ಭಾರತದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಸಿಹಿ ಸುದ್ದಿ

ನವದೆಹಲಿ, ಜನವರಿ 02: ಹೊಸ ವರ್ಷಕ್ಕೆ ದೇಶದ ರೈತರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಿಹಿ ಸುದ್ದಿ ನೀಡಿದ್ದಾರೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮತ್ತು ಪುನರ್‌ರಚಿತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (RWBCIS) ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಿದೆ. ಇದರೊಂದಿಗೆ ರಸಗೊಬ್ಬರ ಸಬ್ಸಿಡಿ ಹೆಚ್ಚಳ ಮಾಡಿ, ಅದರ ಉತ್ತೇಜನವನ್ನು ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.

Union Cabinet Approved Financial Boost of Rs 69 515 Crore Two Schemes for Farmers

ಹೌದು, ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೈತ ಪರ ಯೋಜನೆಗಳಿಗೆ ಆದ್ಯತೆ ನೀಡಲಾಯಿತು. 2024-25ರವರೆಗಿದ್ದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮತ್ತು ಪುನರ್‌ರಚಿತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (RWBCIS) ಅವಧಿಯನ್ನು 2025-26 ರವರೆಗೆ ವಿಸ್ತರಣೆ ಮಾಡಲಾಯಿತು. ಈ ಎರಡು ಯೋಜನೆಗಳಿಗೆ ನಿಗದಿ ಮಾಡಿದ್ದ ಒಟ್ಟು ಅನುದಾನವನ್ನು 66,515 ಕೋಟಿ ರೂಪಾಯಿಯಿಂದ 69,515.71 ಕೋಟಿ ರೂಪಾಯಿ ಹೆಚ್ಚಿಸಲಾಗಿದೆ.

ಈ ಮೂಲಕ ರೈತರು ನೈಸರ್ಗಿಕ ವಿಪತ್ತುಗಳಿಂದ ಬೆಳೆ ನಾಶ, ನಷ್ಟಕ್ಕೆ ಪಡೆಯುತ್ತಿದ್ದ ಕವರೇಜ್ ಅನ್ನು ಒಂದು ವರ್ಷ ಹೆಚ್ಚಿನ ಅವಧಿವರೆಗೆ ಪಡೆಯುವುದು ಖಚಿತವಾಗಿದೆ.

ಇನ್ನೂ ಸಬ್ಸಿಡಿ ದರದಲ್ಲಿ ಡಿಎಪಿ ಗೊಬ್ಬರ ವಿತರಿಸುವ ಯೋಜನೆಯನ್ನು ಇನ್ನೂ ಒಂದು ವರ್ಷದ ಅವಧಿವರೆಗೆ ವಿಸ್ತರಣೆ ಮಾಡಲಾಯಿತು. ಇದರ ಸಬ್ಸಿಡಿಗಾಗಿ 3850 ರೂಪಾಯಿಯ ನೆರವು ನೀಡಲು ನಿರ್ಧರಿಸಿದೆ. ಸದ್ಯ ರೈತರು 50 ಕೆ.ಜಿ. ಡಿಎಪಿ ಗೊಬ್ಬರವನ್ನು 1350 ರೂಪಾಯಿ ಕೊಟ್ಟು ಖರೀದಿಸುತ್ತಿದ್ದಾರೆ. ಎಂದು ಸಂಪುಟ ಸಭೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದರು.

FIAT ನಿಧಿ ಸ್ಥಾಪನೆಗೆ ಅನುಮೋದನೆ

ಇನ್ನೂ ಸಂಪುಟ ಸಭೆಯಲ್ಲಿ ಇನ್ನೋವೇಶನ್ ಮತ್ತು ಟೆಕ್ನಾಲಜಿ (FIAT) ನಿಧಿ ರಚಿಸಲು 824.77 ಕೋಟಿ ರೂ. ಹಂಚಲು ನಿರ್ಧರಿಸಲಾಯಿತು. ಕೃಷಿ ವಿಮಾ ಯೋಜನೆಗಳ ಜಾರಿಗೆ ಬಳಸಲಾಗುವ ತಂತ್ರಜ್ಞಾನಗಳ ಅಭಿವೃದ್ಧಿಗೆ ಆರ್ಥಿಕ ಸಹಾಯವಾಗಲೆಂದು ನಿಧಿ ಸ್ಥಾಪಿಸಲಾಗಿದೆ.

ಬೆಳೆ ಹಾನಿ, ಮೌಲ್ಯಮಾಪನ, ಕ್ಲೈಂಗಳ ಸೆಟಲ್‌ಮೆಂಟ್, ಸಂಶೋಧನೆ, ಅಧ್ಯಯನದಂತಹ ಅಭಿವೃದ್ಧಿಗಾಗಿ ನಿಧಿ ಹಣ ಬಳಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದ ಕೃಷಿ ವಿಮಾ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ರೈತರಿಗೆ ಹೆಚ್ಚಿನ ಆರ್ಥಿಕ ಭದ್ರತೆ ನೀಡಿದಂತಾಗುತ್ತದೆ ಎಂದು ಪ್ರಧಾನಿ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+