ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023: ನಿರ್ಮಲಾ ಸೀತಾರಾಮನ್ ಘೋಷಿಸಿದ ಯೋಜನೆಗಳು

ನಿರ್ಮಲಾ ಸೀತಾರಾಮನ್‌ ಅವರು ದುರ್ಬಲ ಆದಿವಾಸಿ ಬುಡಕಟ್ಟು ಗುಂಪುಗಳ ಸಾಮಾಜಿಕ- ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಯೋಜನೆಯನ್ನು ಪ್ರಾರಂಭಿಸುವುದಾಗಿ ಪ್ರಸ್ತಾಪಿಸಿದ್ದಾರೆ.

|
Google Oneindia Kannada News

ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.

ವಿಶೇಷವಾಗಿ ದುರ್ಬಲ ಆದಿವಾಸಿ ಬುಡಕಟ್ಟು ಗುಂಪುಗಳ ಸಾಮಾಜಿಕ- ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಯೋಜನೆಯನ್ನು ಪ್ರಾರಂಭಿಸುವುದಾಗಿ ಪ್ರಸ್ತಾಪಿಸಿದ್ದಾರೆ. ಸಂಸತ್ತಿನಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (PM-PVTG) ಅಭಿವೃದ್ಧಿ ಮಿಷನ್ ಅನ್ನು ಅನುಷ್ಠಾನಗೊಳಿಸಲು 15,000 ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ.

Budget 2023: ಧೂಮಪಾನಿಗಳೇ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ ಸಿಗರೇಟ್, ಶೇ.16ರಷ್ಟು ಸುಂಕ ಹೆಚ್ಚಳBudget 2023: ಧೂಮಪಾನಿಗಳೇ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ ಸಿಗರೇಟ್, ಶೇ.16ರಷ್ಟು ಸುಂಕ ಹೆಚ್ಚಳ

ಈ ಮೂಲಕ ದುರ್ಬಲ ಬುಡಕಟ್ಟು ಗುಂಪುಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಪ್ರಧಾನ ಮಂತ್ರಿ ವಿಶೇಷವಾಗಿ ಬುಡಕಟ್ಟು ಗುಂಪುಗಳ ಅಭಿವೃದ್ಧಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದು ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಆರೋಗ್ಯ, ಶಿಕ್ಷಣ, ಪೋಷಣೆ, ರಸ್ತೆ ಮತ್ತು ಟೆಲಿಕಾಂ ಸಂಪರ್ಕಕ್ಕೆ ಸುಧಾರಿತ ಪ್ರವೇಶ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳಂತಹ ಮೂಲಭೂತ ಸೌಲಭ್ಯಗಳೊಂದಿಗೆ ಪಿವಿಟಿಜಿ ಕುಟುಂಬಗಳು ಮತ್ತು ವಾಸಸ್ಥಾನಗಳನ್ನು ಗುರಿ ಮಾಡುತ್ತದೆ ಎಂದು ಅವರು ಹೇಳಿದರು.

Union Budget 2023: Full List of Schemes Announced By FM Nirmala Sitharaman

ಮುಂದಿನ ಮೂರು ವರ್ಷಗಳಲ್ಲಿ ಮಿಷನ್ ಅನ್ನು ಕಾರ್ಯಗತಗೊಳಿಸಲು 15,000 ಕೋಟಿ ರೂಪಾಯಿಗಳ ಅನುದಾನ ನೀಡಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ, ಕೇಂದ್ರವು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ 749 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ ಎಂದು ತಿಳಿಸಿದರು.

Budget 2023: 50 ಹೊಸ ವಿಮಾನ ನಿಲ್ದಾಣಗಳ ಘೋಷಣೆBudget 2023: 50 ಹೊಸ ವಿಮಾನ ನಿಲ್ದಾಣಗಳ ಘೋಷಣೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ'ವನ್ನು ಎರಡು ವರ್ಷಗಳವರೆಗೆ ಶೇಕಡಾ 7.5 ರಷ್ಟು ಸ್ಥಿರ ಬಡ್ಡಿದರದೊಂದಿಗೆ ಘೋಷಿಸಿದ್ದಾರೆ. ಇದು ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಗರಿಷ್ಠ ಠೇವಣಿ ₹ 2 ಲಕ್ಷದವರೆಗೂ ಇರಿಸಬಹುದಾಗಇದೆ ಮತ್ತು ಈ ಯೋಜನೆಯು ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಹೊಂದಿರುತ್ತದೆ.

Union Budget 2023: Full List of Schemes Announced By FM Nirmala Sitharaman

ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ, ಗ್ರಾಮೀಣ ಮಹಿಳೆಯರನ್ನು ಸಜ್ಜುಗೊಳಿಸುವ ಮೂಲಕ 81 ಲಕ್ಷ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಣ್ಣ ರೈತರಿಗೆ ₹ 2.25 ಲಕ್ಷ ಕೋಟಿಗೂ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ. ಈ ಯೋಜನೆಯಡಿ ಸುಮಾರು ಮೂರು ಕೋಟಿ ಮಹಿಳಾ ರೈತರಿಗೆ ₹ 54,000 ಕೋಟಿ ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (ಎಸ್‌ಸಿಎಸ್‌ಎಸ್) ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತವನ್ನು 30 ಲಕ್ಷ ರೂಪಾಯಿಗೆ ಹೆಚ್ಚಿಸುವುದಾಗಿ ಘೋಷಿಸಿದರು. ಅಂಚೆ ಮಾಸಿಕ ಆದಾಯ ಯೋಜನೆಯು ಮಿತಿಯನ್ನು ಹೆಚ್ಚಿಸಿದ್ದು ಒಂದೇ ಹೆಸರಿನಲ್ಲಿ ₹ 4.5 ಲಕ್ಷಕ್ಕೆ ಮೀಸಲಿದ್ದ ಮಿತಿಯನ್ನು ₹ 9 ಲಕ್ಷದವರೆಗೂ ಹೂಡಿಕೆ ಮಾಡಬಹುದು ಎಂದು ತಿಳಿಸಿದರು.

ನಿರ್ಮಲಾ ಅವರು ಅವರ ಭಾಷಣದ ಸಮಯದಲ್ಲಿ, ಹಣಕಾಸು ಸಚಿವರು ಮಿಶ್ತಿ ಯೋಜನೆಯನ್ನು ಘೋಷಿಸಿದರು. ಹೊಸ MISHTI ಯೋಜನೆಯಡಿ ಸರ್ಕಾರವು ಕರಾವಳಿಯುದ್ದಕ್ಕೂ ಮ್ಯಾಂಗ್ರೋವ್ ತೋಟಗಳನ್ನು ಬೆಳೆಸುವ ಒಂದು ಯೋಜನೆಯಾಗಿದೆ ಎಂದು ಸೀತಾರಾಮನ್ ಹೇಳಿದರು. ಮಿಶ್ತಿ ಎಂದರೆ ಬೆಂಗಾಲಿಯಲ್ಲಿ ಸಿಹಿತಿಂಡಿಗಳು ಎಂದರ್ಥ. ಮಿಷ್ಟಿ ಯೋಜನೆಯು ಮ್ಯಾಂಗ್ರೋವ್‌ಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ.

'ಅಮೃತ್ ಕಾಲ'ದ ಮೊದಲ ಬಜೆಟ್ ಅಭಿವೃದ್ಧಿ ಭಾರತಕ್ಕಾಗಿ ಸಂಕಲ್ಪವನ್ನು ಪೂರೈಸುವ ಅಡಿಪಾಯವನ್ನು ಒದಗಿಸುತ್ತದೆ ಮತ್ತು ಸಮಾಜದ ವಂಚಿತ ವರ್ಗಗಳಿಗೆ ಆದ್ಯತೆಯನ್ನು ನೀಡುತ್ತದೆ. ಇದು ಮಹತ್ವಾಕಾಂಕ್ಷೆಯ ಸಮಾಜ, ರೈತರು ಮತ್ತು ಮಧ್ಯಮ ವರ್ಗದ ಕನಸುಗಳನ್ನು ನನಸಾಗಿಸುತ್ತದೆ. ಮಧ್ಯಮ ವರ್ಗವು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸುಗಳನ್ನು ನನಸಾಗಿಸಲು ದೊಡ್ಡ ಶಕ್ತಿಯಾಗಿದೆ ಮತ್ತು ನಮ್ಮ ಸರ್ಕಾರವು ಅದನ್ನು ಸಬಲೀಕರಣಗೊಳಿಸಲು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

English summary
Finance Minister Nirmala Sitharaman announced several new schemes in the Union Budget 2023 presented on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X