ಕೇಂದ್ರ ಬಜೆಟ್ 2020: ಹಣ್ಣು, ತರಕಾರಿ ಶೇಖರಣೆಗೆ ದೇಶದಲ್ಲಿ ಜಾಲ ನಿರ್ಮಾಣ
Recommended Video
Union Budget 2020:2022 ರೊಳಗೆ ರೈತರಿಗೆ ದುಪ್ಪಟ್ಟು ಆದಾಯ ಬರುವ ವ್ಯವಸ್ಥೆ | Nirnala Sitaram
ನವದೆಹಲಿ, ಫೆಬ್ರವರಿ 1: ದೇಶದಲ್ಲಿ ಹಣ್ಣು, ತರಕಾರಿ ಶೇಖರಣೆಗೆ ಹೊಸ ಜಾಲ ನಿರ್ಮಾಣ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 2020ರ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಭಾರತೀಯ ರೈಲ್ವೆಯು 'ಕಿಸಾನ್ ರೈಲು' ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ಕೊಳೆಯಬಹುದಾದ ವಸ್ತುಗಳನ್ನು ಆದಷ್ಟು ಬೇಗ ಸಾಗಿಸಲಾಗುತ್ತದೆ. ರಾಷ್ಟ್ರೀಯ, ಅಂತಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉಡಾನ್ ಯೋಜನೆ ತಲುಪುವಂತೆ ಮಾಡಲಾಗುತ್ತದೆ ಎಂದರು.
Budget 2020 Live: ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್
2022ರೊಳಗೆ ಮೋದಿ ಸರ್ಕಾರವು ರೈತರಿಗೆ ದುಪ್ಪಟ್ಟು ಆದಾಯ ಬರುವ ವ್ಯವಸ್ಥೆಯನ್ನು ಮಾಡಿಕೊಡಲಿದೆ. ದೇಶದಲ್ಲಿ ಕೌಶಲ್ಯ, ಶಿಕ್ಷಣ ಹಾಗೂ ಕೃಷಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಸರ್ಕಾರವು ಮುಂದಿನ 2022ರೊಳಗೆ ರೈತರಿಗೆ ಹೆಚ್ಚಿನ ಆದಾಯ ಗಳಿಸುವ ಮಾರ್ಗವನ್ನು ತಿಳಿಸಿಕೊಡಲಿದೆ.

ರೈತರು ಬರಡು ಭೂಮಿ ಹೊಂದಿದ್ದರೆ ಅಲ್ಲಿ ಸೌರ ವಿದ್ಯುತ್ ಘಟಕವನ್ನು ಸರ್ಕಾರ ನಿರ್ಮಿಸಲಿದೆ. ಆ ಆದಾಯವನ್ನು ರೈತರಿಗೆ ಸರ್ಕಾರ ನೀಡಲಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications