Budget 2024: ರೈತರು ಸೇರಿ 5 ವರ್ಗಗಳಿಗೆ ಆದ್ಯತೆ: ಕೃಷಿಗೆ ಇಟ್ಟ ಅನುದಾನ ಎಷ್ಟು?
ಬೆಂಗಳೂರು, ಜುಲೈ 23: ಮಿತ್ರ ಪಕ್ಷಗಳ ಸಹಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿಗೆ ಅಧಿಕಾರ ಹಿಡಿದಿದ್ದಾರೆ. ಮೋದಿ 3.0 ಸರ್ಕಾರಲ್ಲಿ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬಜೆಟ್ ಮಂಡಿಸಿದ್ದಾರೆ. ಸರ್ಕಾರುವ ನಾಲ್ಕು ವರ್ಗಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರವು ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಸಮುದಾಯದ ಅಭಿವೃದ್ಧಿಯತ್ತ ಗಮನ ಹರಿಸಿದೆ. ಈ ವರ್ಷ ಬಜೆಟ್ ಥೀಮ್‌ನಲ್ಲಿ ಉದ್ಯೋಗ, ಕೌಶಲ್ಯ, MSME ಮತ್ತು ಮಧ್ಯಮ ವರ್ಗದ 5 ಅಂಶಗಳಿವೆ ಎಂದು ಅವರು ವಿವರಿಸಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು 5 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಈ ಮೂಲಕ ಅನ್ನದಾತರಿಗೆ ಒಂದಷ್ಟು ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ ಎಂದರು.
ಕೇಂದ್ರ ಸರ್ಕಾರವು 9 ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕೃಷಿಯಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ, ಉದ್ಯೋಗ ಮತ್ತು ಕೌಶಲ್ಯಗಳು, ಅಂತರ್ಗತ ಮಾನವ ಸಂಪನ್ಮೂಲಗಳು ಮತ್ತು ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ, ಉತ್ಪಾದನಾ ಸೇವೆಗಳು, ನಗರಾಭಿವೃದ್ಧಿ, ಶಕ್ತಿ ಭದ್ರತೆ, ಮೂಲಸೌಕರ್ಯ, ನಾವೀನ್ಯತೆ ಮತ್ತು ಆರ್ ಮತ್ತು ಡಿ ಹಾಗೂ ಮುಂದಿನ ಪೀಳಿಗೆಯ ಸುಧಾರಣೆಗಳಿಗೆ ಮುಂದಿನ ಐದು ವರ್ಷ ಆದ್ಯತೆ ನೀಡಲಾಗುವುದು ಎಂದು ಸಚಿವೆ ತಿಳಿಸಿದರು.
ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ. ಹಂಚಿಕೆ
ದೇಶದ ಬಹುಪಾಲು ಜನರು ನೆಚ್ಚಿಕೊಂಡಿರುವ ಈ ಕೃಷಿ ಹಾಗೂ ಅದಕ್ಕೆ ಪೂರಕವಾದ ಕ್ಷೇತ್ರಗಳಿಗೆ 1.52 ಲಕ್ಷ ಕೋಟಿ ಹಣ ಮೀಸಲಿಟ್ಟಿದ್ದೇವೆ. '32 ಪ್ರಾದೇಶಿಕ ಮತ್ತು ತೋಟಗಾರಿಕಾ ಬೆಳೆಗಳ ಹೊಸ 109 ಹೆಚ್ಚು ಇಳುವರಿ ಮತ್ತು ಹವಾಮಾನ ಸ್ಥಿತಿಸ್ಥಾಪಕ ತಳಿಗಳನ್ನು ರೈತರ ಕೃಷಿಗೆ ಬಿಡುಗಡೆ ಮಾಡಲಾಗುವುದು.
ಮುಂದಿನ ಎರಡೇ ವರ್ಷಗಳಲ್ಲಿ, ಪ್ರಮಾಣೀಕರಣ ಮತ್ತು ಬ್ರ್ಯಾಂಡಿಂಗ್ ಮೂಲಕ ಬೆಂಬಲಿತ ನೈಸರ್ಗಿಕ ಕೃಷಿಯಲ್ಲಿ 1 ಕೋಟಿ ರೈತರನ್ನು ಸೇರಿಸುವ ಗುರಿ ಸರ್ಕಾರ ಹೊಂದಿದೆ ಎಂದು ತಿಳಿಸಿದರು.












Click it and Unblock the Notifications