ಹಪ್ಪಳದಿಂದ ಕೊರೊನಾ ನಿಯಂತ್ರಣ: ಕೇಂದ್ರ ಸಚಿವ ಅರ್ಜುನ್

ನವದೆಹಲಿ, ಜುಲೈ 24: ಕೇಂದ್ರ ಸಚಿವ ಅರ್ಜುನ್​ ರಾಂ ಮೇಘವಾಲ್​ ಹಪ್ಪಳ ಬಿಡುಗಡೆ ಮಾಡಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಬಾಬಿ ಜೀ ಪಾಪ್ಪಡ್ ಹೆಸರಿನ ಈ ಹಪ್ಪಳ ತಿಂದರೆ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಳವಾಗಿ ಕೊರೊನಾವೈರಸ್ ನಿಯಂತ್ರಿಸಬಹುದು ಎಂದು ಕೇಂದ್ರ ಸಚಿವ್ ಆರ್ಜುನ್ ರಾಮ್ ಹೇಳಿರುವುದು ಈಗ ಚರ್ಚೆಯ ವಿಷಯವಾಗಿದೆ.

ಕೊರೊನಾವೈರಸ್ ಸುಳ್ಳು ಸುದ್ದಿಗಳ ಸಂಗ್ರಹ

ಬಿಕಾನೇರ್ ನಲ್ಲಿ Bhabhi Ji papad ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಅರ್ಜುನ್​ ಮೇಘವಾಲ್​, ಇದು ಆತ್ಮನಿರ್ಭರ ಭಾರತ ಯೋಜನೆಯಡಿ ತಯಾರಿಸಲಾಗಿದೆ, ಇದು ವೈರಾಣು ಸೋಂಕಿನ ವಿರುದ್ಧ ಹೋರಾಡುವ antibodyಗಳನ್ನು ಹೆಚ್ಚಳಗೊಳಿಸುತ್ತದೆ, ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಇಂಥ ಉಪಯುಕ್ತ ಉತ್ಪನ್ನವನ್ನು ಹೊರ ತಂದ ಸಂಸ್ಥೆಗೆ ಅಭಿನಂದನೆ ಎಂದಿದ್ದಾರೆ.

Union minister Claims Bhabhi Ji papad, help prevent coronavirus

ಬಿಕಾನೇರ್ ಸಂಸದರೂ ಆಗಿರುವ ಕೇಂದ್ರ ಗಂಗಾ ಪುನಶ್ಚೇತನ ಖಾತೆ ಸಚಿವ ಅರ್ಜುನ್ ರಾಂ ಮೇಘವಾಲ್ ಅವರು ಈ ರೀತಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸಂಸ್ಥೆ ಕೂಡಾ ಪ್ರತಿಕ್ರಿಯಿಸಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಹಪ್ಪಳ ಸಹಕಾರಿ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+