Union Budget 2025: ಕ್ಷೇತ್ರವಾರು ಬಜೆಟ್ ಹಂಚಿಕೆ ವಿವರ ತಿಳಿಯಿರಿ
Union Budget 2025: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಇದು ಅವರು ಮಂಡಿಸಿದ 8ನೇ ಬಜೆಟ್ ಆಗಿದ್ದು, ಈ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಹಾಗಾದರೆ ಈ ಬಜೆಟ್‌ನಲ್ಲಿ ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲಿಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಜೆಟ್ ಮೊತ್ತದಲ್ಲಿ ರಕ್ಷಣಾ ವಲಯಕ್ಕೆ ಅತಿ ಹೆಚ್ಚು ಶೇಕಡಾ 9ರಷ್ಟು ಮೀಸಲಿಡಲಾಗಿದೆ. ಉಳಿದಂತೆ ಗಾಮೀಣ ಅಭಿವೃದ್ಧಿ ಶೇಕಡಾ ಶೇಕಡ 5ರಷ್ಟು, ಗೃಹ ಇಲಾಖೆಗೆ ಶೇಕಡ 4 ರಷ್ಟು, ಕೃಷಿಗೆ ಶೇಕಡ 3.3ರಷ್ಟು , ಶಿಕ್ಷಣಕ್ಕೆ 2.9 ರಷ್ಟು ಹಣವನ್ನು ಮೀಸಲಿಡಲಾಗಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಬಜೆಟ್ 3,48,858 ಕೋಟಿ ರೂಪಾಯಿ ಹೆಚ್ಚಳ ಆಗಿದೆ ಎಂದು ತಿಳಿದುಬಂದಿದೆ.

ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಹಂಚಿಕೆ?
* ರಕ್ಷಣೆ - 4,91,732 ಕೋಟಿ ರೂಪಾಯಿ
* ಗ್ರಾಮೀಣ ಅಭಿವೃದ್ಧಿ - 2,66,817 ಕೋಟಿ ರೂಪಾಯಿ
* ಗೃಹ ಇಲಾಖೆ - 2,33,211 ಕೋಟಿ ರೂಪಾಯಿ
* ಕೃಷಿ ಸಂಬಂಧಿಸಿದ ಚಟುವಟಿಕೆ - 1,71,437 ಕೋಟಿ ರೂಪಾಯಿ
* ಶಿಕ್ಷಣ - 1,28,650 ಕೋಟಿ ರೂಪಾಯಿ
* ಆರೋಗ್ಯ - 98,311 ಕೋಟಿ ರೂಪಾಯಿ
* ನಗರಾಭಿವೃದ್ಧಿ - 96,777 ಕೋಟಿ ರೂಪಾಯಿ
* ಐಟಿ ಮತ್ತು ಟೆಲಿಕಾಂ - 95,298 ಕೋಟಿ ರೂಪಾಯಿ
* ಇಂಧನ - 81,174 ಕೋಟಿ ರೂಪಾಯಿ
* ವಾಣಿಜ್ಯ ಮತ್ತು ಕೈಗಾರಿಕೆ - 65,553 ಕೋಟಿ ರೂಪಾಯಿ
* ಸಮಾಜ ಕಲ್ಯಾಣ ಇಲಾಖೆ - 60,052 ಕೋಟಿ ರೂಪಾಯಿ
* ವಿಜ್ಞಾನ ಇಲಾಖೆಗಳು - 55,679 ಕೋಟಿ ರೂಪಾಯಿ
ಬಜೆಟ್‌ನ ಪ್ರಮುಖ ಅಂಗಳು
* ತೆರಿಗೆ, ನಗರಾಭಿವೃದ್ಧಿ, ಗಣಿಗಾರಿಕೆ, ಹಣಕಾಸು ವಲಯ, ವಿದ್ಯುತ್ ಮತ್ತು ನಿಯಂತ್ರಕ ಸುಧಾರಣೆಗಳು ಸೇರಿ 6 ಕ್ಷೇತ್ರಗಳ ಸುಧಾರಣೆಗೆ ಘೋಷಣೆ.
* ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುವ ಪ್ರಧಾನ ಮಂತ್ರಿ ಧನ್ ಧ್ಯಾನ್ ಕೃಷಿ ಯೋಜನೆಯ ಘೋಷಣೆ.
* ಯುವಕರು, ಮಹಿಳೆಯರು ಮತ್ತು ರೈತರನ್ನು ಕೇಂದ್ರೀಕರಿಸುವ ಗ್ರಾಮೀಣ ಸಮೃದ್ಧಿ ಕಾರ್ಯಕ್ರಮ ಪ್ರಾರಂಭ.
* ತೊಗರಿ, ಉದ್ದು ಮತ್ತು ಹೆಸರು ಬೇಳೆ ಮೇಲೆ ವಿಶೇಷ ಗಮನಹರಿಸಿ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರಕ್ಕಾಗಿ 6 ವರ್ಷಗಳ ಕಾರ್ಯಕ್ರಮ ಪ್ರಾರಂಭ.
* ತರಕಾರಿಗಳು, ಹಣ್ಣುಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಲಾಭದಾಯಕ ಬೆಲೆಗಳನ್ನು ಒದಗಿಸಲು ಸಮಗ್ರ ಕಾರ್ಯಕ್ರಮ ಘೋಷಣೆ
* ಬೀಜದ ಉತ್ಪಾದನೆ ಮತ್ತು ಸಂಸ್ಕರಣೆಯನ್ನು ಸುಧಾರಿಸಲು ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆ.
* ಹೆಚ್ಚಿನ ಇಳುವರಿ ನೀಡುವ ಬೀಜಗಳ ರಾಷ್ಟ್ರೀಯ ಮಿಷನ್ ಪ್ರಾರಂಭ
* ಹತ್ತಿ ಉತ್ಪಾದನೆ ಉತ್ತೇಜಿಸಲು 5 ವರ್ಷಗಳ ಯೋಜನೆ ಘೋಷಿಸಿದ ಹಣಕಾಸು ಸಚಿವ ಸೀತಾರಾಮನ್
* ಕಿಸಾನ್ ಕ್ರೆಡಿಟ್ ಕಾರ್ಡ್‌ಗಾಗಿ ಬಡ್ಡಿ ಸಬ್ಸಿಡಿ ಯೋಜನೆಯ ಮಿತಿಯನ್ನು ಸರ್ಕಾರ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ.
* ಗುಣಮಟ್ಟದ ಉತ್ಪನ್ನಗಳೊಂದಿಗೆ ಶೇಕಡ 45ರಷ್ಟು ರಫ್ತಿನ ಮೇಲೆ ಎಂಎಸ್ಎಂಇಗಳೇ ಜವಾಬ್ದಾರರರು. ಎಂಎಸ್ಎಂಇ ವರ್ಗೀಕರಣಕ್ಕಾಗಿ ಹೂಡಿಕೆ ಮತ್ತು ವಹಿವಾಟು ಮಿತಿ ಹೆಚ್ಚಳ.
* ಭಾರತ ಅಂಚೆ ಇಲಾಖೆಯು 1.5 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳನ್ನು ಹೊಂದಿರುವ ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ ಸಂಸ್ಥೆಯಾಗಿ ರೂಪಾಂತರಗೊಳ್ಳಲಿದ್ದು, ಇದು ಗ್ರಾಮೀಣ ಆರ್ಥಿಕತೆಗೆ ವೇಗ ವರ್ಧಕವಾಗಲಿದೆ ಎಂದು ಹೇಳಿದ್ದಾರೆ.












Click it and Unblock the Notifications