ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Union Budget 2023; ಸಿಗರೇಟ್ ಮೇಲಿನ ಸುಂಕ ಹೆಚ್ಚಳ, ಎಷ್ಟಾಗಲಿದೆ ದರ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಭಾಷಣದಲ್ಲಿ ಸಿಗರೇಟುಗಳ ಮೇಲಿನ ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕವನ್ನು ಏರಿಕೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ.

|
Google Oneindia Kannada News

ನವದೆಹಲಿ, ಫೆಬ್ರವರಿ 01; ಬುಧವಾರ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬಜೆಟ್‌ನಲ್ಲಿ ಸಿಗರೇಟ್ ಮೇಲಿನ ಸುಂಕ ಹೆಚ್ಚಳ ಮಾಡಲಾಗಿದೆ.

ನಿರ್ಮಲಾ ಸೀತಾರಾಮನ್ ಬಜೆಟ್‌ ಭಾಷಣದ ಬಳಿಕ ಸಿಗರೇಟ್ ಮೇಲಿನ ಸುಂಕ ಏರಿಕೆ ಮಾಡಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಜೋರಾಗಿವೆ. ಹಲವಾರು ಮೀಮ್‌ಗಳು ಸಹ ಹರಿದಾಡುತ್ತಿವೆ.

Budget 2023: ಧೂಮಪಾನಿಗಳೇ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ ಸಿಗರೇಟ್, ಶೇ.16ರಷ್ಟು ಸುಂಕ ಹೆಚ್ಚಳ Budget 2023: ಧೂಮಪಾನಿಗಳೇ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ ಸಿಗರೇಟ್, ಶೇ.16ರಷ್ಟು ಸುಂಕ ಹೆಚ್ಚಳ

ಬಜೆಟ್‌ನಲ್ಲಿ ನಿರ್ದಿಷ್ಟ ಸಿಗರೇಟುಗಳ ಮೇಲಿನ ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕವನ್ನು (ಎನ್‌ಸಿಸಿಡಿ) ಸುಮಾರು ಶೇ 16 ರಷ್ಟು ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಸಿಗರೇಟ್‌ ದರಗಳು ಎಷ್ಟು ಏರಿಕೆಯಾಗಲಿದೆ? ಎಂಬ ಚರ್ಚೆ ನಡೆಯುತ್ತಿದೆ.

Budget 2023; ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ; ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ ಬಿಜೆಪಿ ನಾಯಕರುBudget 2023; ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ; ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ ಬಿಜೆಪಿ ನಾಯಕರು

Union Budget 2023 Increased Tax On Cigarettes How Costly After Tax Hike

ನಿರ್ದಿಷ್ಟ ಸಿಗರೇಟುಗಳ ಮೇಲಿನ ಎನ್‌ಸಿಸಿಡಿಯನ್ನು ಈ ಹಿಂದೆ ಕೊನೆಯ ಬಾರಿಗೆ ಮೂರು ವರ್ಷಗಳ ಹಿಂದೆ ಪರಿಷ್ಕರಿಸಲಾಗಿತ್ತು. ಈಗ ಘೋಷಣೆ ಮಾಡಿರುವ ಸಿಗರೇಟ್‌ಗಳ ಮೇಲಿನ ಎನ್‌ಸಿಸಿಡಿ ಸುಂಕ ದರ 2/2/2023ರಿಂದ ಜಾರಿಗೆ ಬರುತ್ತದೆ.

Railway Budget 2023; ರೈಲ್ವೆ ಇಲಾಖೆಗೆ ದಾಖಲೆಯ ಅನುದಾನ ಹಂಚಿಕೆRailway Budget 2023; ರೈಲ್ವೆ ಇಲಾಖೆಗೆ ದಾಖಲೆಯ ಅನುದಾನ ಹಂಚಿಕೆ

ಎಷ್ಟಾಗಲಿದೆ ದರ?: 1000 ಸಿಗರೇಟ್, ಪ್ರಸ್ತುತ ದರ, ಏರಿಕೆಯಾಗುವ ದರದ ಮಾಹಿತಿ ಹೀಗಿದೆ.

* 65 ಮಿಮೀ ಉದ್ದ ಮೀರದ ಫಿಲ್ಟರ್ ಸಿಗರೇಟ್‌ಗಳನ್ನು ಹೊರತುಪಡಿಸಿ 200 ರೂ. ಇರುವುದು 230ಕ್ಕೆ ಏರಿಕೆ.

* 65 ಮಿಮೀಗಿಂತ ಹೆಚ್ಚಿನ ಅಂದರೆ 70 ಮಿಮೀ ಮೀರದ ಫಿಲ್ಟರ್ ಸಿಗರೇಟ್‌ಗಳನ್ನು ಹೊರತುಪಡಿಸಿ 250 ರಿಂದ, 290ಕ್ಕೆ ಹೆಚ್ಚಳ.

Union Budget 2023 Increased Tax On Cigarettes How Costly After Tax Hike

* 65 ಮಿಮೀ ಉದ್ದ ಮೀರದ ಫಿಲ್ಟರ್ ಸಿಗರೇಟುಗಳು. 440 ರೂ. ನಿಂದ 510ಕ್ಕೆ ಏರಿಕೆ.

* 65 ಮಿಮೀ ಗಿಂತ ಹೆಚ್ಚಿನ ಆದರೆ 70 ಮಿಮೀ ಮೀರದ ಫಿಲ್ಟರ್ ಸಿಗರೇಟ್. 440 ರೂ. ನಿಂದ 510 ರೂ. ಗ ಏಇಕೆ.

* 70 ಮಿಮೀಗಿಂತ ಹೆಚ್ಚಿನ ಉದ್ದದ ಆದರೆ 75 ಮಿಮೀ ಮೀರದ ಫಿಲ್ಟರ್ ಸಿಗರೇಟುಗಳು 545 ರೂ. ನಿಂದ 630 ರೂ.ಗಳು.

* ಇತರ ಸಿಗರೇಟು 735 ರೂ. ನಿಂದ 850 ರೂ.ಗಳು.

* ತಂಬಾಕಿಗೆ ಬದಲಿ ಸಿಗರೇಟ್‌ಗಳು 600 ರೂ. ನಿಂದ 690 ರೂ.ಗೆ ಏರಿಕೆ.

ಯಾವ ಮೂಲದಿಂದ ಎಷ್ಟು ಆದಾಯ?: ಪ್ರತಿ ಬಾರಿ ಬಜೆಟ್ ಮಂಡನೆ ಮಾಡದಾಗಲೂ ಸರ್ಕಾರಕ್ಕೆ ಯಾವ ಮೂಲದಿಂದ ಎಷ್ಟು ಆದಾಯ ಬರುತ್ತದೆ? ಎಂಬ ಮಾಹಿತಿ ನೀಡಲಾಗುತ್ತದೆ. ಈ ಬಾರಿಯ ಬಜೆಟ್‌ನಲ್ಲಿಯೂ ಈ ಕುರಿತು ವಿವರ ನೀಡಲಾಗಿದೆ.

ಬಜೆಟ್ ಅಂದಾಜಿನ ಪ್ರಕಾರ ಸರ್ಕಾರದ ಒಟ್ಟು ಆದಾಯ 45,14,884 ಕೋಟಿ ರೂ.ಗಳು. ಇದರಲ್ಲಿ ಶೇ 34ರಷ್ಟು ಆದಾಯ ಸಾಲ ಮತ್ತು ಇತರೆ ಮೂಲಗಳಿಂದ ಸಂಗ್ರಹವಾಗುತ್ತದೆ.
ಜಿಎಸ್‌ಟಿ ಪಾಲು ಶೇ 17ರಷ್ಟಾಗಿದೆ.

ಶೇ 15 ರಷ್ಟು ಆದಾಯ ತೆರಿಗೆಯಿಂದ, ಅಬಕಾರಿ ಸುಂಕದಿಂದ ಶೇ 7, ಕಾರ್ಪೊರೇಟ್ ತೆರಿಗೆಯಿಂದ ಶೇ 15, ತೆರಿಗೆಯೇತರ ಸ್ವೀಕೃತಿ ಶೇ 6, ಸುಂಕದಿಂದ ಶೇ 4ರಷ್ಟು ಆದಾಯ ಬರುತ್ತದೆ.

English summary
Budget 2023 For Cigarettes : Finance minister Nirmala Sitharaman announced 16 per cent hike in the National Calamity Cintingent Duty on cigarettes. Know the cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X