PAN 2.0 Project: ನಿಮ್ಮ ಪ್ಯಾನ್ ಕಾರ್ಡ್ ಇನ್ಮುಂದೆ '2.0 ಅಪ್‌ಗ್ರೇಡ್ ಕಾರ್ಡ್' ಆಗಿ ಬದಲಾಗಲಿದೆ: ಕೇಂದ್ರ ಸರ್ಕಾರ
ಬೆಂಗಳೂರು, ನವೆಂಬರ್ 26: ಮಾಹಿತಿ ರಕ್ಷಣೆ, ಸೈಬರ್ ಸುರಕ್ಷತೆ ಜೊತೆಗೆ ತೆರಿಗೆದಾರರು ನೋಂದಣಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ 'ಪ್ಯಾನ್ ಕಾರ್ಡ್' 2.0 ಯೋಜನೆ ಘೋಷಿಸಿರುವ ಕೇಂದ್ರ ಸರ್ಕಾರ ಸೋಮವಾರ ಅದಕ್ಕೆ ಅನುಮೋದನೆ ನೀಡಿದೆ. ಆದಾಯ ತೆರಿಗೆ ಇನ್ನಿತರ ಸೌಲಭ್ಯಗಳಿಗೋಸ್ಕರ ನಿಮ್ಮಲ್ಲಿರುವ ಪ್ಯಾನ್ ಕಾರ್ಡ್‌ಅನ್ನು ಈ ಯೋಜನೆಯಡಿ ನೀವು ಉಚಿತವಾಗಿ '2.0 ಅಪ್‌ಗ್ರೇಡ್ ಕಾರ್ಡ್'ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ.
ಹೌದು, ಕೇಂದ್ರ ಸರ್ಕಾರ ಕ್ಯೂಆರ್ ಕೋಡ್ ವೈಶಿಷ್ಟ್ಯ ಹೊರತುಪಡಿಸಿ, PAN 2.0 ಯೋಜನೆಯು ಈಗಾಗಲೇ ಅಸ್ತಿತ್ವದಲ್ಲಿರುವ ಫ್ಯಾನ್ ಡೇಟಾ ಬಳಸುವ ಎಲ್ಲಾ ಘಟಕಗಳಿಗೆ ಏಕೀಕೃತ ಪೋರ್ಟಲ್ ಅನ್ನು ನೀಡುವ ಗುರಿ ಕೇಂದ್ರ ಸರ್ಕಾರದ್ದಾಗಿದೆ. ಹೀಗಾಗಿಯೇ ಹೊಸ PAN 2.0 ಯೋಜನೆಗೆ ಅನುಮೋದನೆ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 1,435 ಕೋಟಿ ರೂಪಾಯಿ ವ್ಯಯಿಸುತ್ತಿದೆ ಎಂದು ವರದಿ ಆಗಿದೆ.

PAN 'ಸಾಮಾನ್ಯ ವ್ಯವಹಾರಗಳಿಗೆ ಗುರುತಿಸುವಿಕೆ'
ಈ ನೂತನ ಯೋಜನೆಯಡಿ ಪ್ಯಾನ್ ವ್ಯವಸ್ಥೆಯು ಅಪ್‌ಗ್ರೇಡ್ ಆಗಲಿದೆ. ಐಟಿ ಮೂಲಸೌಕರ್ಯದ ಜೊತೆಗೆ ಸೂಕ್ತವಾದ ಏಜೆನ್ಸಿಗಳ ಡಿಜಿಟಲ್ ವೇದಿಕೆಗಳಲ್ಲಿ ಈ ಪ್ಯಾನ್ ಕಾರ್ಡ್ ಅನ್ನು ''ಸಾಮಾನ್ಯ ವ್ಯವಹಾರಗಳಿಗೆ ಗುರುತಿನ'' ಚೀಟಿ ರೀತಿಯಲ್ಲಿ ಮಾಡುವ ಉದ್ದೇಶ ಇದೆ.
ದೇಶದಲ್ಲಿರುವ ಸುಮಾರು 78 ಕೋಟಿ ಪ್ಯಾನ್ ಕಾರ್ಡ್‌ಗಳು ಮುಂದಿನ ದಿನಗಳಲ್ಲಿ 2.0 ಅಪ್‌ಗ್ರೇಡ್ ಕಾರ್ಡ್‌ಗಳಾಗಲಿವೆ. ಈಗಾಗಲೇ ಪ್ಯಾನ್ ಕಾರ್ಡ್ ಅನ್ನು ನಾವು ನಮ್ಮ ಆಧಾರ್ ಕಾರ್ಡ್ ಜೊತೆಗೆ ಸಂಯೋಜಿಸಿದ್ದೇವೆ. ಇದರಿಂದಾಗಿ ಆದಾಯ ತೆರಿಗೆ ಇಲಾಖೆ, ಇನ್ನಿತರ ಅಧಿಕಾರಿಗಳಿಗೆ ನೈಜ್ ಮಾಹಿತಿ ಸಿಗುವ ಬಲವಾದ ಮೂಲವಾಗಲಿದೆ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಅದೇ ಸಂಖ್ಯೆ ಇರಲಿದ್ದು, ಕಾರ್ಡ್ ಮಾತ್ರವೇ ಅಪ್‌ಗ್ರೇಡ್
ಅಸ್ತಿತ್ವದಲ್ಲಿ ಕೋಟ್ಯಾಂತರ ಕಾರ್ಡ್‌ಗಳ ಸಂಖ್ಯೆ ಹಾಗೂ ಪ್ಯಾನ್ ಅದೇ ಆಗಿರುತ್ತದೆ. ಕಾರ್ಡ್ ಅಪ್‌ಗ್ರೇಡ್ ಮಾತ್ರವಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ, ಹೊಸ ಕಾರ್ಡ್ ಮಾಡುವ ಗೊಂದಲ್ಲ ಇಲ್ಲ. ಇನ್ನೂ ಈ ಕಾರ್ಡ್ ಅಪ್‌ಗ್ರೇಡ್ ಸಂಪೂರ್ಣ ಉಚಿತವಾಗಿದ್ದು, ಯಾವ ಶುಲ್ಕ ಇಲ್ಲ ಎಂದು ಕೇಂದ್ರದ ಮೂಲಗಳು ಮಾಹಿತಿ ನೀಡಿವೆ.
ಆದರೆ ಅಪ್‌ಗ್ರೇಡ್ ಎಲ್ಲಿ? ಹೇಗೆ ಆಗುತ್ತದೆ. ಐಟಿ ಇಲಾಖೆಗೆ ಅರ್ಜಿ ಸಲ್ಲಿಸಬೇಕಾ? ಹತ್ತಿರ ಗ್ರಾಮ್ ಒನ್, ಬೆಂಗಳೂರು ಒನ್‌ಗೆ ತೆರಳಬೇಕಾ? ಎಂಬಿತ್ಯಾದಿ ಮಾರ್ಗಸೂಚಿಗಳು ಬಿಡುಗಡೆ ಆಗಬೇಕಿದೆ.












Click it and Unblock the Notifications