ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ : ಸಂಸದರ ಸಂಬಳ 5 ವರ್ಷಕ್ಕೊಮ್ಮೆ ಏರಿಕೆ!

|
Google Oneindia Kannada News

ಬೆಂಗಳೂರು, ಫೆಬ್ರವರಿ 01 : ಹಣಕಾಸು ಸಚಿವ ಅರುಣ್ ಜೇಟ್ಲಿ 2018-19ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್‌ನಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರ ವೇತನವನ್ನು ಹೆಚ್ಚಳ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಗುರುವಾರ ಲೋಕಸಭೆಯಲ್ಲಿ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್‌ನಲ್ಲಿ ವೇತನ ಹೆಚ್ಚಳದ ಬಗ್ಗೆ ಘೋಷಣೆ ಮಾಡಲಾಗಿದೆ.

ಕೇಂದ್ರ ಆಯವ್ಯಯ 2018 LIVE : ಬಡವರ ಕೃಷಿಕರ ಬಜೆಟ್ಕೇಂದ್ರ ಆಯವ್ಯಯ 2018 LIVE : ಬಡವರ ಕೃಷಿಕರ ಬಜೆಟ್

ಜನಪ್ರತಿನಿಧಿಗಳ ವೇತನ ಹೆಚ್ಚಳದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಸಂಸದರ ವೇತನ ಪ್ರತಿ 5 ವರ್ಷಗಳಿಗೊಮ್ಮೆ ಹೆಚ್ಚಳವಾಗುವಂತೆ ಕಾನೂನಿನಲ್ಲಿ ಬದಲಾವಣೆ ತರಲಾಗುತ್ತದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ರಾಷ್ಟ್ರಪತಿ, ಉಪ ರಾಷ್ಟ್ರಪತಿ ರಾಜ್ಯಪಾಲರ ಮಾಸಿಕ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ. ರಾಷ್ಟ್ರಪತಿಗೆ 5 ಲಕ್ಷ, ಉಪ ರಾಷ್ಟ್ರಪತಿಗೆ 4 ಲಕ್ಷ ವೇತನ ಹೆಚ್ಚಳ ಮಾಡಲಾಗಿದೆ. ರಾಜ್ಯಪಾಲರಿಗೆ 3.5 ಲಕ್ಷ ವೇತನ ಹೆಚ್ಚಳ ಮಾಡಲಾಗಿದೆ.

ಸಂಬಳ ಎಷ್ಟಿತ್ತು? : ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸನ್ನು ಅನುಷ್ಠಾನ ಮಾಡಿದ ನಂತರ ವೇತನ ತಾರತಮ್ಯ ಉಂಟಾಗಿತ್ತು. ಕೇಂದ್ರ ಸಂಪುಟ ಕಾರ್ಯದರ್ಶಿ 2.5 ಲಕ್ಷ ವೇತನ ಪಡೆದರೆ, ರಾಷ್ಟ್ರಪತಿ 1.5 ಲಕ್ಷ ವೇತನ ಪಡೆಯುತ್ತಿದ್ದರು.

ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರು ಆಗಿರುತ್ತಾರೆ. ಅವರಿಗೆ ರಾಜ್ಯಸಭಾ ಸಭಾಪತಿ ಹೆಸರಿನಲ್ಲಿ ವೇತನ ಪಾವತಿಯಾಗುತ್ತದೆ. ವೇತನ 1.25 ಲಕ್ಷವಿತ್ತು. ಅದನ್ನು ಈಗ ಹೆಚ್ಚಿಸಲಾಗಿದೆ.

ರಾಜ್ಯಪಾಲರು 1.10 ಲಕ್ಷ ವೇತನ ಪಡೆಯುತ್ತಿದ್ದರು. ಆದರೆ, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು 2.25 ಲಕ್ಷ ವೇತನ ಪಡೆಯುತ್ತಿದ್ದರು. ಆದ್ದರಿಂದ, ಸರ್ಕಾರ ವೇತನವನ್ನು ಹೆಚ್ಚಳ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.

English summary
Finance Minister Arun Jaitley on February 01 presented 2018 Union Budget. In a budget Govt hiked Salary of President, Governor and proposing changes in refixing salaries of Members of Parliament. Automatic revision of salary of the MPs every 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X