿರುದ್ದ ದೂರು ನೀಡಲು ಕಾರಣವೇನು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ದುಬಾರಿ ಶಾಪ್ಪಿಂಗ್

ದುಬಾರಿ ಶಾಪ್ಪಿಂಗ್

ಸ್ಮೃತಿ ಇರಾನಿಯವರ ದುಬಾರಿ ಶಾಪ್ಪಿಂಗ್ ಈಗ ಪ್ರಧಾನಮಂತ್ರಿಯ ನರೇಂದ್ರ ಮೋದಿಯವರ ಕಿವಿಗೂ ಬಿದ್ದಿದೆ. ಇತ್ತೀಚೆಗೆ ಸಚಿವೆ ಶಾಪ್ಪಿಂಗ್ ನಡೆಸಿ ಬಿಲ್ ಅನ್ನು ತನ್ನ ಸಚಿವಾಲಯಕ್ಕೆ ಕಳುಹಿಸಿಕೊಟ್ಟು ಸ್ಮೃತಿ ಇರಾನಿ ಪೇಚಿಗೆ ಸಿಲುಕಿದ್ದಾರೆ.

ಲಕ್ಷ ಲಕ್ಷ ರೂಪಾಯಿಯ ಸೀರೆ

ಲಕ್ಷ ಲಕ್ಷ ರೂಪಾಯಿಯ ಸೀರೆ

ದುಬಾರಿ ಬೆಲೆಯ ಸೀರೆ ಮತ್ತು ಗಣೇಶನ ವಿಗ್ರಹವನ್ನು ಸ್ಮೃತಿ ಇರಾನಿ ಖರೀದಿಸಿ, ಬಿಲ್ ಪಾವತಿ ಮಾಡಿ ಎಂದು ತನ್ನ ಸಚಿವಾಲಯದ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದ್ದರು. ಅದನ್ನು ರಶ್ಮಿ ವರ್ಮಾ ಪಾಸ್ ಮಾಡದೇ, ಕ್ಯಾಬಿನೆಟ್ ಸೆಕ್ರೆಟರಿಗೆ ಕಳುಹಿಸಿದ್ದಾರೆ.

ಎಂಟು ಲಕ್ಷ ರೂಪಾಯಿ ಶಾಪ್ಪಿಂಗ್

ಎಂಟು ಲಕ್ಷ ರೂಪಾಯಿ ಶಾಪ್ಪಿಂಗ್

ಸೀರೆ ಮತ್ತು ವಿಗ್ರಹ ಖರೀದಿಸಿದ ಬಿಲ್ಲಿನ ಒಟ್ಟು ಮೊತ್ತ ಅಂದಾಜು ಎಂಟು ಲಕ್ಷ ರೂಪಾಯಿ. ಇಲಾಖೆಯ ಸುಪರ್ದಿಯಲ್ಲಿ ಬರುವ ಕಾಟೇಜ್ ಭೇಟಿಯ ವೇಳೆ ಸ್ಮೃತಿ ಇರಾನಿ ಈ ಶಾಪ್ಪಿಂಗ್ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕ್ಯಾಬಿನೆಟ್ ಸೆಕ್ರೆಟರಿ

ಕ್ಯಾಬಿನೆಟ್ ಸೆಕ್ರೆಟರಿ

ಬಿಹಾರ ಮೂಲದ 1982ರ ಬ್ಯಾಚಿನ ಐಎಎಸ್ ಅಧಿಕಾರಿ ಮತ್ತು ಇಲಾಖೆಯ ಕಾರ್ಯದರ್ಶಿ ರಶ್ಮಿ ವರ್ಮಾ, ಬಿಲ್ಲನ್ನು ಪಾವತಿಸಿದೇ ಕ್ಯಾಬಿನೆಟ್ ಸೆಕ್ರೆಟರಿಗೆ ಕಳುಹಿಸಿದ್ದರಿಂದ ಸ್ಮೃತಿ ಇರಾನಿ ಮತ್ತು ಕಾರ್ಯದರ್ಶಿ ರಶ್ಮಿ ವರ್ಮಾ ನಡುವೆ ಜಟಾಪಟಿ ನಡೆದಿದೆ ಎನ್ನುವ ಮಾಹಿತಿಯಿದೆ. (ಚಿತ್ರದಲ್ಲಿ: ರಶ್ಮಿ ವರ್ಮಾ)

ಸಚಿವೆಯ ಕಾರ್ಯಶೈಲಿ ಬದಲಾಗಬೇಕು

ಸಚಿವೆಯ ಕಾರ್ಯಶೈಲಿ ಬದಲಾಗಬೇಕು

ಕಟ್ಟುನಿಟ್ಟಿನ ಅಧಿಕಾರಿಯಾಗಿರುವ ರಶ್ಮಿ ವರ್ಮಾ, ಸಚಿವೆ ಸ್ಮೃತಿ ಇರಾನಿ ಕಾರ್ಯಶೈಲಿ ಬದಲಾಗದಿದ್ದಲ್ಲಿ, ಇಲಾಖೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಕ್ಯಾಬಿನೆಟ್ ಸೆಕ್ರೆಟರಿಗೆ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If the sources in the Textiles ministry are to be believed, Minister Smriti Irani recently had a scuffle with the Secretary and Senior IAS officer Rashmi Verma, since secretary denies paying saree shopping bill worth of around 8 lakhs.
Please Wait while comments are loading...