RSS ಮುಂದೆ ಬಿಜೆಪಿ ಪಿಪಿಟಿ ಪ್ರೊಗ್ರೆಸ್ ಕಾರ್ಡ್: ಎಂಥಾ ನಾಚಿಕೆ!
ನವದೆಹಲಿ, ಸೆ 03: ರಾಜಧಾನಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮನ್ವಯ ಸಮಿತಿ ಸಭೆಯಲ್ಲಿ ಕೇಂದ್ರ ಸಚಿವರು, ಸಂಘದ ಸದಸ್ಯರಿಗೆ ಪಿಪಿಟಿ ಮೂಲಕ ತಮ್ಮ ಸಚಿವಾಲಯದ ಕೆಲಸಗಳನ್ನು ಪ್ರೊಗ್ರೆಸ್ ಕಾರ್ಡ್ ರೀತಿಯಲ್ಲಿ ವಿವರಿಸುತ್ತಿದ್ದಾರೆ.
ದೇಶಕ್ಕೆ ಇದೆಂಥಾ ನಾಚಿಕೆ ಪ್ರಸಂಗ, ಬಿಜೆಪಿಗೆ ಬಾಸ್ ಯಾರು? ಅವರನ್ನು ಅಧಿಕಾರಕ್ಕೆ ತಂದ ಮತದಾರನಾ ಅಥವಾ ಆರ್ ಎಸ್ ಎಸ್ ಸಂಘಟನೆಯೋ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವಿನ ಸಮನ್ವಯ ಸಮಿತಿ ಸಭೆ ಬುಧವಾರದಿಂದ ( ಸೆ 2) ಆರಂಭವಾಗಿದೆ. ಸಭೆಯಲ್ಲಿ ಕೇಂದ್ರದ ಪ್ರಮುಖ ಸಚಿವರು ಭಾಗವಹಿಸಿದ್ದಾರೆ.
ಬುಧವಾರ ನಡೆದ ಸಭೆಯಲ್ಲಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿ, ಬಿಜೆಪಿ ಅಧ್ಯಕ್ಷ ನಿತಿನ್ ಶಾ, ಸ್ಮೃತಿ ಇರಾನಿ ಸೇರಿದಂತೆ ಕೇಂದ್ರದ ಹಲವು ಸಚಿವರು ಭಾಗವಹಿಸಿದ್ದರು.
ಸಭೆಯಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ವಿಎಚ್ಪಿ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಪಾಲ್ಗೊಂಡಿದ್ದಾರೆ.
RSS ಮುಖಂಡರಿಗೆ ಕೇಂದ್ರ ಸಚಿವರ ಪಿಪಿಟಿ ಪ್ರೆಸಂಟೇಶನ್. ಮುಂದೆ ಓದಿ

ಪಿಪಿಟಿ ಪ್ರೆಸಂಟೇಶನ್
ಸಭೆಯಲ್ಲಿ ಭಾಗವಹಿಸಿರುವ ಎಸ್ ಎಸ್ ಮುಖಂಡರಿಗೆ ಬಿಜೆಪಿ ಸಚಿವರು ತಮ್ಮ ಸಚಿವಾಲಯದ ಕೆಲಸಗಳನ್ನು ಪಿಪಿಟಿ ಮೂಲಕ ಪ್ರೊಗ್ರೆಸ್ ಕಾರ್ಡ್ ರೀತಿಯಲ್ಲಿ ವಿವರಿಸುತ್ತಿದ್ದಾರೆ. ಜೊತೆಗೆ ಸಂಘದ ಮುಖಂಡರ ಪ್ರಶ್ನೆಗೂ ಉತ್ತರಿಸುತ್ತಿದ್ದಾರೆ. ಸಂಘದ ಮುಖಂಡರಿಂದ ಖಡಕ್ ಪ್ರಶ್ನೆಯೂ ಎದುರಾಗುತ್ತಿದೆ ಎನ್ನಲಾಗುತ್ತಿದೆ.

ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಸಮನ್ವಯ ಸಮಿತಿ ಸಭೆಗೆ ಬುಧವಾರ ಹಾಜರಾಗ ಬೇಕಿತ್ತು. ಆದರೆ ಕೊನೇ ಕ್ಷಣದಲ್ಲಿ ಪಾಲ್ಗೊಳ್ಳಲಿಲ್ಲ. ಮೋದಿ ಇಂದು ಸಭೆಗೆ ಹಾಜರಾಗುವ ಸಾಧ್ಯತೆಯಿದೆ. ಶುಕ್ರವಾರ ಮುಗಿಯುವ ಈ ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಆಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.
|
ಕಾಂಗ್ರೆಸ್ ಟೀಕೆ
ಬಿಜೆಪಿಗೆ ಜನತೆಗಿಂತ ಆರ್ ಎಸ್ ಎಸ್ ಮುಖ್ಯ. ಕೇಂದ್ರ ಸಚಿವರು ಆರ್ ಎಸ್ ಎಸ್ ಮುಖಂಡರಿಗೆ ರಿಪೋರ್ಟ್ ಮಾಡುತ್ತಿದ್ದಾರೆ. .

ಪ್ರವೀಣ್ ತೊಗಡಿಯಾ
ಕೇಂದ್ರ ಸಚಿವರು ಸಂಘದ ಸದಸ್ಯರ ಮುಂದೆ ತಮ್ಮ ಸಚಿವಾಲಯದ ಕಾರ್ಯಗಳನ್ನು ವಿವರಿಸುತ್ತಿದ್ದಾರೆ. ವಿಎಚ್ಪಿ ಮುಖಂಡ ಪ್ರವೀಣ್ ತೊಗಾಡಿಯಾ ಅಂತಹ ಮನಸ್ಥಿತಿಯುಳ್ಳ ವ್ಯಕ್ತಿಯ ಮುಂದೆ ಸಚಿವಾಲಯದ ಕಾರ್ಯಗಳನ್ನು ವಿವರಿಸುತ್ತಿರುವುದು ದೇಶಕ್ಕೇ ನಾಚಿಕೆಯಾಗುವ ವಿಷಯ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
| Array |
ಒನ್ ರ್ಯಾಂಕ್ ಒನ್ ಪೆನ್ಸನ್
ಒನ್ Rank ಒನ್ ಪೆನ್ಸನ್ ಸ್ಕೀಂ ಜಾರಿಗೆ ತನ್ನಿ ಎಂದು ಮೋದಿ ಸರಕಾರಕ್ಕೆ ಒತ್ತಡ ಹೇರುತ್ತಲೇ ಇದ್ದೇವೆ. ಈಗ ಆರ್ ಎಸ್ ಎಸ್, ಮೋದಿ ಸರಕಾರಕ್ಕೆ ಇದನ್ನು ಜಾರಿಗೆ ತರುವಂತೆ ತಾಕೀತು ಮಾಡುತ್ತಿದೆ.












Click it and Unblock the Notifications