ಸ್ವಪನ್ ದಾಸ್‌ಗುಪ್ತಾ ರಾಜ್ಯಸಭೆಗೆ ಮರು ನಾಮಕರಣ

ನವದೆಹಲಿ, ಜೂನ್ 01; ಸ್ವಪನ್ ದಾಸ್‌ಗುಪ್ತಾ ಮತ್ತು ವಕೀಲ ಮಹೇಶ್ ಜೆಠ್ಮಲಾನಿಯನ್ನು ಕೇಂದ್ರ ಸರ್ಕಾರ ರಾಜ್ಯಸಭೆ ಸದಸ್ಯರಾಗಿ ನಾಮಕರಣ ಮಾಡಿದೆ. 24/4/2022ರ ತನಕ ಇಬ್ಬರ ರಾಜ್ಯಸಭೆ ಸದಸ್ಯತ್ವದ ಅವಧಿ ಇದೆ.

ಮಾಜಿ ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ ಕೆಲವು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ಟಿಕೆಟ್‌ನಿಂದ ಪಶ್ಚಿಮ ಬಂಗಾಳ ವಿಧಾಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಈಗ ಅವರನ್ನು ರಾಜ್ಯಸಭೆಗೆ ಮರು ನಾಮರಕರಣ ಮಾಡಲಾಗಿದೆ.

ರಘುನಾಥ್ ಮೊಹಾಪಾತ್ರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಖ್ಯಾತ ವಕೀಲರಾದ ಮಹೇಶ್ ಜೆಠ್ಮಲಾನಿ ನಾಮಕರಣ ಮಾಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಸರ್ಕಾರ ಕಳಿಸಿದ್ದ ಎರಡು ನಾಮ ನಿರ್ದೇಶನಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

Union Govt Renominated Swapan Dasgupta To Rajya Sabha

ವಿವಿಧ ರಾಜ್ಯಗಳ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರು ಆಯ್ಕೆಯಾಗುತ್ತಾರೆ. ಸಾಹಿತ್ಯ, ವಿಜ್ಞಾನ, ಕ್ರೀಡೆ, ಕಲೆ ಮತ್ತು ಸಾಮಾಜ ಸೇವೆಯಂತಹ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡಿದ ಸಾಧಕರನ್ನು ಸರ್ಕಾರ ನೇರವಾಗಿ ನಾಮ ನಿರ್ದೇಶನ ಮಾಡಲು ಅವಕಾಶವಿದೆ.

ಭಾರತದ ಸಂವಿಧಾನದ 80ನೇ ಪರಿಚ್ಛೇಧ (1) ರ ಉಪ-ಷರತ್ತು (ಎ) ಅಡಿ ಇರುವ ಅಧಿಕಾರವನ್ನು ಉಪಯೋಗಿಸಿ ಸ್ವಪನ್ ದಾಸ್‌ಗುಪ್ತಾರನ್ನು ಮರುನಾಮಕರಣ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+