AI Center: ಭಾರತದ ಶಿಕ್ಷಣಕ್ಕಾಗಿ ಎಐ ಕೇಂದ್ರ, ಅರೋಗ್ಯ ವಲಯಕ್ಕೂ ಸಿಹಿ ಸುದ್ದಿ ಕೊಟ್ಟ ವಿತ್ತ ಸಚಿವೆ
ನವದೆಹಲಿ, ಫೆಬ್ರವರಿ 01: ಭಾರತವು ತಂತ್ರಜ್ಞಾನ ಕೇಂದ್ರದಲ್ಲಿ ಮತಹ್ವದ ಸಾಧನೆಗಳನ್ನು ಮಾಡುತ್ತಿದೆ. ಈ ಪೈಕಿ ಜಾಗತಿಕವಾಗಿ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ (AI Technology) ತಂತ್ರಜ್ಞಾವನ್ನು ಅಳವಡಿಸಿಕೊಳ್ಳುವಲ್ಲಿ, ವಿವಿಧ ರಂಗದಲ್ಲಿ ಬಳಕೆ ಮಾಡುವಲ್ಲಿ ಭಾರತ ಸರ್ಕಾರ ಮುಂದಿದೆ. ಇದೀಗ ಬಜೆಟ್ ನಲ್ಲಿ AI ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡುವುದಾಗಿ ತಿಳಿಸಿದೆ.
ಪ್ರಸಕ್ತ ಸಾಲಿನ ಕೆಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರೂಪಾಯಿ 500 ಕೋಟಿ ಬೃಹತ್ ವೆಚ್ಚದಲ್ಲಿ ಶಿಕ್ಷಣ ರಂಗದ ಏಳಿಗೆಗಾಗಿ, AI ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದಷ್ಟೇ ಅಲ್ಲದೇ ಆರೋಗ್ಯ ವಲಯದಲ್ಲೂ ಸಹ AI ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಈ ಮೂಲಕ ತಂತ್ರಜ್ಞಾನ ವಲಯದಲ್ಲಿ ಮಹತ್ವದ ಬದಲಾವಣೆಗಳ ಆಗಲಿವೆ.

ಒಂದು ದೇಶ ಅಭಿವೃದ್ಧಿ ಆಗಲು ಅಲ್ಲಿನ ಜನರು ಶಿಕ್ಷಣ ಹೊಂದುವುದು ಅತೀ ಮುಖ್ಯವಾಗಿರುತ್ತದೆ. ಆ ಶಿಕ್ಷಣವು ಗುಣಮಟ್ಟದ್ದು, ಹಾಗೂ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಶಿಕ್ಷಣ ದೊರೆಯುವುದು ಮುಖ್ಯವಾಗಿರುತ್ತದೆ. ಈ ವಲಯದ ಮೇಲೂ ತಂತ್ರಜ್ಞಾನ ಪ್ರಭಾವ ಭೀರಿದೆ. ಭಾರತೀಯ ಶಿಕ್ಷಣ ರಂಗದ ಸುಧಾರಣೆಗಾಗಿ ದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ AI ಕೇಂದ್ರ ಸ್ಥಾಪನೆ ಆಗಲಿದೆ.
ದೇಶದ ಪ್ರತಿ ಪ್ರಜೆಯು ಆರೋಗ್ಯವಾಗಿದ್ದರೆ ಇಡಿ ದೇಶವೇ ಆರೋಗ್ಯವಾಗಿದ್ದಂತೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಆರೋಗ್ಯ ವಲಯದಲ್ಲಿ ಎಐ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮಾಡಲು ಕೇಂದ್ರ ಕ್ರಮ ವಹಿಸಲಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಪ್ರಮುಖ ಘೋಷಣೆ ಆಗಿದೆ.
ಆದಷ್ಟು ಶೀಘ್ರವೇ ಆರೋಗ್ಯ ಇಲಾಖೆಯಲ್ಲಿ ಎಐ ತಂತ್ರಜ್ಞಾನ ಬಳಕೆ ಕುರಿತು ನಿಯಮ, ಮಾರ್ಗಸೂಚಿ ಸಹಿತ ಆದೇಶ ಪ್ರಕಟವಾಗಲಿದೆ. ಶಿಕ್ಷಣ ರಂಗದಲ್ಲಿ ಭಾರತ ಮತ್ತಷ್ಟು ಸಾಧನೆ ಮಾಡಲು ಸಹಾಯವಾಗುವಂತೆ ಎಐ ಕೇಂದ್ರ ಸ್ಥಾಪನೆಗ ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ವ್ಯಯಿಸುತ್ತಿದೆ. ಎಲ್ಲಿ ಎಐ ಕೇಂದ್ರ ಸ್ಥಾಪನೆ ಆಗಲಿದೆ. ಯಾವಾಗ ಕಾರ್ಯಾಚರಣೆ, ಈ ಕೇಂದ್ರದಲ್ಲಿ ಏನೆಲ್ಲ ಇರಲಿದೆ ಎಂಬ ಹಲವು ಪ್ರಶ್ನೆಗಳಿಗೆ ಆದಷ್ಟು ಶೀಘ್ರವೇ ಕೇಂದ್ರ ಸರ್ಕಾರ ಉತ್ತರದಿಂದ ಉತ್ತರ ಸಿಗಲಿದೆ.












Click it and Unblock the Notifications