ಅಂದು ಪ್ರಧಾನಿ ಮೋದಿಯಾಡಿದ್ದು ಸ್ವದೇಶಿ ಮಂತ್ರ: ಇಂದು?
ನವದೆಹಲಿ, ಸೆ 17: ನಷ್ಟದಲ್ಲಿರುವ ಸರಕಾರೀ ಕಂಪೆನಿಗಳಿಗೆ ಕೇಂದ್ರದಲ್ಲಿನ ನರೇಂದ್ರ ಮೋದಿ ಸರಕಾರ ಉತ್ತೇಜನ ನೀಡಬಹುದೆನ್ನುವ ಹಲವು ಕಾರ್ಮಿಕ ಸಂಘಟನೆಗಳ ಕನಸು, ನನಸಾಗುವ ಸಾಧ್ಯತೆ ಕ್ಷೀಣಿಸುತ್ತಿದೆ. ಬದಲಿಗೆ, ಸರಕಾರೀ ಸ್ವಾಮ್ಯದ ಸುಮಾರು ಹತ್ತು ಸಂಸ್ಥೆಗಳಿಗೆ ಬೀಗ ಜಡಿಯಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.
ಸರಕಾರದ ಒಡೆತನದಲ್ಲಿರುವ ಸುಮಾರು 260 ಕಂಪೆನಿಗಳ ಪೈಕಿ ಬೆರಳಣಿಕೆಯ ಸಂಸ್ಥೆಗಳು ಮಾತ್ರ ಲಾಭದಲ್ಲಿವೆ. ಉಳಿದ ಕಂಪೆನಿಗಳು ತೀವ್ರ ನಷ್ಟ ಅನುಭವಿಸುತ್ತಿದೆ. ಇದರಿಂದ ಕೇಂದ್ರ ಸರಕಾರಕ್ಕೆ ವಾರ್ಷಿಕ ಭಾರೀ ಆರ್ಥಿಕ ಹೊಡೆತ ಬೀಳುತ್ತಿದೆ.
2012-13ರ ಅವಧಿಯಲ್ಲಿ ಪ್ರಮುಖವಾಗಿ ಹತ್ತು ಕಂಪೆನಿಗಳಿಂದ ನಾಲ್ಕು ಬಿಲಿಯನ್ ಡಾಲರ್ ನಷ್ಟವಾಗಿದೆ. ಹಾಗಾಗಿ ಈ ಹತ್ತು ಕಂಪೆನಿಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದ್ದು, ಕಾರ್ಮಿಕ ಸಂಘಟನೆಯ ಮುಖಂಡರ ಜೊತೆ ಮಾತುಕತೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆಂದು ಇಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಸಂಸದೀಯ ಕಾರ್ಯದರ್ಶಿ ಅಜಿತ್ ಸೇಠ್ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಹತ್ತು ಕಂಪೆನಿಗಳನ್ನು ಮುಚ್ಚಲು ಸರಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಈ ಹತ್ತು ಕಂಪೆನಿಗಳನ್ನು ನಂಬಿಕೊಂಡು ಸಾವಿರಾರು ಕಾರ್ಮಿಕರು ಇರುವುದರಿಂದ ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC), ಸ್ಟೀಲ್ ಅಥಾರಟಿ ಆಫ್ ಇಂಡಿಯಾ ಸೇರಿದಂತೆ ಕೆಲವು ಕಂಪೆನಿಗಳು ಮಾತ್ರ ಲಾಭದಲ್ಲಿದೆ. ತೀವ್ರ ನಷ್ಟದಲ್ಲಿರುವ ಹತ್ತು ಕಂಪೆನಿಗಳನ್ನು ಮುಚ್ಚಲು ಸರಕಾರಕ್ಕೆ ಶಿಫಾರಸು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಜಿತ್ ಸೇಠ್ ಹೇಳಿದ್ದಾರೆ.
ಸ್ಥಗಿತಗೊಳಿಸಲು ಶಿಫಾರಸು ಮಾಡಲಾಗಿರುವ ಹತ್ತು ಕಂಪೆನಿಗಳಲ್ಲಿ ಸ್ಲೈಡಿನಲ್ಲಿರುವ ಪ್ರಮುಖ ಐದು ಕಂಪೆನಿಗಳೂ ಸೇರಿವೆ.

ಹಿಂದೂಸ್ಥಾನ್ ಫರ್ಟಿಲೈಸರ್ಸ್ ಕಾರ್ಪೋರೇಶನ್ ಲಿಮಿಟೆಡ್
01.12.1977ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆಯು 2002ರಲ್ಲಿ ಸಂಸ್ಥೆಯ ಪಶ್ಚಿಮಬಂಗಾಳದ ಬೌರಾನಿ, ದುರ್ಗಾಪುರ ಮತ್ತು ಹಲ್ದಿಯಾ ಘಟಕವನ್ನು ನಷ್ಟದಿಂದಾಗಿ ಮುಚ್ಚಿತ್ತು. ಮಾರ್ಚ್ 2010ರಲ್ಲಿ ಸಂಸ್ಥೆಯ 4665 ಕಾರ್ಮಿಕರು ವಿಆರ್ಎಸ್ ಸ್ಕೀಮನಡಿ ರಾಜೀನಾಮೆ ನೀಡಿದ್ದರು.(ಚಿತ್ರ:ವಿಕಿಪಿಡಿಯಾ)

ಭಾರತ ಸಂಚಾರ ನಿಗಮ ನಿಯಮಿತ
ಸೆಪ್ಟಂಬರ್ 2000ರಲ್ಲಿ ಅಸ್ತಿತ್ವಕ್ಕೆ ಬಂದ ಬಿಎಸ್ಎನ್ಎಲ್ ಸಂಸ್ಥೆ, ಜನವರಿ 2014ರ ವರೆಗೆ 117 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಸ್ಥಿರ ದೂರವಾಣಿ ಸೇವೆಯಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿದ್ದರೂ ಬಿಎಸ್ಎನ್ಎಲ್ ನಷ್ಟದ ಹಾದಿಯಲ್ಲಿದೆ.(ಚಿತ್ರ:ವಿಕಿಪಿಡಿಯಾ)

ಹಿಂದೂಸ್ಥಾನ್ ಫೋಟೋ ಫಿಲಂಸ್
1960ರಲ್ಲಿ ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಸಿನಿಮಾ ರೀಲುಗಳನ್ನು ತಯಾರಿಸುವ ಕಂಪೆನಿಯಾಗಿತ್ತು. ಕೇಂದ್ರ ಸರಕಾರ 1996ರಲ್ಲಿ ವ್ಯಾಧಿಗ್ರಸ್ಥ ಕಂಪೆನಿಯ ಪಟ್ಟಿಗೆ ಈ ಸಂಸ್ಥೆಯನ್ನು ಸೇರಿಸಿತ್ತು. 2003ರಲ್ಲಿ ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡಲು ಸಾಧ್ಯವಿಲ್ಲವೆಂದು ಕಂಪೆನಿಯ ಉತ್ಪಾದನಾ ಘಟಕವನ್ನು ಮುಚ್ಚಲಾಗಿತ್ತು.(ಚಿತ್ರ:ವಿಕಿಪಿಡಿಯಾ)

ಮಹಾನಗರ ಟೆಲೆಕಾಂ ನಿಗಮ ನಿಯಮಿತ
ಮುಂಬೈ ಮತ್ತು ದೆಹಲಿ ಮಹಾನಗರ ವ್ಯಾಪ್ತಿಗೆ ಸೀಮಿತವಾಗಿರುವ ಈ ಸಂಸ್ಥೆ ಕಾರ್ಯಾರಂಭ ಮಾಡಿದ್ದು ಎಪ್ರಿಲ್ 1986ರಲ್ಲಿ. ಆರಂಭವಾದ ಆರೇಳು ವರ್ಷಗಳಲ್ಲಿ ಏಕಸ್ವಾಮ್ಯ ಸಾಧಿಸಿದ್ದ ಈ ಸಂಸ್ಥೆ ನಂತರದ ದಿನಗಳಲ್ಲಿ ಖಾಸಗಿ ಕಂಪೆನಿಗಳಿಗೆ ಪೈಪೋಟಿ ನೀಡಲಾಗದೇ ತೀವ್ರ ಆರ್ಥಿಕ ನಷ್ಟ ಅನುಭವಿಸಲಾರಂಭಿಸಿತು. (ಚಿತ್ರ:ವಿಕಿಪಿಡಿಯಾ)

ಏರ್ ಇಂಡಿಯಾ
ಕೇಂದ್ರ ಸರಕಾರೀ ಸ್ವಾಮ್ಯದ ದೇಶದ ಮೂರನೇ ಅತಿದೊಡ್ದ ಏರ್ ಲೈನ್ಸ್ ಏರ್ ಇಂಡಿಯಾ ಕೂಡಾ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಇಂಡಿಯನ್ ಏರ್ಲೈನ್ಸ್ ಸಂಸ್ಥೆಯನ್ನು ಏರ್ ಇಂಡಿಯಾ ಜೊತೆ ವಿಲೀನಗೊಳಿಸದ ನಂತರ ಈ ಸಂಸ್ಥೆ ಮತ್ತಷ್ಟು ನಷ್ಟ ಅನುಭವಿಸಿತು. (ಚಿತ್ರ:ವಿಕಿಪಿಡಿಯಾ)
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications